
20-10-2026, 6:00 PM
ಉಡುಪಿ ಅ 20 : ಯುವವಾಹಿನಿ (ರಿ.) ಉಡುಪಿ ಘಟಕವು ನವರಾತ್ರಿ ಮಹೋತ್ಸವದ ಅಂಗವಾಗಿ ಅಕ್ಟೋಬರ್ 20ರಂದು ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಸ್ವಯಂಸೇವೆ, ಕಲಾಸೇವೆ ಹಾಗೂ ಶೈಕ್ಷಣಿಕ ನೆರವಿನ ಮೂಲಕ ಸಮಾಜಮುಖಿ ಕಾರ್ಯಗಳನ್ನು ನೆರವೇರಿಸಿತು. ಬೆಳಿಗ್ಗೆ 8.30ರಿಂದ ಆರಂಭಗೊಂಡ ಸ್ವಯಂಸೇವಾ ಕಾರ್ಯದಲ್ಲಿ ಘಟಕದ 65ಕ್ಕೂ ಅಧಿಕ ಸದಸ್ಯರು ಉತ್ಸಾಹದಿಂದ ಪಾಲ್ಗೊಂಡು, ಕ್ಷೇತ್ರದಲ್ಲಿ ತಮಗೆ ವಹಿಸಲಾದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು. ಕ್ಷೇತ್ರದಲ್ಲಿ ನಡೆಯುವ ಅನ್ನಸಂತರ್ಪಣೆಗೆ ಘಟಕದ ವತಿಯಿಂದ ₹15,000 ದೇಣಿಗೆಯನ್ನು ಸಮರ್ಪಿಸಲಾಯಿತು. ‘ಮಾಣಿ ಬಾಲೆ ಮಾಯಾಂದಲ್’ […]
Read More

27-09-2026, 1:00 PM
ಮಂಗಳೂರು, ಸೆ. 27: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುದೇವರ 172ನೇ ಜನ್ಮದಿನಾಚರಣೆಯ ಅಂಗವಾಗಿ ದೇರಳಕಟ್ಟೆಯ ಸೇವಾಭಾವ ಚಾರಿಟೇಬಲ್ ಟ್ರಸ್ಟ್ಗೆ ದ್ವಿತೀಯ ಬಾರಿಗೆ ಭೇಟಿ ನೀಡಿ, ಆಶ್ರಮದ ಹಿರಿಯರಿಗೆ ದಿನದ ಊಟದ ವ್ಯವಸ್ಥೆ ಕಲ್ಪಿಸಲಾಯಿತು.ನಾರಾಯಣ ಗುರುದೇವರ ಸಮಾನತೆ, ಮಾನವೀಯತೆ ಹಾಗೂ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ಒಳಗೊಂಡ ಸೇವಾ ತತ್ವವನ್ನು ಕಾರ್ಯರೂಪಕ್ಕೆ ತರುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಗುರುಚರಣಗಳಿಗೆ ಸಮರ್ಪಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷೆ ಗೀತಾ ವಸಂತ್, ಕಾರ್ಯದರ್ಶಿ ವಂದೀಪ್, ನಾರಾಯಣಗುರು ತತ್ವ […]
Read More

06-09-2026, 8:00 PM
ಮಾಣಿ, ಸೆ. 6: ಯುವವಾಹಿನಿ (ರಿ.) ಮಾಣಿ ಘಟಕದ “ಸೇವಾಸ್ಪರ್ಶ” ಕಾರ್ಯಕ್ರಮದ 4ನೇ ಹಂತದ ಸೇವಾ ಕಾರ್ಯದ ಅಂಗವಾಗಿ ಪೆರಾಜೆ ಗ್ರಾಮದ ಗೀತಾ ರಮೇಶ್ ಅವರ ಕುಟುಂಬಕ್ಕೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಕುಟುಂಬದ ಯಜಮಾನರು ಕೆಲಸ ಮಾಡಲು ಅಸಮರ್ಥರಾಗಿದ್ದು, ಒಬ್ಬ ಮಗ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ವಯೋವೃದ್ಧ ತಾಯಿ ದುಡಿದು ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ […]
Read More

