Yuvavahini

ಕೊಲ್ಯ

ಉಳ್ಳಾಲ ಬಿಲ್ಲವ ಸಮಾವೇಶ: ಮನೆ ಮನೆ ಭೇಟಿ

ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಇವರ ಆಶ್ರಯದಲ್ಲಿ ಉಳ್ಳಾಲ ತಾಲೂಕು ಬಿಲ್ಲವರ ಸಮಾವೇಶ ಸಮಿತಿ ಸಹಭಾಗಿತ್ವದಲ್ಲಿ ಫೆಬ್ರವರಿ 25 ರಂದು ಕೊಲ್ಯ ಬಿಲ್ಲವ ಸಮಾಜ ಸಂಘದ ಆವರಣದಲ್ಲಿ ಬಿಲ್ಲವರ ಸಮಾವೇಶ ನಡೆಯಲಿದೆ. ಕೇಂದ್ರ ಸರ್ಕಾರದ ಮಾಜಿ ವಿತ್ತ ಸಚಿವರು, ಬಿಲ್ಲವರ ಹಿರಿಯ ಮುಖಂಡರಾದ ಬಿ. ಜನಾರ್ಧನ ಪೂಜಾರಿ ಇವರಿಂದ ಉದ್ಘಾಟನೆಗೊಳ್ಳಲಿರುವ ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ ಗಣ್ಯಾತಿಗಣ್ಯರು ಭಾಗವಹಿಸಲಿದ್ದು ದಿನಪೂರ್ತಿ ಸಭಾ ಕಾರ್ಯಕ್ರಮ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಉಳ್ಳಾಲ ವಲಯದ ಅನೇಕ ಬಿಲ್ಲವ […]

Read More

ಸಂಘಟನಾತ್ಮಕವಾಗಿ ದಿನೇ ದಿನೇ ಬಲಿಷ್ಠವಾಗುತ್ತಿರುವ ಕೊಲ್ಯ ಘಟಕ : ಹರೀಶ್ ಕೆ. ಪೂಜಾರಿ

ಕೊಲ್ಯ: ಶಿಸ್ತಿಗೆ ಹೆಸರಾದ ಕೊಲ್ಯ ಘಟಕವು ಹೊಸ ಸದಸ್ಯರ ಸೇರ್ಪಡೆಯೊಂದಿಗೆ ಇನ್ನಷ್ಟು ಬಲಿಷ್ಠವಾಗುತ್ತಿದೆ. ಕೊಲ್ಯ ಘಟಕವು ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿ ಕೊಂಡು ವಿದ್ಯೆ, ಉದ್ಯೋಗ, ಸಂಪರ್ಕ ನಿಟ್ಟಿನಲ್ಲಿ ಹಮ್ಮಿಕೊಂಡ ವಿವಿಧ ಯೋಜನೆಗಳು ಜನರಿಗೆ ತಲುಪುತ್ತಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ‌. ಪೂಜಾರಿ ತಿಳಿಸಿದರು. ಫೆಬ್ರವರಿ 25 ರಂದು ನಡೆಯುವ ಉಳ್ಳಾಲ ವಲಯದ ಬಿಲ್ಲವ ಸಮಾವೇಶದ ಸಿದ್ಧತೆಯಲ್ಲಿ ಕೊಲ್ಯ ಯುವವಾಹಿನಿ ಸದಸ್ಯರು ತಮ್ಮನ್ನು ತೊಡಗಿಸಿದುರ ಬಗ್ಗೆ ಮಾಹಿತಿ ಪಡೆದು ಸಮ್ಮೇಳನದ ಯಶಸ್ವಿಗೆ ಶುಭ ಹಾರೈಸಿದರು. […]

