21-06-2019, 4:33 PM
ಬಜಪೆ : ಯುವವಾಹಿನಿ ಬಜಪೆ ಘಟಕದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಚರಿಸಲಾಯಿತು. ಪತಂಜಲಿ ಯೋಗ ಶಿಕ್ಷಣ ಸಮಿತಿಯು ಒಂದು ಘಂಟೆಗಳ ಕಾಲ ಯೋಗ ತರಗತಿಯನ್ನು ನಡೆಸಿಕೊಟ್ಟಿತ್ತು. ಈ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕರ್ನಾಟಕ ನೇತ್ರಾವತಿ ವಲಯ ಇದರ ಜಿಲ್ಲಾ ಸಹಸಂಚಾಲಕರಾದ ಅಶೋಕ್ ಹಾಗೂ ಕರ್ನಾಟಕ ನೇತ್ರಾವತಿ ವಲಯ ಇದರ ಮಹಾಲಿಂಗೇಶ್ವರ ವಲಯದ ಸಂಚಾಲಕರಾದ ದಾಮೋದರ ಇವರು ಯೋಗದ […]
Read More
21-06-2019, 4:00 PM
ಉಡುಪಿ : ಯುವವಾಹಿನಿಯ ಉಡುಪಿ ಘಟಕದ ವತಿಯಿಂದ 5 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಘಟಕದ ಸಭಾಂಗಣದಲ್ಲಿ ದಿನಾಂಕ 21/06/2019 ರಂದು ನಡೆಯಿತು. ಯುವವಾಹಿನಿಯ ಉಡುಪಿ ಘಟಕದ ಅಧ್ಯಕ್ಷರಾದ ನಾರಾಯಣ್ ಬಿ. ಎಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಪತಾಂಜಲಿ ಹರಿದ್ವಾರ ಯೋಗ ಶಿಬಿರ” ಉಡುಪಿ ಇದರ ಯೋಗ ಶಿಕ್ಷಕಿ ಅನಿತಾ ಹಾಗೂ ಅವರ ಪತಿ ಯೋಗ ಶಿಕ್ಷಕ ತಿಪ್ಪೆಶ್ ರವರು ಯೋಗದ ಮಹತ್ವವನ್ನು ತಿಳಿಸಿದರು ಹಾಗೂ ಎಲ್ಲಾ ಸದಸ್ಯರಿಗೂ ತರಬೇತಿ ನೀಡಿದರು. ಯೋಗ ಗುರು […]
Read More
16-06-2019, 2:57 PM
ಬಂಟ್ವಾಳ : ಬಿರುವೆರ್ ಕುಡ್ಲ ( ರಿ.) ಬಂಟ್ವಾಳ ಘಟಕ ಮತ್ತು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಯೂನಿವರ್ಸಿಟಿ ಮತ್ತು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ನಡೆಯುವ ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ದಿನಾಂಕ 16-06-2019ನೇ ಆದಿತ್ಯವಾರದಂದು ನಾವೂರ ಪ್ರೌಢಶಾಲೆಯಲ್ಲಿ ನಡೆಯಿತು. ಬಿರ್ವೆರ್ ಕುಡ್ಲ (ರಿ) ಬಂಟ್ವಾಳ […]
Read More
10-05-2019, 12:18 PM
ಬೆಂಗಳೂರು :ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಕಾರ್ಯಾಗಾರ ದಿನಾಂಕ 19-05-2019 ರಂದು ಬೆಂಗಳೂರು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಆರೋಗ್ಯವೇ ಭಾಗ್ಯ -2019 ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ವಹಿಸಿದ್ದರು ಹಾಗೂ ಕಾರ್ಯಕ್ರಮದ ಮುಂದಾಳತ್ವವನ್ನು ಆರೋಗ್ಯ ನಿರ್ದೇಶಕರಾದ ಮಿತೇಶ್ ಪೂಜಾರಿ ನಿರ್ವಹಿಸಿದರು.ಈ ಸಂದರ್ಬದಲ್ಲಿ ಘಟಕದ ಕಾರ್ಯದರ್ಶಿಯವರಾದ ರಾಘವೇಂದ್ರ ಪೂಜಾರಿ , ಉಪಾಧ್ಯಕ್ಷರಾದ ಕಿಶನ್ ಪೂಜಾರಿ, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು. […]
