ಪಣಂಬೂರು-ಕುಳಾಯಿ : ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕ, ಬಿಲ್ಲವ ಎಂಪ್ಲಾಯಿಸ್ ವೆಲ್ಫೇರ್ ಸೊಸೈಟಿ (ರಿ) ಹಾಗೂ ಹೀಲ್ಸ್ (ರಿ) ಮಂಗಳೂರು ಇವರ ಸಹಭಾಗಿತ್ವದಲ್ಲಿ, ಕೆ.ಎಂ.ಸಿ ಆಸ್ಪತ್ರೆ, ಅತ್ತಾವರ ಹಾಗೂ ಸಮುದಾಯ ದಂತ ವಿಭಾಗ, ಯೆನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ವೆಂಕಟ್ರಮಣ ಹಿರಿಯ ಪ್ರಾಥಮಿಕ ಶಾಲೆ, ಮೈರ್ಪಾಡಿ ಕುಳಾಯಿ ಇಲ್ಲಿ ಜರಗಿದ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಆಸ್ಪತ್ರೆಯ ಮೂತ್ರರೋಗ ತಜ್ಞರಾದ ಡಾಕ್ಟರ್ ಸದಾನಂದ ಪೂಜಾರಿ ಹೇಳಿದರು. ಎಲ್ಲರೂ ನಿಯಮಿತವಾದ ಆಹಾರ ಪದ್ದತಿಯನ್ನು ಬಳಸಿಕೊಂಡು, ವ್ಯಾಯಾಮ ಮತ್ತು ನಡಿಗೆಯಂತಹ ಹವ್ಯಾಸವನ್ನು ರೂಡಿಸಿಕೊಂಡು ಸಂತೋಷದಾಯಕ ಜೀವನವನ್ನು ನಡೆಸಲು ಆರೊಗ್ಯವನ್ನು ಕಾಪಾಡಿಕೊಳ್ಳಬೇಕು. ಷಾಸ್ಟ್ ಷುಡ್ , ಕಲಬೆರಕೆಯುಕ್ತ ಆಹಾರವನ್ನು ಸೇವಿಸದಿರುವುದು ಒಳ್ಳೆಯದು. 40 ವರುಷ ದಾಟಿದ ಮೇಲೆ ಎಲ್ಲರೂ ಆರೋಗ್ಯ ತಪಾಷಣೆಯನ್ನು ಮಾಡಿಸಿ ಅದರಲ್ಲೂ ಮುಖ್ಯವಾಗಿ ರಕ್ತದೊತ್ತಡ ಮತ್ತು ಸಿಹಿ ಮೂತ್ರದ ತಪಾಷಣೆಯನ್ನು ಮಾಡುವುದು ಅತೀ ಅವಶ್ಯಕ ಎಂದು ಹೇಳಿದರು.
ಈ ನಿಟ್ಟಿನಲ್ಲಿ ಕುಳಾಯಿ ಪರಿಸರದ ಎಲ್ಲಾ ಸಮಾಜ ಭಾಂದವರು, ಬಡವರು ಮತ್ತು ಕೂಲಿ ಕಾರ್ಮಿಕರು ಇದರ ಸದುಪಯೋಗವನ್ನು ಪಡೆಯಬೇಕೆಂದು ತಿಳಿಸಿದರು.
ಪ್ರಭಾಕರ ಕುಳಾಯಿ, ಅಧ್ಯಕ್ಷರು ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ (ರಿ) ಕುಳಾಯಿ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು.
ವೈದ್ಯಕೀಯ ಶಿಬಿರದಲ್ಲಿ 251 ಮಂದಿ, ದಂತ ಚಿಕಿತ್ಸಾ ಶಿಬಿರದಲ್ಲಿ 86 ಮಂದಿ ಆರೋಗ್ಯ ತಪಾಷಣೆಯನ್ನು ಮಾಡಿಸಿದರು. 89 ಜನರಿಗೆ ಉಚಿತವಾಗಿ ಕನ್ನಡಕ್ಕವನ್ನು ವಿತರಿಸಲಾಯಿತು.
ಬಿಲ್ಲವ ಎಂಪ್ಲಾಯಿಸ್ ವೆಲ್ ಫೇರ್ ಸೊಸೈಟಿ (ರಿ) ಇದರ ಗೌರವ ಅಧ್ಯಕ್ಷ ಶ್ರೀನಿವಾಸ್, ಹಿಂದು ವಿದ್ಯಾದಾಯಿನಿ ಸಂಘ, ಸುರತ್ಕಲ್ ಇದರ ಕಾರ್ಯದರ್ಶಿ ಎಮ್ ವೆಂಕಟರಾವ್, ಯೆನಪೋಯ ದಂತ ಕಾಲೇಜಿನ ಸಾರ್ವಜನಿಕ ಸಂಪರ್ಕ ಅಧಿಕಾರಿ ಭರತ್ ಮತ್ತು ಕೆ.ಎಂ.ಸಿ ಆಸ್ಪತ್ರೆಯ ಡಾಕ್ಟರ್ ಆಂಶಿಕ್ ಉಪಸ್ಥಿತರಿದ್ದರು. ಸುರೇಶ್ ಪೂಜಾರಿ, ಅಧ್ಯಕ್ಷರು ಯುವವಾಹಿನಿ (ರಿ) ಪಣಂಬೂರು-ಕುಳಾಯಿ ಘಟಕ ಸ್ವಾಗತಿಸಿದರು, ಹೀಲ್ಸ್ (ರಿ) ಮಂಗಳೂರು ಇದರ ಉಪಾಧ್ಯಕ್ಷ ಸುದಾಕರ್ ದನ್ಯವಾದ ಅರ್ಪಿಸಿದರು, ಸುಜಾತ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು.