ಬಂಟ್ವಾಳ : ಬಿರುವೆರ್ ಕುಡ್ಲ ( ರಿ.) ಬಂಟ್ವಾಳ ಘಟಕ ಮತ್ತು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ ಯೆನಪೋಯ ಯೂನಿವರ್ಸಿಟಿ ಮತ್ತು ಸಮುದಾಯ ದಂತ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ನಡೆಯುವ ಉಚಿತ ಬೃಹತ್ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಕಾರ್ಯಕ್ರಮವು ದಿನಾಂಕ 16-06-2019ನೇ ಆದಿತ್ಯವಾರದಂದು ನಾವೂರ ಪ್ರೌಢಶಾಲೆಯಲ್ಲಿ ನಡೆಯಿತು.
ಬಿರ್ವೆರ್ ಕುಡ್ಲ (ರಿ) ಬಂಟ್ವಾಳ ಇದರ ಸಂಚಾಲಕರಾದ ಭುವನೇಶ್ ಪಚ್ಚಿನಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ ಬಂಟ್ವಾಳ ಘಟಕದ ಸಲಹೆಗಾರರಾದ ಅಣ್ಣು ಪೂಜಾರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಯೆನೇಪೋಯ ಮೆಡಿಕಲ್ ಆಸ್ಪತ್ರೆಯ (public relation officer) ಡಾ.ಭರತ್ ಕೋಟ್ಯಾನ್ ಶಿಬಿರದ ಬಗ್ಗೆ ಮಾಹಿತಿ ನಿಡಿದರು.ಕಾರ್ಯಕ್ರಮದಲ್ಲಿ 140 ಜನ ಶಿಬಿರದ ಉಪಯೊಗ ಪಡೆದುಕೊಂಡರು..ವೇದಿಕೆಯಲ್ಲಿ ಡಾ.ಸಫ (dentist).ಹಾಗೂ ಡಾ.ತಂಶಿಫ್( Medical officer). ಮತ್ತು ಯುವವಾಹಿನಿ ಬಂಟ್ವಾಳ ಘಟಕದ ಉಪಾಧ್ಯಕ್ಷರಾದ ಸುಂದರ ಪೂಜಾರಿ ಬೋಳಂಗಡಿ. ಪುಷ್ಪರಾಜ್ ನಾವೂರ ಮಾಜಿ ಸೈನಿಕರು.ಯುವವಾಹಿನಿ ಬಂಟ್ವಾಳ ಘಟಕದ ಕಾರ್ಯದರ್ಶಿ ಪುರುಷೊತ್ತಮ್ ಕಾಯರ್ ಪಳಿಕೆ.ಆರೋಗ್ಯ ಶಿಬಿರದ ಸಂಚಾಲಕರಾದ ಕಿರಣ್ ರಾಜ್ ಪೂಂಜರೆಕೊಡಿ ಮತ್ತು ವಿಠಲ್ ಡಿ. ಪದ್ಮಶೇಖರ್ ಜೈನ್ ನಾವೂರ ಉಪಸ್ಥಿತಿತರಿದ್ದರು. ಲೊಹೀತ್ ಬಂಟ್ವಾಳ ನಿರೂಪಿಸಿ ವಂದಿಸಿದರು.