03-02-2026, 8:00 PM
ಮಂಗಳೂರು : ಬಿಲ್ಲವ ಸಮಾಜದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಹಾಗೂ ಸಮಾಜಸೇವೆಯ ದೀರ್ಘ ಪಯಣದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯು ಶಾಶ್ವತ ಆಡಳಿತ ಕಚೇರಿ ನಿರ್ಮಾಣ ಎಂಬ ಮಹತ್ತರ ಸಂಕಲ್ಪವನ್ನು ಕೈಗೊಂಡಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಹೇಳಿದರು. ಸರಕಾರದಿಂದ ಮಂಜೂರಾದ ಸ್ವಂತ ನಿವೇಶನದಲ್ಲಿ ನೂತನ ಆಡಳಿತ ಕಚೇರಿ ಕಟ್ಟಡದ ನಿರ್ಮಾಣ ಕಾರ್ಯಕ್ಕೆ ಈಗಾಗಲೇ ಶುಭಾರಂಭ ಮಾಡಲಾಗಿದೆ. ಈ ಮಹತ್ವದ ಯೋಜನೆ ಯುವವಾಹಿನಿಯ ಸದಸ್ಯರ ದೇಣಿಗೆಯಿಂದಲೇ ಸಾಕಾರಗೊಳ್ಳಬೇಕು ಎಂಬುದು ಕೇಂದ್ರ ಸಮಿತಿಯ ದೃಢ […]
Read More
02-02-2026, 10:00 PM
ಮುಲ್ಲಕಾಡ್ : ಯುವವಾಹಿನಿ (ರಿ.) ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ನಾಗೇಶ್ ಅಮೀನ್ ಮುಲ್ಲಕಾಡ್ ಅವರ ಕುಟುಂಬಸ್ಥರ ಆಶ್ರಯದಲ್ಲಿ ನಡೆಸಿಕೊಡಲಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ಯಕ್ಷಗಾನ ಮಂಡಳಿಯ ಯಕ್ಷಗಾನ ಬಯಲಾಟವು ದಿನಾಂಕ 02-02-2026ರ ಸೋಮವಾರ ನಡೆಯಿತು. ಈ ಯಕ್ಷಗಾನ ಬಯಲಾಟದ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರಾದ ಹರೀಶ್ ಕೆ. ಸುವರ್ಣ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.ಈ ಸಮಾರಂಭದಲ್ಲಿ ಯುವವಾಹಿನಿ ಮಂಗಳೂರು ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಅನೇಕ ಸದಸ್ಯರು […]
Read More
01-02-2026, 1:00 PM
ಪಡೀಲು : ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನಿಯಮಿತ ಇವರ ಆಶ್ರಯದಲ್ಲಿ “ಆರೋಗ್ಯ ಸೇವಾ ಸಂಗಮ” ಎಂಬ ಶೀರ್ಷಿಕೆಯಡಿ 100ನೇ ಬೃಹತ್ ಉಚಿತ ವೈದ್ಯಕೀಯ, ನೇತ್ರ, ದಂತ ಹಾಗೂ ರಕ್ತದಾನ ಶಿಬಿರ, ವೈದ್ಯ ಸೇವಾ ಸಾಧಕರ ಅಭಿನಂದನಾ ಕಾರ್ಯಕ್ರಮ ಹಾಗೂ ಸಂಘದ ಹದಿನಾಲ್ಕನೇ ವಾರ್ಷಿಕೋತ್ಸವವು ದಿನಾಂಕ 01.02.2026ರ ಆದಿತ್ಯವಾರ ಪಡೀಲಿನ ಬೈರಾಡಿ ಕೆರೆಯ ಸಮೀಪದಲ್ಲಿರುವ ಆತ್ಮಶಕ್ತಿ ಸೌಧದಲ್ಲಿ ಯಶಸ್ವಿಯಾಗಿ ನಡೆಯಿತು. ಈ ಸಮಾರಂಭದ ಅಂಗವಾಗಿ ಶಿಬಿರಕ್ಕೆ ಸಹಯೋಗ ನೀಡಿದ ವಿವಿಧ ಸಂಘ–ಸಂಸ್ಥೆಗಳ ಗುರುತಿಸುವಿಕೆ ಮತ್ತು ಗೌರವ ಕಾರ್ಯಕ್ರಮವನ್ನು […]
