ಉಡುಪಿ : ಯುವವಾಹಿನಿಯ ಉಡುಪಿ ಘಟಕದ ವತಿಯಿಂದ 5 ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯನ್ನು ಘಟಕದ ಸಭಾಂಗಣದಲ್ಲಿ ದಿನಾಂಕ 21/06/2019 ರಂದು ನಡೆಯಿತು. ಯುವವಾಹಿನಿಯ ಉಡುಪಿ ಘಟಕದ ಅಧ್ಯಕ್ಷರಾದ ನಾರಾಯಣ್ ಬಿ. ಎಸ್ ರವರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. “ಪತಾಂಜಲಿ ಹರಿದ್ವಾರ ಯೋಗ ಶಿಬಿರ” ಉಡುಪಿ ಇದರ ಯೋಗ ಶಿಕ್ಷಕಿ ಅನಿತಾ ಹಾಗೂ ಅವರ ಪತಿ ಯೋಗ ಶಿಕ್ಷಕ ತಿಪ್ಪೆಶ್ ರವರು ಯೋಗದ ಮಹತ್ವವನ್ನು ತಿಳಿಸಿದರು ಹಾಗೂ ಎಲ್ಲಾ ಸದಸ್ಯರಿಗೂ ತರಬೇತಿ ನೀಡಿದರು. ಯೋಗ ಗುರು ತಿಪ್ಪೆಶ್ ರವರು ವಿವಿಧ ಆಸನಗಳನ್ನು ಮಾಡಿ ತೋರಿಸಿ ಅದರ ವಿಶೇಷತೆಯನ್ನು ತಿಳಿಸಿದರು. ಕಾರ್ಯದರ್ಶಿ ಮಹಾಬಲ ಅಮೀನ್, ಮಹಿಳಾ ಸಂಚಾಲಕಿ ಶಕುಂತಳಾ ಸುಕೇಶ್, ಮಾಜಿ ಅಧ್ಯಕ್ಷರುಗಳಾದ ಭಾಸ್ಕರ್ ಸುವರ್ಣ, ಶಂಕರ ಪೂಜಾರಿ, ಸಂತೋಷ್ ಕುಮಾರ್, ರಘುನಾಥ್ ಮಾಬಿಯಾನ್, ರಮೇಶ್ ಕುಮಾರ್, ಅಶೋಕ್ ಕೋಟ್ಯಾನ್ , ಉಪಾಧ್ಯಕ್ಷರಾದ ಜಗದೀಶ್ ಕುಮಾರ್ ಹಾಗೂ ಘಟಕದ ಸದಸ್ಯರು ಭಾಗವಹಿಸಿ ಯೋಗದ ಪ್ರಯೋಜನ ಪಡೆದುಕೊಂಡರು, ಯೋಗ ಶಿಕ್ಷಕಿ ಅನಿತಾರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಧನ್ಯವಾದಗಳೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೋಳಿಸಲಾಯಿತು.