ಬಜಪೆ : ಯುವವಾಹಿನಿ ಬಜಪೆ ಘಟಕದ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು ಬಜಪೆ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಆಚರಿಸಲಾಯಿತು. ಪತಂಜಲಿ ಯೋಗ ಶಿಕ್ಷಣ ಸಮಿತಿಯು ಒಂದು ಘಂಟೆಗಳ ಕಾಲ ಯೋಗ ತರಗತಿಯನ್ನು ನಡೆಸಿಕೊಟ್ಟಿತ್ತು. ಈ ಕಾರ್ಯಕ್ರಮದ ಅಂಗವಾಗಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪತಂಜಲಿ ಯೋಗ ಶಿಕ್ಷಣ ಸಮಿತಿಯ ಕರ್ನಾಟಕ ನೇತ್ರಾವತಿ ವಲಯ ಇದರ ಜಿಲ್ಲಾ ಸಹಸಂಚಾಲಕರಾದ ಅಶೋಕ್ ಹಾಗೂ ಕರ್ನಾಟಕ ನೇತ್ರಾವತಿ ವಲಯ ಇದರ ಮಹಾಲಿಂಗೇಶ್ವರ ವಲಯದ ಸಂಚಾಲಕರಾದ ದಾಮೋದರ ಇವರು ಯೋಗದ ಮಹತ್ವವನ್ನು ಸಭೆಗೆ ತಿಳಿಸಿದರು. ವೇದಿಕೆಯಲ್ಲಿ ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ಸಂಧ್ಯಾ ಕುಳೖಾ ಹಾಗೂ ಕಾರ್ಯದರ್ಶಿ ರೋಹಿತ್ ತಾರಿಕಂಬ್ಳ ಉಪಸ್ಥಿತರಿದ್ದರು. ಯುವವಾಹಿನಿ ಬಜಪೆ ಘಟಕದ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಮುರನಗರ ಅತಿಥಿಗಳನ್ನು ಸ್ವಾಗತಿಸಿದರು. ರೋಹಿತ್ ತಾರಿಕಂಬ್ಳ ಧನ್ಯವಾದಗಳನ್ನು ಅರ್ಪಿಸಿದರು. ಶ್ರೇಯಾ ಸನಿಲ್ ಕಾರ್ಯಕ್ರಮ ನಿರೂಪಿಸಿದರು.