27-02-2026, 11:25 AM
ಸುರತ್ಕಲ್: ಸತ್ಯಧರ್ಮದ ತವರೂರು, ದೇಯಿ ಬೈದ್ಯೆತಿ ಹಾಗೂ ಕೋಟಿ-ಚೆನ್ನಯರ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ದಿನಾಂಕ 27-02-2026ರಂದು ನಡೆದ ವಾರ್ಷಿಕ ಜಾತ್ರಾ ಮಹೋತ್ಸವದಲ್ಲಿ ಯುವವಾಹಿನಿ (ರಿ.) ಸುರತ್ಕಲ್ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದರು. ಈ ಪುಣ್ಯ ಸಂದರ್ಭದಲ್ಲಿ ಸುರತ್ಕಲ್ ಘಟಕದ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಘಟಕದ ಸದಸ್ಯರು ಒಟ್ಟಾಗಿ ಶ್ರೀ ಕ್ಷೇತ್ರಕ್ಕೆ ಭೇಟಿ ನೀಡಿ, ದೈವ-ದೇವರುಗಳ ದರ್ಶನ ಪಡೆದರು. ಕ್ಷೇತ್ರದ ವತಿಯಿಂದ ನೀಡಲಾದ ಬ್ರಹ್ಮ ಬೈದರುಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯತೆ ಮೆರೆದರು. ವಾರ್ಷಿಕ ಜಾತ್ರೆಯ […]
Read More
27-02-2026, 11:22 AM
ಮಂಗಳೂರು/ಗೆಜ್ಜೆಗಿರಿ: ಪರಮಪೂಜ್ಯ ದೇಯಿ ಬೈದ್ಯೆತಿ ಹಾಗೂ ಕೋಟಿ-ಚೆನ್ನಯರ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ವಿಶೇಷ ಸ್ವಯಂ ಸೇವೆ ಮತ್ತು ಅನ್ನದಾನ ಸೇವಾ ಕಾರ್ಯಕ್ರಮ ಜರುಗಿತು. ಫೆಬ್ರವರಿ 27ರಂದು ನಡೆದ ಈ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಘಟಕದ ಸಕ್ರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ […]
Read More
26-02-2026, 11:27 AM
ಮಂಗಳೂರು/ಪುಣಚ: ಪುಣಚ ಸಮೀಪದ ಬಳಂತಿಮೊಗರು ಶ್ರೀ ಬ್ರಹ್ಮಬೈದರ್ಕಳ ಗರಡಿ (ರಿ.) ಇಲ್ಲಿ ಫೆಬ್ರವರಿ 26ರಂದು ಜರುಗಿದ ನೂತನ ಪ್ರತಿಷ್ಠಾ ಬ್ರಹ್ಮಕಲಸೋತ್ಸವದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಪದಾಧಿಕಾರಿಗಳು ಭಾಗವಹಿಸಿದರು. ಶ್ರೀ ಕ್ಷೇತ್ರದಲ್ಲಿ ನಡೆದ ವೈಭವದ ಬ್ರಹ್ಮಕಲಸೋತ್ಸವ ಹಾಗೂ ಧಾರ್ಮಿಕ ಸಭೆಯಲ್ಲಿ ಮಂಗಳೂರು ಘಟಕದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದು, ಬ್ರಹ್ಮ ಬೈದರುಗಳ ದರ್ಶನ ಪಡೆದರು. ಈ ಪವಿತ್ರ ಸಂದರ್ಭದಲ್ಲಿ ಕ್ಷೇತ್ರದ ಗಂಧ ಪ್ರಸಾದವನ್ನು ಸ್ವೀಕರಿಸಿ ಧನ್ಯತೆ ಅನುಭವಿಸಿದರು. ಈ ಸಂದರ್ಭದಲ್ಲಿ ಘಟಕದ ಸದಸ್ಯರು […]
Read More
25-02-2026, 12:59 PM
ಕುಳಾಯಿ: ಭಜನಾ ಮಂಗಳೋತ್ಸವಗಳು ಸಮಾಜದಲ್ಲಿ ಆಧ್ಯಾತ್ಮಿಕ ಚೈತನ್ಯವನ್ನು ತುಂಬುತ್ತವೆ. ಗುರುಗಳ ತತ್ವಗಳನ್ನು ಪ್ರಸಾರ ಮಾಡುವ ಇಂತಹ ಧಾರ್ಮಿಕ ಕಾರ್ಯಕ್ರಮಗಳಿಗೆ ಯುವವಾಹಿನಿಯು ಸದಾ ಬೆನ್ನೆಲುಬಾಗಿ ನಿಲ್ಲಲಿದೆ ಎಂದು ಸದಸ್ಯರು ಅಭಿಪ್ರಾಯಪಟ್ಟರು. ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ಕುಳಾಯಿ ಇದರ 43ನೇ ಭಜನಾ ಮಂಗಳೋತ್ಸವದ ಅಂಗವಾಗಿ ನಡೆದ ಸಮಾರಂಭದಲ್ಲಿ ಘಟಕದ ಪದಾಧಿಕಾರಿಗಳು ಭಾಗವಹಿಸಿ ಶುಭ ಹಾರೈಸಿದರು. ಬ್ರಹ್ಮ ಶ್ರೀ ನಾರಾಯಣ ಗುರು ಸಂಘ ಕುಳಾಯಿ ಇದರ 43ನೇ ವರ್ಷದ ಭಜನಾ ಮಂಗಳೋತ್ಸವದ ಪ್ರಯುಕ್ತ ಯುವವಾಹಿನಿ ಪಣಂಬೂರು-ಕುಳಾಯಿ ಘಟಕದ ವತಿಯಿಂದ […]
Read More
24-02-2026, 3:42 PM
ವಿಟ್ಲ: ದೈವಸ್ಥಾನಗಳ ಪುನರುತ್ಥಾನ ಮತ್ತು ಬ್ರಹ್ಮಕಲಶೋತ್ಸವದಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಧಾರ್ಮಿಕ ಜಾಗೃತಿ ಮೂಡಿಸುತ್ತವೆ. ಇಂತಹ ಪುಣ್ಯ ಕಾರ್ಯಗಳಲ್ಲಿ ಯುವಶಕ್ತಿ ಪಾಲ್ಗೊಳ್ಳುವುದು ಹೆಮ್ಮೆಯ ವಿಷಯ ಎಂದು ಸದಸ್ಯರು ತಿಳಿಸಿದರು. ಪುಣಚ ಬೋಳಂತಿಮೊಗರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಯುವವಾಹಿನಿ ವಿಟ್ಲ ಘಟಕದ ಸದಸ್ಯರು ಭಕ್ತಿಯಿಂದ ಭಾಗವಹಿಸಿ ಸೇವೆಯಲ್ಲಿ ತೊಡಗಿಸಿಕೊಂಡರು. ದಿನಾಂಕ 24-02-2026 ಮಂಗಳವಾರದಂದು ನೂತನ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಬೋಳಂತಿಮೊಗರು ಇಲ್ಲಿಯ ಬ್ರಹ್ಮಕಲಶೋತ್ಸವದ ಅಂಗವಾಗಿ ಯುವವಾಹಿನಿ ವಿಟ್ಲ ಘಟಕದ ವತಿಯಿಂದ ಶ್ರೀ ಕ್ಷೇತ್ರಕ್ಕೆ ಭಕ್ತಿಪೂರ್ವಕವಾಗಿ […]
Read More
15-02-2026, 10:30 AM
ಉಪ್ಪಿನಂಗಡಿ : ಯುವಜನರ ನಿರ್ಲಕ್ಷ್ಯ ಮನೋಭಾವದಿಂದ ರಸ್ತೆ ಅಪಘಾತಗಳು ಹೆಚ್ಚುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮತ್ತು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ನಮ್ಮನ್ನು ಮಾತ್ರವಲ್ಲದೆ ನಮ್ಮನ್ನು ನಿರೀಕ್ಷಿಸುತ್ತಿರುವ ಮನೆಯವರನ್ನೂ ರಕ್ಷಿಸುತ್ತದೆ. ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು ಯುವಜನತೆ ತಮ್ಮ ಹೆತ್ತವರಿಗೆ ನೀಡುವ ಅತಿ ದೊಡ್ಡ ಕೊಡುಗೆ ಎಂದು ಬಂಟ್ವಾಳ ಪ್ರಾದೇಶಿಕ ಸಾರಿಗೆ ಕಚೇರಿಯ ಹಿರಿಯ ಅಧಿಕಾರಿ ಚರಣ್ ಕೆ.ಎಸ್ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ನೇತೃತ್ವದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ 15.02.2026 […]
Read More
10-02-2026, 8:00 PM
ಕೊಣಾಜೆ, ಫೆ.10 : ಯುವವಾಹಿನಿ (ರಿ.) ಗ್ರಾಮ ಚಾವಡಿ ಕೊಣಾಜೆ ಘಟಕದ ಯುವ ಸಂಜೀವಿನಿ ವತಿಯಿಂದ 5ನೇ ಸೇವಾ ಕಾರ್ಯವಾಗಿ ಫೆಬ್ರವರಿ 10, 2026ರಂದು ಮಂಗಳವಾರ ಪುಣ್ಯಕೋಟಿ ನಗರ, ಕೈರಂಗಳದಲ್ಲಿರುವ ಅಮೃತ ಧಾರ ಗೋಶಾಲೆಯ ಅನಾಥ ಹಸುಗಳ ಪಾಲನೆಗಾಗಿ ಧನ ಸಹಾಯ ಹಸ್ತಾಂತರಿಸಲಾಯಿತು. ಒಂದು ಹಸುವಿನ ವಾರ್ಷಿಕ ಪಾಲನೆಗಾಗಿ ರೂ. 15,000/- ಮೊತ್ತವನ್ನು ಗೋ ಸಂರಕ್ಷಣಾ ಕೇಂದ್ರಕ್ಕೆ ನೀಡಲಾಯಿತು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಗೋಮಾತೆಗೆ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದುಕೊಂಡರು. ಧನ ಸಹಾಯ […]