Read More
22-04-2019, 3:24 AM
ಕೂಳೂರು : ದಿನಾಂಕ 22/04/2019 ಸೋಮವಾರ ಯುವವಾಹಿನಿ(ರಿ)ಕೂಳೂರು ಘಟಕದ ವತಿಯಿಂದ ಯುವವಾಹಿನಿ(ರಿ) ಮೂಡಬಿದ್ರಿ ಘಟಕದ ಸದಸ್ಯರಾದ ಅಶ್ವಿನಿ ಇವರ ಪತಿ ರಾಜೇಶ್ ಪೂಜಾರಿ ಇವರ 2 ಕಿಡ್ನಿಗಳು ವಿಫಲವಾಗಿ ಚಿಕಿತ್ಸೆಗಾಗಿ ನೆರವು ಕೋರಿದ್ದ ಸಲುವಾಗಿ ಯುವವಾಹಿನಿ(ರಿ) ಕೂಳೂರು ಘಟಕದ ಸದಸ್ಯರು ವೈಯಕ್ತಿವಾಗಿ 15 ಸಾವಿರ ರೂಪಾಯಿ ಮೊತ್ತ ಹಾಗೂ ಕೂಳೂರು ನಾರಾಯಣ ಗುರು ಮoದಿರದ ಸದಸ್ಯರೆಲ್ಲರು ಸೇರಿ ಒಟ್ಟಾಗಿ 40 ಸಾವಿರ ರೂಪಾಯಿಯನ್ನು ಅವರ ತಾಯಿ ಉಮಾವತಿ ಇವರಿಗೆ ಹಸ್ತಾಂತರಿಸಲಾಯಿತು . ಈ ಸಂದರ್ಭದಲ್ಲಿ ಕೂಳೂರು ಘಟಕದ […]
Read More
16-04-2019, 2:46 PM
ಉಪ್ಪಿನಂಗಡಿ : ಉಪ್ಪಿನಂಗಡಿ ಯುವವಾಹಿನಿ ಘಟಕ ಆರಂಭವಾದ ದಿನಗಳಲ್ಲಿ ಘಟಕದ ಬೆಳವಣಿಗೆಗೆ ಶ್ರಮಿಸಿದ ನೆಲ್ಯಾಡಿಯ ರಾಘವ ಪೂಜಾರಿ ಇವರ ಆರೋಗ್ಯ ಚಿಂತಾಜನಕವಾಗಿದ್ದು ತಿಂಗಳಿಗೆ ಸುಮಾರು 75000 ಗಳಷ್ಟು ಖರ್ಚು ಆಗುವುದರಿಂದ ಆರ್ಥಿಕವಾಗಿ ನಿಭಾಯಿಸುವುದು ಕಷ್ಟಕರವಾಗಿರುತ್ತದೆ.ಆದುದರಿಂದ ದಿನಾಂಕ ೧೬. ೦೪. ೨೦೧೯ ರಂದು ಯುವವಾಹಿನಿ ಉಪ್ಪಿನಂಗಡಿ ಘಟಕದಿಂದ 12000 ರೂಪಾಯಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು. .ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಡಾ.ರಾಜಾರಾಮ ಕೆ.ಬಿ, ಸಲಹೆಗಾರರಾದ ಡಾ.ಸದಾನಂದ ಕುಂದರ್,ಮಾಜಿ ಅಧ್ಯಕ್ಷರಾದ ಶೇಖರ ಗೌಂಡತ್ತಿಗೆ , ಅಧ್ಯಕ್ಷರಾದ ಅಜಿತ್ […]
Read More
05-04-2019, 2:26 PM
ಕೂಳೂರು : ಅನಾಥಾಶ್ರಮದಲ್ಲಿ ಬೆಳೆಯುತ್ತಿದ್ದ ಲಕ್ಷ್ಮಿ ಎಂಬ ವಿದ್ಯಾರ್ಥಿನಿ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಸ್ಪತ್ರೆಯ ಮೊತ್ತವನ್ನು ನೀಡಲು ಅಸಾಧ್ಯವಾಗಿರುವುದರಿಂದ ಯುವವಾಹಿನಿ ಕೂಳೂರು ಘಟಕದ ವತಿಯಿಂದ ವಿದ್ಯಾರ್ಥಿನಿಗೆ ಆಸ್ಪತ್ರೆ ಶುಲ್ಕ ಭರಿಸಲು 20,000 /- ರೂಪಾಯಿ ನೀಡಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್