Read More

ಹೃದಯ ತುಂಬಿದ ಅಭಿಮಾನ ಮರೆಯಲಸಾಧ್ಯ : ನಯನಾ ಸುರೇಶ್

ಕೊಲ್ಯ: ಕೊಲ್ಯ ಘಟಕದ ಸರ್ವ ಸದಸ್ಯರ ಪ್ರೀತಿ ಅಭಿಮಾನಕ್ಕೆ ನಾನು ಮೂಕಳಾಗಿದ್ದೇನೆ, ಮಾತು ಮೌನವಾಗಿದೆ ಹೃದಯ ತುಂಬಿ ಬಂದಿದೆ. ಸಂತೋಷವನ್ನು ವ್ಯಕ್ತ ಪಡಿಸಲು ನನ್ನಲ್ಲಿ ಪದಗಳಿಲ್ಲ ಎಂದು ಆನಂದ ಬಾಷ್ಪಿತರಾಗಿ ಕೊಲ್ಯ ಘಟಕದಲ್ಲಿ ಡಿಸೆಂಬರ್ 27 ರಂದು ನಡೆದ ಸಾಪ್ತಾಹಿಕ ಸಭೆಯಲ್ಲಿನ ಬೀಳ್ಕೊಡುಗೆಯ ಸನ್ಮಾನದ ಕುರಿತು ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಯನಾ ಸುರೇಶ್ ಅವರು ಬಾವುಕರಾಗಿ ಮತನಾಡಿದರು. ಸಂಘಟನಾ ಕಾರ್ಯದರ್ಶಿಯಾಗಿ ಕೊಲ್ಯ ಘಟಕಕ್ಕೆ ಪ್ರೋತ್ಸಾಹ ನೀಡಿ ಸಹಕರಿಸಿದ ಶ್ರೀಮತಿ ನಯನಾ ಸುರೇಶ್ ರವರನ್ನು ಯುವವಾಹಿನಿ(ರಿ.) ಕೊಲ್ಯ […]

Read More

ಹಣತೆ ಬೆಳಗಿದ ಅಂದದ ತುಳಸಿಕಟ್ಟೆ

ಕೊಲ್ಯ :- ತುಳಸಿ ಹಬ್ಬದ ಪ್ರಯುಕ್ತ ಘಟಕದ ಸದಸ್ಯರಿಗೆ ದಿನಾಂಕ 05 ನವೆಂಬರ್ 2022ರಂದು ಸಾಂಪ್ರದಾಯಿಕ ಹಣತೆ ಬೆಳಗಿದ ಅಂದದ ತುಳಸಿ ಕಟ್ಟೆ ಫೋಟೋ ಸ್ಪರ್ಧೆಯನ್ನು ಘಟಕದ ಸದಸ್ಯರಿಗೆ ಏರ್ಪಡಿಸಿದ್ದು, ಒಟ್ಟು 31 ಸದಸ್ಯರು ಭಾಗವಹಿಸಿದ್ದರು. ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಕು. ಅನ್ವಿತಾ. ಎ, ಮತ್ತು ವಿದ್ಯಾರ್ಥಿ ಸಂಘಟನೆ ನಿರ್ದೇಶಕರದ ಕು. ಸಚೇತ ಸಾಲ್ಯಾನ್ ಅವರು ಈ ಸ್ಪರ್ಧೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮಶಿಕ್ಷಣ ತರಗತಿ ಇದರ ಗುರುಗಳಾದ ಡಾ. […]

Read More

ಮುಸ್ಸಂಜೆಯಲ್ಲಿ ಕಣ್ಮಣ ಸೆಳೆದ ಕನ್ನಡ ರಾಜ್ಯೋತ್ಸವ ಭಾವಲಹರಿ-ಕವಿ-ಕಾವ್ಯ-ಗಾಯನದ ರಸದೌತಣ

ಕೊಲ್ಯ :- ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರ ಮತ್ತು ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಹಾಗೂ ಚುಟುಕು ಸಾಹಿತ್ಯ ಪರಿಷತ್ ಉಳ್ಳಾಲ ಘಟಕ ಇದರ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವಸಂಜೆ- ಭಾವಲಹರಿ, ಕವಿ ಕಾವ್ಯ ಗಾಯನವು ದಿನಾಂಕ 01 ನವೆಂಬರ್ 2022 ರಂದು ಸಂಜೆ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನ ಕೊಲ್ಯದಲ್ಲಿ ಜರುಗಿತು. ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ […]

Read More

ಉಚಿತ ಹುಚ್ಚು ನಾಯಿ ನಿಯಂತ್ರಣಾ ಲಸಿಕಾ ಶಿಬಿರ

ಕೊಲ್ಯ :- ಯುವವಾಹಿನಿ(ರಿ.) ಕೊಲ್ಯ ಘಟಕ ಮತ್ತು ರೋಟರಿ ಕ್ಲಬ್ ಮಂಗಳೂರು ಪೂರ್ವ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ,ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಆಶ್ರಯದಲ್ಲಿ ಮತ್ತು ಎನಿಮಲ್ ಕೇರ್ ಟ್ರಸ್ಟ್ ಮಂಗಳೂರು ಇದರ ಸಹಕಾರದಲ್ಲಿ ಉಚಿತ ಹುಚ್ಚು ನಾಯಿ ನಿಯಂತ್ರಣಾ ಲಸಿಕಾ ಶಿಬಿರ ಮತ್ತು ದೇಸೀ ಬೆಕ್ಕು ಮತ್ತು ನಾಯಿ ಮರಿಗಳ ದತ್ತು ಕೊಡುವ ಕಾರ್ಯಕ್ರಮವು ದಿನಾಂಕ 25 ಸೆಪ್ಟೆಂಬರ್ 2022ರಂದು ಶ್ರೀ ಶಾರದಾ ಮಹೋತ್ಸವ ಸಮಿತಿ ಕೊಲ್ಯ ಇದರ ವಠಾರದಲ್ಲಿ […]

Read More

ಬ್ರಹ್ಮಶ್ರೀ ನಾರಾಯಣಗುರುಗಳ 168ನೇ ಜನ್ಮದಿನಾಚರಣೆಗೆ ಹೊಸ ಭಾಷ್ಯ ಬರೆದ ಯುವವಾಹಿನಿ

ಕೊಲ್ಯ :- ಪರಿಸರ ಸಂರಕ್ಷಣೆಯ ಕುರಿತ ನಾರಾಯಣ ಗುರುಗಳ ತತ್ವಾದರ್ಶಗಳಿಗೆ ಪೂರಕವಾಗಿ ಗಿಡಗಳನ್ನು ನೆಟ್ಟು ನೀರೆರೆದು ಪೋಷಿಸುವ ದೃಢ ಸಂಕಲ್ಪದೊಂದಿಗೆ ಬ್ರಹ್ಮಶ್ರೀ ನಾರಾಯಣ ಗುರುಗಳ 168 ನೇ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವ ಉದ್ದೇಶದಿಂದ ಯುವವಾಹಿನಿ ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಕು.ಭಾರತಿ ಸನಿಲ್ ರವರ ಮನಸ್ಸಿಗೆ ಮೂಡಿಬಂದ ಪರಿಕಲ್ಪನೆಯೆ ಪರಿಸರ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವುದು. ಈ ಪರಿಕಲ್ಪನೆ ಸಾಕಾರಗೊಳ್ಳಲು ಸೂಕ್ತವಾದ ವೇದಿಕೆ ಒದಗಿ ಬಂದದ್ದು ದಿನಾಂಕ 10 ಸೆಪ್ಟೆಂಬರ್ 2022 ರಂದು […]

