ಕೊಲ್ಯ : “ಮೇಲಕ್ಕೆ ಎಸೆಯಲ್ಪಟ್ಟ ಮಗುವಿಗೆ ಅಮ್ಮ ಹಿಡಿಯುತ್ತಾಳೆಂಬ ಬಲವಾದ ನಂಬಿಕೆ ಇರುವಂತೆ ಮ್ಯೂಚುವಲ್ ಫಂಡ್ ಹಣ ಹೂಡಿಕೆಯಲ್ಲಿ ನಂಬಿಕೆಯೇ ಬಹು ದೊಡ್ಡ ಭದ್ರತೆ” ನಮಗೆ ಬರುವ ಆದಾಯದಲ್ಲಿ ಮೊದಲು ಒಂದಿಷ್ಟು ಉಳಿತಾಯ ಮಾಡಿ ನಂತರ ನಮ್ಮ ಖರ್ಚು ವೆಚ್ಚಗಳನ್ನು ಸರಿದೂಗಿಸಿದರೆ ಮುಂದೆ ಹಣಕಾಸು ನಿರ್ವಹಣೆ ಕ್ಷೇತ್ರದಲ್ಲಿ ಉತ್ತಮ ಹೂಡಿಕೆದಾರರಾಗಲು ಸಾಧ್ಯ ಎಂದು ಬೆಂಗಳೂರು ಮೂಲದ ಖ್ಯಾತ ಸಂಪನ್ಮೂಲ ವ್ಯಕ್ತಿ ಡಾ. ಬಾಲಾಜಿ ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.
ಹೂಡಿಕೆ ಕ್ಷೇತ್ರದಲ್ಲಿ ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಕಾಲದಲ್ಲಿ ಯಾವ ರೀತಿ ನಮ್ಮಲ್ಲಿರುವ ಬಂಡವಾಳವನ್ನು ಯಶಸ್ವಿಯಾಗಿ ಹೂಡಿಕೆ ಮಾಡಿ ಉತ್ತಮ ಇಳುವರಿಯನ್ನು ಪಡೆಯಬಹುದು ಎಂದು ಈ ಸಂದರ್ಭದಲ್ಲಿ ಸರಿಸುಮಾರು ಎರಡು ಗಂಟೆಗಳ ಕಾಲ ಮಹತ್ವಪೂರ್ಣವಾದ, ಪರಿಣಾಮಕಾರಿಯಾದ ಮಾಹಿತಿಯನ್ನು ಸಂಪನ್ಮೂಲ ವ್ಯಕ್ತಿಯವರಿಂದ ಪಡೆಯಲಾಯಿತು.
ಯುವವಾಹಿನಿ (ರಿ.) ಕೊಲ್ಯ ಘಟಕ ಹಾಗೂ ರೋಟರಿ ಸಮುದಾಯದಳ ಕೊಲ್ಯ ಸೋಮೇಶ್ವರ ಸಹಯೋಗದಲ್ಲಿ ಎಚ್.ಡಿ.ಎಫ್.ಸಿ ಮ್ಯೂಚುವಲ್ ಫಂಡ್ ನ ಸಹಯೋಗದಲ್ಲಿ ಹಣಕಾಸು ನಿರ್ವಹಣೆ ಕಾರ್ಯಾಗಾರವು ನುರಿತ ಸಂಪನ್ಮೂಲ ವ್ಯಕ್ತಿ ಡಾ. ಬಾಲಾಜಿ ರಾವ್ ರವರ ಮಾರ್ಗದರ್ಶನದಲ್ಲಿ ಪರಿವಾರ್ ರೆಸಿಡೆನ್ಸಿ ಬೀರಿ ಸಂಕೋಳಿಗೆಯಲ್ಲಿ ದಿನಾಂಕ 10-03-2024 ರಂದು ಆದಿತ್ಯವಾರ ಜರಗಿತು.
ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರು ಲತೀಶ್ ಎಂ. ಸಂಕೋಳಿಗೆ ಪ್ರಸ್ತುತ ವಿದ್ಯಮಾನಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಹಣಕಾಸಿನ ವಿನಿಯೋಗವನ್ನು ಯಶಸ್ವಿಯಾಗಿ ಹೂಡಿಕೆ ಮಾಡಿ ಉತ್ತಮ ಭವಿಷ್ಯವನ್ನು ನಿರ್ಮಾಣ ಮಾಡಲು ಈ ರೀತಿಯ ಕಾರ್ಯಕ್ರಮಗಳು ಬಹಳ ಅರ್ಥಪೂರ್ಣ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಕ್ತ ಸಂವಾದ
ಕಾರ್ಯಾಗಾರದ ನಂತರ ಮ್ಯೂಚುವಲ್ ಫಂಡ್ ನ ಹೂಡಿಕೆ ಮತ್ತು ಮಾರುಕಟ್ಟೆ ಏರಿಳಿತಗಳ ಕುರಿತು ಮುಕ್ತ ಸಂವಾದ ನಡೆಯಿತು. ರೋಟರಿ ಕ್ಲಬ್ ಮಂಗಳೂರು ಪೂರ್ವದ ಅಧ್ಯಕ್ಷರು ರೊ. ಜಯರಾಂ ಶೆಟ್ಟಿ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರದ ಅಧ್ಯಕ್ಷರಾದ ಆನಂದ ಮಲಯಾಳಕೋಡಿ, ಲೈಫ್ ಟೈಮ್ ಅಸೆಟ್ ಸ್ಟ್ರಾಟೆಜೀಸ್ ಪ್ರೈ. ಲಿ. ನಿರ್ದೇಶಕರಾದ ಚಂದ್ರಶೇಖರ ಅಮೀನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕೊಲ್ಯ ಘಟಕದ ಸಾಂಸ್ಕೃತಿಕ ನಿರ್ದೇಶಕರಾದ ಸೌಮ್ಯ ಯೋಗೀಶ್ ಪ್ರಾರ್ಥನೆ ನೆರವೇರಿಸಿದರು.ಯುವವಾಹಿನಿ ಅಧ್ಯಕ್ಷರು ಲತೀಶ್.ಎಂ ಸಂಕೋಳಿಗೆ ಪ್ರಸಾವನೆಗೈದು ಸ್ವಾಗಿತಿಸಿದರು.ಕಾರ್ಯದರ್ಶಿ ಜೀವನ್ ಕೊಲ್ಯ ಸಂಪನ್ಮೂಲ ವ್ಯಕ್ತಿಯ ವ್ಯಕ್ತಿ ಪರಿಚಯ ಮಾಡಿದರು. ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರದ ಅಧ್ಯಕ್ಷರು ಆನಂದ್ ಮಲಯಾಳ ಕೋಡಿ ಧನ್ಯವಾದ ಸಮರ್ಪಣೆಗೈದರು. ಕೊಲ್ಯ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದರಶ್ಮಿ ಸನಿಲ್ ಕಾರ್ಯಕ್ರಮ ನಿರೂಪಿಸಿದರು.