ಯಡ್ತಾಡಿ :- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಮ್ಮ ಘಟಕದಿಂದ ದಿನಾಂಕ 15 ಆಗಸ್ಟ್ 2022ರ ಸೋಮವಾರದಂದು ಯಡ್ತಾಡಿ ಹಿಂದೂ ರುದ್ರಭೂಮಿಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಘಟಕದ ಅಧ್ಯಕ್ಷರಾದ ಶ್ರೀ ಸೋಮಪ್ಪ ಪೂಜಾರಿಯವರು ಹಾಗೂ ಸದಸ್ಯರನ್ನೊಳಗೊಂಡ ತಂಡ ಸ್ಮಶಾನದ ಕಟ್ಟಡದ ಮೇಲ್ಛಾವಣಿ, ಸಲಕರಣೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಘಟಕದ ದ್ವಿತೀಯ ಉಪಾಧ್ಯಕ್ಷರಾದ ಶ್ರೀ ಮಂಜುನಾಥ್ ಪೂಜಾರಿಯವರು ಹಿಂದೆ ಈ ಹಿಂದೂ ರುದ್ರಭೂಮಿಯನ್ನು ಮಾಡುವಾಗ ಪಟ್ಟ ಶ್ರಮವನ್ನು ನೆನೆದರು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
AUG 15, 2022 4.26 PM IST