Read More

ಸಸಿ ನೆಡುವ ಮೂಲಕ ಬ್ರಹ್ಮಶ್ರೀ ನಾರಾಯಣಗುರುಗಳ 168 ನೇ ಜನ್ಮದಿನಾಚರಣೆ

ಕೊಲ್ಯ :- ಬ್ರಹ್ಮಶ್ರೀ ನಾರಾಯಣಗುರುಗಳ 168 ನೇ ಜನ್ಮದಿನಾಚರಣೆಯ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಅಭಯ ಆಶ್ರಯ ಅಸೈಗೋಳಿಯಲ್ಲಿ, ನಾರಾಯಣಗುರುಗಳ ತತ್ವ ಮತ್ತು ಸಂದೇಶಗಳಲ್ಲಿ ಒಂದಾಗಿರುವ ಪರಿಸರವನ್ನು ರಕ್ಷಿಸಿ ಅದು ನಿಮ್ಮನ್ನು ರಕ್ಷಿಸುತದೆ ಎನ್ನುವುದಕ್ಕೆ ಪೂರಕವಾಗಿ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಳ್ಳುವ ಕೆಲವೊಂದು ಗಿಡಗಳನ್ನು ನೆಡಲಾಯಿತು. ಅಭಯ ಆಶ್ರಯದ ಪದಾಧಿಕಾರಿಗಳು, ಯುವವಾಹಿನಿ (ರಿ.) ಕೊಲ್ಯ ಘಟಕದ ಅಧ್ಯಕ್ಷರಾದ ಶ್ರೀ ಸುಂದರ್ ಸುವರ್ಣ , ಪದಾಧಿಕಾರಿಗಳು ಹಾಗೂ ಸದಸ್ಯರು ಈ ಸಂದರ್ಭದಲ್ಲಿ ಹಾಜರಿದ್ದರು.‌ ಬ್ರಹ್ಮಶ್ರೀ ನಾರಾಯಣಗುರು ತತ್ವ ಮತ್ತು […]

Read More

ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 168ನೇ ಜನ್ಮ ದಿನಾಚರಣೆ

ಕೊಲ್ಯ :- ಅಭಯ ಆಶ್ರಯ ಅಸೈಗೋಳಿ ಇದರ ಓಂ ಧ್ಯಾನ ದೇಗುಲದ ದಿವ್ಯ ಸಾನಿಧ್ಯದಲ್ಲಿ ಸಾಕಾರಗೊಂಡ ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ 168 ನೆಯ ಜನ್ಮ ದಿನಾಚರಣೆಯು ವಿಶ್ವ ಬಿಲ್ಲವರ ಸೇವಾ ಚಾವಡಿ ಮತ್ತು ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ತಾರೀಕು 10 ಸೆಪ್ಟೆಂಬರ್ 2022ನೇ ಶನಿವಾರ ಸಂಜೆ ಅಸೈಗೊಳಿ ಅಭಯಾಶ್ರಯದ ಪ್ರಶಾಂತವಾದ ತಾಣದಲ್ಲಿ ಇತ್ತೀಚೆಗೆ ನೂತನವಾಗಿ ಲೋಕಾರ್ಪಣೆಗೊಂಡ ಓಂ ಧ್ಯಾನ ದೇಗುಲದ ದಿವ್ಯ ಸಾನಿಧ್ಯದಲ್ಲಿ ಆಶ್ರಮದ ಹಿರಿಯ ಸದಸ್ಯರ ಸಮಕ್ಷಮದಲ್ಲಿ ಬ್ರಹ್ಮ ಶ್ರೀ ನಾರಾಯಣ […]

Read More

ಧಾರ್ಮಿಕ ಶಿಕ್ಷಣ ಪದ್ಧತಿ ಭಜನಾ ತರಬೇತಿ ಕಮ್ಮಟ

ಕೊಲ್ಯ :- ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದಲ್ಲಿ ತಾ. 16 ಆಗಸ್ಟ್ 2022 ರಂದು ಗುರುಗಳಾದ‌ ಡಾ. ಅರುಣ್ ಉಳ್ಳಾಲ್ ರವರಿಂದ ಓಂಕಾರದೊಂದಿಗೆ ಆರಂಭಗೊಂಡು ಗಣಪತಿ ಸ್ತುತಿ, ಗುರುಸ್ತುತಿ ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಿಂದಲೇ ನಿತ್ಯಾನುಷ್ಠಾನ ಶ್ಲೋಕ ಪಠಣೆ ಮಾಡಿಸಲಾಯಿತು. ಇಂದಿನ ತರಗತಿಯಲ್ಲಿ ವಿಶೇಷವಾಗಿ ರಕ್ಷಾ ಬಂಧನದ ಮಹತ್ವವನ್ನು ಗುರುಗಳು ತಿಳಿಸಿಕೊಟ್ಟರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಸೇರಿ ಪರಸ್ಪರ ರಕ್ಷೆ ಕಟ್ಟಿ ಸಹೋದರತೆಯ ಹಬ್ಬ ರಕ್ಷಾ ಬಂಧನ ವನ್ನು ಸಂಭ್ರಮದಿಂದ ಆಚರಿಸಲಾಯಿತು.ವಿಶೇಷವಾಗಿ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!