ಕೂಳೂರು:- ದಿನಾಂಕ 19 ಜೂನ್ 2022 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ “ಮುಗ್ದ ಮನಸ್ಸಿನ ಸಮ್ಮಿಲನ” ಕಾರ್ಯಕ್ರಮವು ಸರಕಾರಿ ಬಾಲಕರ ಬಾಲ ಮಂದಿರ ಬೊಂದೆಲ್ ಇಲ್ಲಿ ನಡೆಯಿತು. ಕಾರ್ಯಕ್ರಮವನ್ನು ಹೂವಿನ ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ರಾಜೇಶ್ ಬಂಟ್ವಾಳ್ ಮಕ್ಕಳ ಮನಸ್ಸು ಆವೆ ಮಣ್ಣಿನ ತರಹ ಅದಕ್ಕೆ ನಾವು ಯಾವ ರೀತಿ ಆಕಾರ ನೀಡುತ್ತೆವೋ ಅದೇ ರೂಪ ಪಡೆಯುತ್ತದೆ,ಮುಗ್ದ ಮನಸ್ಸಿನ ಮಕ್ಕಳ ಜೊತೆ ಒಂದು ದಿನ ಕಳೆಯುವ ವಿಶಿಷ್ಟ ಸಮಯ ಕಲ್ಪಿಸಿದಂತಹ ಕೂಳೂರು ಘಟಕಕ್ಕೆ ತಮ್ಮ ಧನ್ಯವಾದವನ್ನು ತಿಳಿಸಿದರು. ಇಂದು ಇಲ್ಲಿನ ಮಕ್ಕಳ ಮನ ಪರಿವರ್ತನೆಗೆ ಸ್ಪಂದಿಸುವ ಒಂದು ವಿಶೇಷ ದಿನವಾಗಿದೆ. ಸಸಿಗೆ ಯಾವ ರೀತಿ ನೀರು ಎರೆದು ಗೊಬ್ಬರ ಹಾಕಿ ಪೋಷಿಸುತ್ತೇವೋ ಅದೇ ರೀತಿ ಮಕ್ಕಳಿಗೂ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕು. ಇಲ್ಲಿನ ಮಕ್ಕಳು ಮುಂದೊಂದು ದಿನ ಉತ್ತಮ ನಾಗರಿಕರಾಗಿ ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ಬರಲಿ ಎಂದು ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಾಘವ ಪಡೀಲ್ ವೃತ್ತ ನಿರೀಕ್ಷಕರು, ಕಾವೂರು ಪೊಲೀಸ್ ಠಾಣೆ ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿ ಇಲ್ಲಿನ ಮಕ್ಕಳಿಗೆ ಸರಕಾರದಿಂದ ಉತ್ತಮ ವಿಧ್ಯಾಭ್ಯಾಸ ಸಿಗುತ್ತಿದೆ. ಉತ್ತಮ ವಾತಾವರಣ ಕೂಡ ಮಕ್ಕಳಿಗೆ ಕಲ್ಪಿಸಲಾಗಿದೆ. ಉತ್ತಮ ವಿಧ್ಯಾಭ್ಯಾಸ ಪಡೆದು ಸಮಾಜ ಮುಖಿ ಕಾರ್ಯಗಳನ್ನು ಮಾಡುವಂತೆ ತಿಳಿಸಿದರು. ಬಾಲಮಂದಿರದಲ್ಲಿ ಮಕ್ಕಳಿಗೆ ಸಿಗುವ ಸೌಲಭ್ಯಗಳ ಬಗ್ಗೆ ತಿಳಿಸಿದರು. ಈ ಮುಗ್ದ ಮಕ್ಕಳ ಜೊತೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶುಭ ಕೋರಿದರು.
ಬಾಲ ಮಂದಿರ ಬೊಂದೆಲ್ ಇಲ್ಲಿನ ಅಧೀಕ್ಷಕರಾದ ಶ್ರೀಧರ್ ಕೆ ಎನ್ ಮಾತನಾಡಿ ತನಗೂ ಯುವವಾಹಿನಿಗೂ ತುಂಬಾ ಹಳೆಯ ನಂಟು. ಯುವವಾಹಿನಿಯಿಂದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಆಗುತ್ತಿದೆ. ಹಿಂದಿನ ಕಾಲದ ಮಕ್ಕಳಲ್ಲಿ ಇದ್ದ ಮುಗ್ಧತೆ ಈಗಿನ ಆಧುನಿಕ ಯುಗದ ಮಕ್ಕಳಲ್ಲಿ ಕಾಣುತ್ತಿಲ್ಲ. ಕಾರ್ಯಕ್ರಮವನ್ನು ಸುಂದರವಾದ ಗಿಡಕ್ಕೆ ನೀರೆರೆದು ಉದ್ಘಾಟಿಸಿದ ಮಾದರಿ ಸಮಾಜಕ್ಕೆ ಉತ್ತಮ ಸಂದೇಶ ಎಂದು ಹೇಳಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕರಾದ ಶ್ರೀ ಚಂದ್ರಶೇಖರ ವಿ ಕರ್ಕೇರ ಮಾತನಾಡಿ ಮಕ್ಕಳ ಜೊತೆ ಮಕ್ಕಳಾಗಿ ಬೆರೆಯುವ ಒಂದು ವಿಶೇಷ ದಿನವಾಗಿದೆ. ವಿದ್ಯೆ ಉದ್ಯೋಗ ಸಂಪರ್ಕದ ನೆಲೆಯಲ್ಲಿ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವ ಕೂಳೂರು ಘಟಕವು ಸಮಾಜಮುಖಿ ಕೆಲಸಗಳಲ್ಲಿ ಮುಂಚೂಣಿಯಲ್ಲಿದೆ. ಇಲ್ಲಿನ ಮಕ್ಕಳು ಈ ಸಮಾಜದಲ್ಲಿ ಉತ್ತಮ ಹೆಸರನ್ನು ಪಡೆಯಲಿ ಎಂದು ಶುಭ ಹಾರೈಸಿದರು. ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀ ಲೋಹಿತ್ ಅಮೀನ್ ಮಾತನಾಡಿ ಇದು ಒಂದು ವಿಶಿಷ್ಟವಾದ ಕಾರ್ಯಕ್ರಮ, ಯುವವಾಹಿನಿ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕೊರೋನ ಸಂದರ್ಭದಲ್ಲಿ ವೆನ್ ಲಾಕ್ ಆಸ್ಪತ್ರೆಗೆ ಡಯಾಲಿಸಿಸ್ ಮಿಶಿನ್ ನೀಡಿರುವ ವಿಷಯವನ್ನು ಶ್ಲಾಘಿಸಿದರು. ಯುವವಾಹಿನಿ ಜೊತೆ ನಿರಂತರ ಜೊತೆಯಾಗುವುದಾಗಿ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ಕೂಳೂರು ಘಟಕವು 6 ವರುಷಗಳಲ್ಲಿ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬಂದಿದ್ದು, ವಿದ್ಯೆ , ಉದ್ಯೋಗ ಮತ್ತು ಸಂಪರ್ಕ ಎಂಬ ಧ್ಯೇಯದಡಿಯಲ್ಲಿ ವಿದ್ಯೆಗೆ ಒತ್ತು ಕೊಡುತ್ತಾ ಬಂದಿದೆ. ಸಮಾಜ ಸೇವೆ ನಮ್ಮ ಮುಖ್ಯ ಧ್ಯೇಯವಾಗಿದೆ. ಈ ಮುಗ್ದ ಮಕ್ಕಳು ತಮ್ಮ ತಪ್ಪುಗಳನ್ನು ತಿದ್ದಿ ಮುಂದೆ ಉತ್ತಮ ಪ್ರಜೆಯಾಗಿ ಸಮಾಜದಲ್ಲಿ ಉತ್ತಮ ಹೆಸರನ್ನು ಪಡೆಯಲಿ ಎಂದು ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಅತಿಥಿ ಗಣ್ಯರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಮಕ್ಕಳ ಹುಟ್ಟುಹಬ್ಬ ಆಚರಿಸುವ ಸಲುವಾಗಿ ಎಲ್ಲಾ ಮಕ್ಕಳಿಂದ ಕೇಕ್ ಕಟ್ ಮಾಡಿ ಮಕ್ಕಳಿಗೆ ಸಿಹಿ ತಿನ್ನಿಸಿ ಸಂಭ್ರಮಿಸಲಾಯಿತು. ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ಸುಮಾ ಶಿವು ಕೋಡಿಕಲ್, ಕಾರ್ಯಕ್ರಮದ ಸಂಚಾಲಕರು ಹಾಗೂ ದ್ವೀತಿಯ ಉಪಾಧ್ಯಕ್ಷರಾದ ಯಶವಂತ್ ಪೂಜಾರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ನಿಕಟ ಪೂರ್ವ ಅಧ್ಯಕ್ಷರಾದ ನಯನ ರಮೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ಮಾರ್ಗದರ್ಶಕರಾದ, ಜಯಾನಂದ ಅಮೀನ್, ಗಿರಿಧರ್ ಸನಿಲ್, ಚಂದಪ್ಪ ಸನಿಲ್ ಉಪಸ್ಥಿತರಿದ್ದರು.
ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ್ ಅಮೀನ್ ಮಟ್ಟು ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಹಾರೈಸಿದರು. ಮಕ್ಕಳಿಗೆ ಪರಿಸರ ಸಂರಕ್ಷಣೆಯ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು. ನಂತರ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು. ಅಲ್ಲಿನ ಮಕ್ಕಳ ಜೊತೆ ಮಕ್ಕಳಾಗಿ ಬೆರೆತು ಸದಸ್ಯರೆಲ್ಲರೂ ಮನರಂಜಿಸಿದರು.ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಮಧ್ಯಾಹ್ನದ ಭೋಜನದ ನಂತರ ಸಮಾರೋಪ ಕಾರ್ಯಕ್ರಮಕ್ಕೆ ಇತರ ಘಟಕಗಳ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಆಗಮಿಸಿದ್ದರು. ಘಟಕದ ಲೋಕೇಶ್ ಪೂಜಾರಿ ಪ್ರಾರ್ಥಿಸಿ, ಸಂಚಾಲಕರಾದ ಯಶವಂತ್ ಪೂಜಾರಿ ಧನ್ಯವಾದ ಸಲ್ಲಿಸಿ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಶೈಲೇಶ್ ಬೈಕಂಪಾಡಿ ಕಾರ್ಯಕ್ರಮ ನಿರೂಪಿಸಿದರು.