Read More
10-02-2026, 11:00 AM
ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ಮಾನವೀಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿ, ಕಾರ್ಕಳ ತಾಲೂಕು ಏರ್ಲಪಾಡಿ ಗ್ರಾಮದ ಚೈತ್ರ–ಸಂತೋಷ್ ದಂಪತಿಗಳ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ರೂ. 20,000 ಧನಸಹಾಯವನ್ನು ನೀಡಲಾಯಿತು. ಮಗುವಿಗೆ ಶ್ರವಣ ಯಂತ್ರ ಅಳವಡಿಕೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಗಾಗಿ ಈ ನೆರವು ಒದಗಿಸಲಾಗಿದ್ದು, ದಿನಾಂಕ 10/02/2026 ರಂದು ಘಟಕದ ಪದಾಧಿಕಾರಿಗಳು ಮಗುವಿನ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಧನಸಹಾಯವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ರಾಕೇಶ್ ಅಮೀನ್ ಹಾಗೂ ಘಟಕದ […]
Read More
08-02-2026, 9:30 PM
ಪಡುಬಿದ್ರಿ : ದಿನಾಂಕ 08/02/2026 ರಂದು ಶ್ರೀ ಸಾರಂತಾಯ ಗರೋಡಿ ಉಲ್ಲಾಯ ದೈವಸ್ಥಾನ, ಸಸಿಹಿತ್ಲು ಇದರ ಬ್ರಹ್ಮಕಲಶೋತ್ಸವದ ಸಂದರ್ಭದಲ್ಲಿ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಸದಸ್ಯರು ಬೆಳಿಗ್ಗೆಯಿಂದ ಸಂಜೆಯವರೆಗೆ ಸ್ವಯಂಸೇವೆಯಲ್ಲಿ ತೊಡಗಿಸಿಕೊಂಡರು. ನೆರೆದಿದ್ದ ಭಕ್ತಜನರಿಗೆ ಅನ್ನ ಬಡಿಸುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ದೈವಸ್ಥಾನದ ಆಡಳಿತ ಮಂಡಳಿಯ ಪ್ರಶಂಸೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ದೇಣಿಗೆಯನ್ನು ಸಂಗ್ರಹಿಸಿ ದೇವಸ್ಥಾನಕ್ಕೆ ಒಪ್ಪಿಸಲಾಯಿತು.
Read More
06-02-2026, 9:00 PM
ಕೊಲ್ಯ : ದಿನಾಂಕ 03-02-2026ರಿಂದ 06-02-2026ರವರೆಗೆ ಉಮಾಪುರಿ ಕಾಪಿಕಾಡಿನ ಶ್ರೀ ಉಮಾಮಹೇಶ್ವರಿ ದೇವಸ್ಥಾನದಲ್ಲಿ ಜರಗಿದ ಅಷ್ಟಬಂಧ ಬ್ರಹ್ಮಕಲಶೋತ್ಸವ ಮಹೋತ್ಸವದಲ್ಲಿ ಯುವವಾಹಿನಿ (ರಿ.) ಕೊಲ್ಯ ಘಟಕದ ಸದಸ್ಯರು ಶ್ರದ್ಧಾ–ಭಕ್ತಿಯಿಂದ ಸ್ವಯಂಸೇವೆಯಲ್ಲಿ ತೊಡಗಿ ಭಕ್ತರ ಸೇವೆಯಲ್ಲಿ ನಿರತರಾದರು. ಧಾರ್ಮಿಕ ಭಾವನೆ ಮತ್ತು ಸೇವಾ ಮನೋಭಾವದಿಂದ ದೇವಸ್ಥಾನದ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು, ಶ್ರೀದೇವಿಯ ಸಾನಿಧ್ಯದಲ್ಲಿ ಕೃತಾರ್ಥರಾದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ನಿತಿನ್ ಕರ್ಕೇರ ಅವರು ಸ್ವಯಂಸೇವೆಯಲ್ಲಿ ಭಾಗವಹಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆ ಸಲ್ಲಿಸಿ, ಅವರ ಸಹಕಾರ ಮತ್ತು ಸಮರ್ಪಣಾ ಮನೋಭಾವಕ್ಕೆ […]
Read More