06-09-2026, 1:00 PM
ಯುವವಾಹಿನಿ(ರಿ.)ಮೂಡುಬಿದಿರೆ ಘಟಕವು ದಾನಿಗಳ ಸಹಕಾರದೊಂದಿಗೆ ಮೂಡುಮಾರ್ನಾಡ್ನಲ್ಲಿ ಅಶಕ್ತ ಕುಟುಂಬಕ್ಕಾಗಿ ಸುಮಾರು ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಸೆ. 6ರಂದು ಸುಮಿತ್ರ ವಿಶ್ವನಾಥ್ ದಂಪತಿಗೆ ಹಸ್ತಾಂತರಿಸಿತು ದೀಪ ಬೆಳಗಿಸುವ ಮೂಲಕ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಶಕ್ತ ಕುಟುಂಬವೊಂದಕ್ಕೆ ನೂತನ ಮನೆ ನಿರ್ಮಿಸಿಕೊಟ್ಟು ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡುವ ಮೂಲಕ ಯುವವಾಹಿನಿ ಕೈಗೊಂಡಿರುವ ಸಮಾಜಮುಖಿ ಹಾಗೂ ರಚನಾತ್ಮಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸರ್ಕಾರದ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೈಲು ತಾರಾನಾಥ್ ಪೂಜಾರಿ […]
Read More

19-08-2026, 6:00 PM
ವೇಣೂರು, ಆಗಸ್ಟ್ 19:ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಯುವವಾಹಿನಿಯ ಆಡಳಿತ ಕಚೇರಿಗೆ ದಾರಂದ ಬಾಗಿಲು ಸಮರ್ಪಿಸುವ ಕಾರ್ಯಕ್ರಮವು ನಾರಾವಿಯ ಸನ್ನಿಧಿ ಪ್ಯಾಲೇಸ್ನಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅವರು, ಯುವವಾಹಿನಿಯು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ನಡೆಸುತ್ತಿದ್ದು, ಸಂಘಟನೆಯ ಬಲವರ್ಧನೆ ಹಾಗೂ ಸಮಾಜದ ಅಭಿವೃದ್ಧಿಗೆ ಇಂತಹ ಸಮಾಜಮುಖಿ ಕೊಡುಗೆಗಳು ಮಹತ್ವದ್ದಾಗಿವೆ. ಆಡಳಿತ ಕಚೇರಿಗೆ ಕೊಡುಗೆ ನೀಡಿದ ದಾನಿಗಳ ಹೆಸರು ಶಾಶ್ವತವಾಗಿ ನೆನಪಿನಲ್ಲಿ […]
Read More

19-08-2026, 4:25 PM
ಮಂಗಳೂರು: ಶ್ರೀ ಬ್ರಹ್ಮ ಮುಗೇರ ಮಹಾಂಕಾಳಿ ದೈವಸ್ಥಾನ, ಉಜ್ಜೋಡಿ ಇದರ ಜೀರ್ಣೋದ್ಧಾರ ಕಾರ್ಯಕ್ಕೆ ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ₹50,000 ದೇಣಿಗೆ ನೀಡಲಾಯಿತು. ದೇಣಿಗೆಯ ಚೆಕ್ ಅನ್ನು ದೈವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಮ್ಮುಖದಲ್ಲಿ ಯುವವಾಹಿನಿ ಕಂಕನಾಡಿ ಘಟಕದ ವತಿಯಿಂದ ಹಸ್ತಾಂತರಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ದೈವಸ್ಥಾನದ ಅಧ್ಯಕ್ಷರು, ಜೀರ್ಣೋದ್ಧಾರ ಕಾರ್ಯಕ್ಕೆ ಯುವವಾಹಿನಿ ಕಂಕನಾಡಿ ಘಟಕವು ಈ ಹಿಂದೆ ₹50,000 ದೇಣಿಗೆ ನೀಡಿದ್ದು, ಇದೀಗ ಮತ್ತೊಮ್ಮೆ ₹50,000 ನೀಡುವ ಮೂಲಕ ಒಟ್ಟು ₹1 ಲಕ್ಷ ಸಹಕಾರ ನೀಡಿದೆ. […]
Read More

16-08-2026, 6:00 PM
ಮಂಗಳೂರು, ಆಗಸ್ಟ್ 16: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಸೇವಾನಿಧಿ ಯೋಜನೆಯಡಿ ಅನಾರೋಗ್ಯದಿಂದ ಸಂಕಷ್ಟದಲ್ಲಿರುವ ಎರಡು ಕುಟುಂಬಗಳಿಗೆ ಒಟ್ಟು ₹20,000 ಧನಸಹಾಯ ನೀಡಲಾಯಿತು. 29ನೇ ಸೇವಾನಿಧಿ ಯೋಜನೆಯ ಅಂಗವಾಗಿ ಸಜಿಪ ನಿವಾಸಿ, ಅನಾರೋಗ್ಯದಿಂದ ತೀವ್ರ ತೊಂದರೆಗೀಡಾದ 8 ವರ್ಷದ ತಾಶ್ವಿ ಅವರ ಕುಟುಂಬಕ್ಕೆ ₹10,000 ಹಾಗೂ 30ನೇ ಸೇವಾನಿಧಿ ಯೋಜನೆಯ ಅಂಗವಾಗಿ ಕಾಸರಗೋಡು ಜೋಡುಕಲ್ಲು ನಿವಾಸಿ ದುರ್ಗಾ ಪ್ರಸಾದ್ ಅವರ ಕುಟುಂಬಕ್ಕೆ ₹10,000 ಧನಸಹಾಯ ನೀಡಲಾಯಿತು. ಯುವವಾಹಿನಿ (ರಿ.) ಕೂಳೂರು ಘಟಕದ ಅಧ್ಯಕ್ಷೆ ಗೀತಾ ವಸಂತ್ […]
Read More

