ವೇಣೂರು, ಆಗಸ್ಟ್ 10: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಛೇರಿ ನಿರ್ಮಾಣಕ್ಕೆ ಸಹಕಾರ ನೀಡುವ ಉದ್ದೇಶದಿಂದ ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ ದ್ವಾರ ಹಾಗೂ ದಾರಂದ ಬಾಗಿಲು ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ವೇಣೂರು ಬಿಲ್ಲವ ಸಂಘದಲ್ಲಿ ನಡೆಯಿತು.

ಕೇಂದ್ರ ಸಮಿತಿಯ ನೂತನ ಕಛೇರಿಯ ಪೂರ್ವ ಪ್ರಧಾನ ದ್ವಾರ ಬಾಗಿಲನ್ನು ಶ್ರೀಮತಿ ವೀರಮ್ಮ ಸಂಜೀವ ಸಾಲ್ಯಾನ್ ಹಾಗೂ ಮಕ್ಕಳು, ಸನ್ನಿಧಿ ವುಡ್ ಇಂಡಸ್ಟ್ರೀಸ್ ಮತ್ತು ‘ಸನ್ನಿಧಿ’ ಪ್ಯಾಲೇಸ್, ಡೊಂಕುಬೆಟ್ಟು, ನಾರಾವಿ ಇವರ ವತಿಯಿಂದ ಕೊಡುಗೆಯಾಗಿ ನೀಡಲಾಗುತ್ತಿದೆ. ಇದೇ ಸಂದರ್ಭದಲ್ಲಿ ಉತ್ತರದ ದಾರಂದ ಬಾಗಿಲನ್ನು ಶ್ರೀಮತಿ ಹಾಗೂ ಶ್ರೀ ಮಂಜಪ್ಪ ಪೂಜಾರಿ, ಮಾಜಿ ಅಧ್ಯಕ್ಷರು, ಕೊಕ್ರಾಡಿ ಬಿಲ್ಲವ ಸಂಘ ಇವರ ವತಿಯಿಂದ ಕೊಡುಗೆಯಾಗಿ ನೀಡಲಾಗುತ್ತಿದೆ.
ಈ ಎರಡೂ ಕೊಡುಗೆಗಳ ಸಮರ್ಪಣಾ ಕಾರ್ಯಕ್ರಮವು ಆಗಸ್ಟ್ 19ರಂದು ‘ಸನ್ನಿಧಿ’ ಪ್ಯಾಲೇಸ್, ಡೊಂಕುಬೆಟ್ಟು, ನಾರಾವಿಯಲ್ಲಿ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಆಗಸ್ಟ್ 10ರಂದು ವೇಣೂರು ಬಿಲ್ಲವ ಸಂಘದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ದಕ್ಷಾ ಎ. ಅಂಬಲ ಅಂಡಿಂಜೆ, ಕೋಶಾಧಿಕಾರಿ ಸತೀಶ್ ಚಿಗುರು, ಉಪಾಧ್ಯಕ್ಷ ಸತೀಶ್ ಉಜಿರ್ದಡ್ಡ, ಯುವವಾಹಿನಿ ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ನಿತೀಶ್ ಹೆಚ್., ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ, ಮಾಜಿ ಅಧ್ಯಕ್ಷರಾದ ನವೀನ್ ಕುಮಾರ್ ಪಚ್ಚೇರಿ ಹಾಗೂ ಅರುಣ್ ಕುಮಾರ್ ಮೂಡುಕೋಡಿ, ಕ್ರೀಡಾ ನಿರ್ದೇಶಕ ಸಂತೋಷ್ ಕುಮಾರ್ ಮಂಜಲೋಕ್ಕು, ಸಂಘಟನಾ ಕಾರ್ಯದರ್ಶಿ ಪ್ರವೀಣ್ ಕೋಟ್ಯಾನ್ ನಾರಾವಿ ಹಾಗೂ ಮಹಿಳಾ ನಿರ್ದೇಶಕಿ ಗುಣವತಿ ಡಿ. ಕುಕ್ಕೇಡಿ ಉಪಸ್ಥಿತರಿದ್ದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಛೇರಿ ನಿರ್ಮಾಣಕ್ಕೆ ಸಮಾಜದ ವಿವಿಧ ವರ್ಗಗಳಿಂದ ದೊರೆಯುತ್ತಿರುವ ಸಹಕಾರದ ಭಾಗವಾಗಿ ಈ ಕೊಡುಗೆಗಳು ಸಲ್ಲಿಕೆಯಾಗುತ್ತಿದ್ದು, ಸಂಘಟನೆಯ ಮೂಲಸೌಕರ್ಯ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆಯಾಗಿದೆ.


