ಕೊಲ್ಯ: ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ದಿನಾಂಕ 13-03-2024 ರಂದು ಯುವವಾಹಿನಿ(ರಿ.) ಕೊಲ್ಯ ಘಟಕದ ಸಾಪ್ತಾಹಿಕ ಸಭೆಯಂದು ಘಟಕದ ಮಹಿಳಾ ಸದಸ್ಯರಿಗೆ ಹಾಗೂ ನಾರಾಯಣ ಗುರು ಮಹಿಳಾ ಮಂಡಳಿ ಸದಸ್ಯರಿಗೆ ವಿವಿಧ ಸ್ಪರ್ಧೆ ನಡೆಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಮಹಿಳಾ ಸದಸ್ಯರಿಗೆ ಅಂತರ್ಜಾಲದಲ್ಲಿ ನಾರಿಯರಿಗೊಂದು ಸವಾಲು ರಸ ಪ್ರಶ್ನೆ ಸ್ಪರ್ಧೆ ನಡೆಸಲಾಗಿತ್ತು. ಕೊಲ್ಯ ಘಟಕದ ಕಾರ್ಯದರ್ಶಿ ಜೀವನ್ ಕೊಲ್ಯ ಮಹಿಳೆಯರಿಗೆ ಅಂತರ್ಜಾಲ ಸ್ಪರ್ಧೆ ನಡೆಸಿಕೊಟ್ಟರು. ಮಹಿಳಾ ಸಾಧಕರ ಕುರಿತಾಗಿ ಗಂಟೆಗೊಂದು ಪ್ರಶ್ನೆಗಳನ್ನು ಗುಂಪಿನಲ್ಲಿ ಹಾಕಿ ವೇಗವಾಗಿ ಸರಿಯಾದ ಉತ್ತರ ನೀಡಿದ ಮಹಿಳಾ ಸದಸ್ಯರಿಗೆ ಅಂಕಗಳನ್ನು ನೀಡಿ ಅತೀ ಹೆಚ್ಚು ಅಂಕ ಪಡೆದ ಮಹಿಳಾ ಸದಸ್ಯರಿಗೆ ಬಹುಮಾನ ನೀಡಲಾಯಿತು.
ಸ್ಪರ್ಧೆಯಲ್ಲಿ ಪೂರ್ಣಿಮಾ ಕುಂಪಲ ಪ್ರಥಮ, ಅನ್ವಿತಾ ಎ. ದ್ವಿತೀಯ, ಸೌಮ್ಯ ಕುಸುಮಾಕರ್ ಹಾಗೂ ಶಮ ಕೊಲ್ಯ ತೃತೀಯ, ಆಶಾ ಆರ್. ಕೋಟೆಕಾರ್ ಚತುರ್ಥ, ವಿಜೀತ ಪಂಚಮ ಬಹುಮಾನ ಪಡೆದರು. ಮಹಿಳಾ ಸದಸ್ಯರು ಬಹಳ ಆಸಕ್ತಿಯಿಂದ ಸ್ಪರ್ಧೆಯಲ್ಲಿ ಭಾಗವಹಿಸಿದರು.
ಸಮಾಜದಲ್ಲಿ ಯಾವುದಕ್ಕೂ ಹೆದರದೆ ಮುನ್ನುಗ್ಗಿ ಯಶಸ್ಸು ಸಾಧಿಸಿ ಎಂದು ಕೊಲ್ಯ ಘಟಕದ ಅಧ್ಯಕ್ಷರು ಲತೀಶ್ ಸಂಕೋಳಿಗೆ ಸ್ಪರ್ಧೆಯ ಬಹುಮಾನ ವಿತರಣಾ ಸಂದರ್ಭದಲ್ಲಿ ನುಡಿದು ಅಭಿನಂದನೆ ಸಲ್ಲಿಸಿದರು.
ಸುಸಂದರ್ಭದಲ್ಲಿ ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕರು, ಕೊಲ್ಯ ಘಟಕದ ನಿಕಟ ಪೂರ್ವ ಅಧ್ಯಕ್ಷರು ಸುಂದರ್ ಸುವರ್ಣ, ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷರು ರೇವತಿ ವಿಶ್ವನಾಥ್ ಕುಂಪಲ, ಘಟಕದ ಪ್ರಥಮ ಉಪಾಧ್ಯಕ್ಷರು ಸುಧಾ ಸುರೇಶ್, ದ್ವಿತೀಯ ಉಪಾಧ್ಯಕ್ಷರು ನಿತಿನ್ ಕರ್ಕೇರ, ಕೋಶಾಧಿಕಾರಿ ವಿನುತ ಬಾಲಕೃಷ್ಣ ವಿಜೇತರಿಗೆ ಬಹುಮಾನ ವಿತರಿಸಿದರು.
ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರು ರಶ್ಮಿ ಸನಿಲ್ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಅನುಭವ ಹಂಚಿಕೊಂಡರು. ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಹಾಗೂ ಕೇಂದ್ರ ಸಮಿತಿಯ ಜಾಲತಾಣ ಸದಸ್ಯೆ ಅರ್ಚನಾ ಎಂ ಬಂಗೇರ ಮಹಿಳಾ ದಿನಾಚರಣೆಯ ಖುಷಿಯ ಕ್ಷಣಗಳನ್ನು ಮೆಲುಕು ಹಾಕಿದರು.
ಕೊಲ್ಯ ಘಟಕದ ಕಾರ್ಯದರ್ಶಿ ಜೀವನ್ ಕೊಲ್ಯ ಮಹಿಳೆಯರಿಗೆ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ಅರ್ಚನಾ ಎಂ. ಬಂಗೇರ ಧನ್ಯವಾದ ಸರ್ಮಪಣೆಗೈದರು.