ಬೆಂಗಳೂರು :ಯುವವಾಹಿನಿ (ರಿ.) ಬೆಂಗಳೂರು ಘಟಕದ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆಯ ಬಗ್ಗೆ ತರಬೇತಿ ಕಾರ್ಯಾಗಾರ ದಿನಾಂಕ 19-05-2019 ರಂದು ಬೆಂಗಳೂರು ಗಾಯತ್ರಿ ಮಿನಿ ಹಾಲ್ ಮಲ್ಲೇಶ್ವರಂ ನಲ್ಲಿ ಆರೋಗ್ಯವೇ ಭಾಗ್ಯ -2019 ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ಸುಧೀರ್ ಎಸ್ ಪೂಜಾರಿ ವಹಿಸಿದ್ದರು ಹಾಗೂ ಕಾರ್ಯಕ್ರಮದ ಮುಂದಾಳತ್ವವನ್ನು ಆರೋಗ್ಯ ನಿರ್ದೇಶಕರಾದ ಮಿತೇಶ್ ಪೂಜಾರಿ ನಿರ್ವಹಿಸಿದರು.ಈ ಸಂದರ್ಬದಲ್ಲಿ ಘಟಕದ ಕಾರ್ಯದರ್ಶಿಯವರಾದ ರಾಘವೇಂದ್ರ ಪೂಜಾರಿ , ಉಪಾಧ್ಯಕ್ಷರಾದ ಕಿಶನ್ ಪೂಜಾರಿ, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡಿದ್ದರು.
ತುರ್ತು ಪರಿಸ್ಥಿಯಲ್ಲಿ ಒಬ್ಬ ವ್ಯಕ್ತಿಯ ಜೀವವನ್ನು ಯಾವ ರೀತಿ ಪ್ರಥಮ ಚಿಕಿತ್ಸೆ ಕೊಟ್ಟು ಜೀವ ಉಳಿಸುವ ಮಹತ್ತರದ ಕಾರ್ಯದಲ್ಲಿ ಪಾಲುದಾರಾಗಬೇಕು ಎಂಬುದು ಅರ್ಥಪೂರ್ಣವಾಗಿ ತರಬೇತಿ ಪಡೆಯಲಾಯಿತು.ತರಬೇತುದಾರರು : ಸೆಲ್ವ ರಾಜ್, ಸೈಂಟ್ ಜಾನ್ಸ್ ಆಸ್ಪತ್ರೆ ಬೆಂಗಳೂರು.