10-08-2026, 9:00 PM
ವೇಣೂರು, ಆಗಸ್ಟ್ 10: ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ‘ಆಸರೆ’ ಯೋಜನೆಯ ಸಹಾಯಹಸ್ತ ಕಾರ್ಯಕ್ರಮದ ಅಂಗವಾಗಿ ಗುಂಡೂರಿ ಗ್ರಾಮದ ಬಡ ಕುಟುಂಬದ ವಿದ್ಯಾರ್ಥಿ ನಿಕ್ಷಿತ್ ಗುಂಡೂರಿ ಅವರಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು. ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಯುವವಾಹಿನಿ ವೇಣೂರು ಘಟಕವು ಹಮ್ಮಿಕೊಂಡಿರುವ ‘ಆಸರೆ’ ಯೋಜನೆಯಡಿ ಈ ನೆರವು ನೀಡಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ವೇಣೂರು ಘಟಕದ ಅಧ್ಯಕ್ಷ ಪ್ರಕಾಶ್ ಕೋಟ್ಯಾನ್ ನಾರಾವಿ, ಕಾರ್ಯದರ್ಶಿ ದಕ್ಷಾ ಎ. ಅಂಬಲ ಅಂಡಿಂಜೆ, ಕೋಶಾಧಿಕಾರಿ […]
Read More

10-08-2026, 6:00 PM
ವೇಣೂರು, ಆಗಸ್ಟ್ 10: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನೂತನ ಆಡಳಿತ ಕಛೇರಿ ನಿರ್ಮಾಣಕ್ಕೆ ಸಹಕಾರ ನೀಡುವ ಉದ್ದೇಶದಿಂದ ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ಆಯೋಜಿಸಲಾಗುತ್ತಿರುವ ದ್ವಾರ ಹಾಗೂ ದಾರಂದ ಬಾಗಿಲು ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಸಮಾರಂಭವು ವೇಣೂರು ಬಿಲ್ಲವ ಸಂಘದಲ್ಲಿ ನಡೆಯಿತು. ಕೇಂದ್ರ ಸಮಿತಿಯ ನೂತನ ಕಛೇರಿಯ ಪೂರ್ವ ಪ್ರಧಾನ ದ್ವಾರ ಬಾಗಿಲನ್ನು ಶ್ರೀಮತಿ ವೀರಮ್ಮ ಸಂಜೀವ ಸಾಲ್ಯಾನ್ ಹಾಗೂ ಮಕ್ಕಳು, ಸನ್ನಿಧಿ ವುಡ್ ಇಂಡಸ್ಟ್ರೀಸ್ ಮತ್ತು ‘ಸನ್ನಿಧಿ’ ಪ್ಯಾಲೇಸ್, ಡೊಂಕುಬೆಟ್ಟು, […]
Read More

09-08-2026, 4:00 PM
ಮಾಣಿ ಅಗಸ್ಟ್ 09: ಮಾಣಿ ಪರಿಸರದ ಜನರ ಬಹುಕಾಲದ ನಿರೀಕ್ಷೆಯಾಗಿದ್ದ ಆಂಬ್ಯುಲೆನ್ಸ್ ಸೇವೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮದ ವೇದಿಕೆಯಲ್ಲಿ ನೆರವೇರಿತು.ಜನರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಲಾಗುತ್ತಿರುವ ಈ ‘ಸೇವಾ ಸ್ಪರ್ಶ–ಆಂಬ್ಯುಲೆನ್ಸ್ ಸೇವೆ’ ಮಾಣಿ ಹಾಗೂ ಸುತ್ತಮುತ್ತಲಿನ ಜನರಿಗೆ ಮಹತ್ವದ ಆರೋಗ್ಯ ಸೇವಾ ಸೌಲಭ್ಯವಾಗಲಿದೆ. ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಮಾನವೀಯ ಕಾಳಜಿಯೊಂದಿಗೆ ಸಮಾಜಮುಖಿ ಹೆಜ್ಜೆ ಇಟ್ಟಿರುವ ಯುವವಾಹಿನಿ (ರಿ.) ಮಾಣಿ ಘಟಕದ […]
Read More