Read More
04-04-2019, 1:36 PM
ಮಾಣಿ : ಜೀವನ ಪಯಣದ ಹಾದಿಯಲ್ಲಿ ಸಂಬಂಧಗಳು ಬಲು ಮಹತ್ವ ಪಡೆದಿದೆ. ಸಂಬಂಧಗಳು ಉಳಿಯಬೇಕಾದರೆ ಸ್ಪಂದನೆಯ ಅಗತ್ಯವಿದೆ. ಅದಕ್ಕೆ ಸಕಾಲ ಎಂಬಂತೆ ದುರ್ದೈವವಸಾತ್ ನಮ್ಮಘಟಕದ ಸದಸ್ಯರಾದ ನಮ್ಮ ಹತ್ತಿರದ ನಿವಾಸಿ ಬರಿಮಾರ್ ಗ್ರಾಮದ, ಬಲ್ಯ ಬಳಿ ವಾಸವಾಗಿರುವ ಸದಾನಂದ ಪೂಜಾರಿ ಹಾಗೂ ಜಯಂತಿ ದಂಪತಿಗಳ ಪುತ್ರ, “ಅಶ್ವಥ್” ರಸ್ತೆ ಅಪಘಾತದಲ್ಲಿ ಗಾಯಗೊಂಡು ಮಂಗಳೂರಿನ ಏ.ಜೆ ಹಾಸ್ಪಿಟಲ್ ನ ತುರ್ತು ನಿಗಾ ಘಟಕದಲ್ಲಿ ದಾಖಲಾಗಿದ್ದರು ಹಾಗೂ ಕಾಲಿನ ಶಸ್ತ್ರ ಚಿಕಿತ್ಸೆ ನಡೆದಿದೆ . ತೀರಾ ಬಡತನದಲ್ಲಿರುವ ಈ ಕುಟುಂಬಕ್ಕೆ […]
Read More
27-03-2019, 4:48 PM
ಬಜಪೆ : ಯುವವಾಹಿನಿ(ರಿ.) ಬಜಪೆ ಘಟಕ ,ಲಯನ್ಸ್ ಕ್ಲಬ್ ಮುಚ್ಚೂರು – ನೀರುಡ್ಡೆ ,ನಿರಂಜನ ಸ್ವಾಮಿ ಪಾಲಿಟೆಕ್ನಿಕ್ (ಅನುದಾನಿತ ) ಸುಂಕದಕಟ್ಟೆ , ಹಾಗೂ ವೆನ್ಲಾಕ್ ಆಸ್ಪತ್ರೆ ಮಂಗಳೂರು, ಇವರ ಸಂಯುಕ್ತ ಅಶ್ರಯದಲ್ಲಿ, ಬೃಹತ್ ರಕ್ತದಾನ ಶಿಬಿರ ತಾರೀಕು 27/03/2019 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಸುಂಕದಕಟ್ಟೆ ಇಲ್ಲಿ ಯಶಶ್ವಿಯಾಗಿ ನಡೆಯಿತು . ಎಸ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಜ್ಯೋತಿ ನಾರಾಯಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು .ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ […]
Read More
24-03-2019, 4:24 PM
ಮೂಡಬಿದಿರೆ : ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಲಿಮಿಟೆಡ್ ಪಣಂಬೂರು,ಮಂಗಳೂರು, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರು ಹಾಗೂ ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹರಿಪ್ರಸಾದ್ ಪಿ. ನಿಯೋಜಿತ ಉಪಾಧ್ಯಕ್ಷರು ಯುವವಾಹಿನಿ ರಿ. ಮೂಡಬಿದಿರೆ ಘಟಕ ಇವರ ನೇತ್ರತ್ವದಲ್ಲಿ ದಿನಾಂಕ 24-3-2019 ಭಾನುವಾರ ಫ್ರೆಂಡ್ಸ್ ಕ್ಲಬ್ ಸಭಾ ಭವನ ಹೊಸಂಗಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಸುಮಾರು 211 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದಿರುತ್ತಾರೆ…
Read More