ವೇಣೂರು, ಆಗಸ್ಟ್ 10: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ‘ಆಸರೆ’ ಯೋಜನೆಯ ಸಹಾಯಹಸ್ತ ಕಾರ್ಯಕ್ರಮದ ಅಂಗವಾಗಿ ಗುಂಡೂರಿ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ನಿಕ್ಷಿತ್ ಗುಂಡೂರಿ ಅವರಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಯುವವಾಹಿನಿ ವೇಣೂರು ಘಟಕವು ಹಮ್ಮಿಕೊಂಡಿರುವ ‘ಆಸರೆ’ ಯೋಜನೆಯಡಿ ಈ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ದಕ್ಷಾ ಎ. ಅಂಬಲ ಅಂಡಿಂಜೆ, ಕೋಶಾಧಿಕಾರಿ ಸತೀಶ್ ಚಿಗುರು, ಉಪಾಧ್ಯಕ್ಷ ಸತೀಶ್ ಉಜಿರ್ದಡ್ಡ, ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ನಿತೀಶ್ ಹೆಚ್., ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಮಾಜಿ ಅಧ್ಯಕ್ಷರಾದ ನವೀನ್ ಕುಮಾರ್ ಪಚ್ಚೇರಿ ಹಾಗೂ ಅರುಣ್ ಕುಮಾರ್ ಮೂಡುಕೋಡಿ, ಕ್ರೀಡಾ ನಿರ್ದೇಶಕ ಸಂತೋಷ್ ಕುಮಾರ್ ಮಂಜಲೋಕ್ಕು, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕೋಟ್ಯಾನ್ ನಾರಾವಿ ಹಾಗೂ ಮಹಿಳಾ ನಿರ್ದೇಶಕಿ ಗುಣವತಿ ಡಿ. ಕುಕ್ಕೇಡಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ಒದಗಿಸುವ ಮೂಲಕ ಅವರ ಭವಿಷ್ಯಕ್ಕೆ ಭದ್ರ ಬುನಾದಿ ಕಲ್ಪಿಸುವ ಯುವವಾಹಿನಿಯ ಇಂತಹ ಸಮಾಜಮುಖಿ ಸೇವಾ ಕಾರ್ಯಗಳು ಶ್ಲಾಘನೀಯವಾಗಿವೆ.


