ಮಂಗಳೂರು: ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ, ಉಜ್ಜೋಡಿ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ₹50,000 ದೇಣಿಗೆ ನೀಡಲಾಯಿತು.

ದೇಣಿಗೆಯ ಚೆಕ್ ಅನ್ನು ದೈವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ದೈವಸ್ಥಾನದ ಅಧ್ಯಕ್ಷರು, ಜೀರ್ಣೋದ್ಧಾರ ಕಾರ್ಯಕ್ಕೆ ಯುವವಾಹಿನಿ ಕಂಕನಾಡಿ ಘಟಕವು ಈ ಹಿಂದೆ ₹50,000 ದೇಣಿಗೆ ನೀಡಿದ್ದು, ಇದೀಗ ಮತ್ತೊಮ್ಮೆ ₹50,000 ನೀಡುವ ಮೂಲಕ ಒಟ್ಟು ₹1 ಲಕ್ಷ ಸಹಕಾರ ನೀಡಿದೆ. ಯುವವಾಹಿನಿಯ ಈ ಸಮಾಜಮುಖಿ ಕಾರ್ಯ ಶ್ಲಾಘನೀಯವಾಗಿದ್ದು, ಕಂಕನಾಡಿ ಘಟಕವು ಇನ್ನಷ್ಟು ಉನ್ನತಿಗೆ ಬೆಳೆಯಲಿ ಎಂದು ಶುಭ ಹಾರೈಸಿದರು. ದೈವಸ್ಥಾನದ ಅಭಿವೃದ್ಧಿ ಕಾರ್ಯಗಳಲ್ಲಿ ಕಂಕನಾಡಿ ಘಟಕದ ಸಹಕಾರ ಸದಾ ಇರಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕಂಕನಾಡಿ ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