Read More
27-01-2026, 9:00 PM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಘಟಕದ 2026-27 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಕೆ ಸುವರ್ಣ ಆಯ್ಕೆಯಾಗಿದ್ದಾರೆ ಅಧ್ಯಕ್ಷರು : ಹರೀಶ್ ಕೆ.ಸುವರ್ಣಪ್ರಥಮ ಉಪಾಧ್ಯಕ್ಷರು : ಯತೀಶ್ ಬಳಂಜದ್ವಿತೀಯ ಉಪಾಧ್ಯಕ್ಷರು : ಮಹೇಶ್ ಅಮೀನ್ಕಾರ್ಯದರ್ಶಿ : ಉಷಾ.ಕೆ ಪೂಜಾರಿಜೊತೆ ಕಾರ್ಯದರ್ಶಿ : ತಿಲಕ್ ರಾಜ್ ಸುವರ್ಣಕೋಶಾಧಿಕಾರಿ : ಚಂದ್ರಶೇಖರ್ ಕಿನ್ನಿಗೋಳಿ ವ್ಯಕ್ತಿತ್ವ ವಿಕಸನ ನಿರ್ದೇಶಕರು : ಶ್ರೀಕಾಂತ್ ಅಂಚನ್ಕ್ರೀಡಾ ನಿರ್ದೇಶಕರು : ಸುಜೀತ್ ಕೋಟಾನ್ಆರೋಗ್ಯ ನಿರ್ದೇಶಕರು : ಶಶೀಂದ್ರ ಪೂಜಾರಿಸಮಾಜ ಸೇವಾ ನಿರ್ದೇಶಕರು :ದಿನೇಶ್ […]
Read More
27-01-2026, 8:00 PM
ಮಂಗಳೂರು : ಯುವವಾಹಿನಿ ಸಂಸ್ಥೆಯು ತನ್ನ ಸಂಘಟನಾ ಚಟುವಟಿಕೆಗಳ ಮೂಲಕ ಸಮಾಜಮುಖಿ ಮೌಲ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ನಿರಂತರವಾಗಿ ಕೈಜೋಡಿಸುತ್ತಿದ್ದು, ಶೈಕ್ಷಣಿಕ ಪ್ರೋತ್ಸಾಹ, ಸೇವಾ ಕಾರ್ಯಗಳು ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಯುವಕರಲ್ಲಿ ಸಾಮಾಜಿಕ ಹೊಣೆಗಾರಿಕೆ, ಶಿಸ್ತು ಮತ್ತು ಸೇವಾಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಭಾರತೀಯ ವೈದ್ಯರ ಸಂಘದ ಅಧ್ಯಕ್ಷರಾದ ಡಾ. ಸದಾನಂದ ಪೂಜಾರಿ ತಿಳಿಸಿದ್ದಾರೆ.ಅವರು ದಿನಾಂಕ 27.01.2026 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ ಯುವವಾಹಿನಿ (ರಿ) ಮಂಗಳೂರು ಘಟಕದ 2026–27ನೇ ಸಾಲಿನ ನೂತನ […]
Read More
05-01-2026, 2:03 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ದಿನಾಂಕ: 05-01-2026 ರಂದು ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ಲಹರಿ ತಂಡ ಬಿಜೈ ಮಂಗಳೂರು ಇವರ ಸಹಯೋಗದಿಂದ ನೆರವೇರಿತು. ಯುವವಾಹಿನಿ (ರಿ.) ಮಂಗಳೂರು ಘಟಕದ ಒಂದನೇ ಉಪಾಧ್ಯಕ್ಷರು ಹರೀಶ್ ಕೆ. ಸುವರ್ಣ ಮತ್ತು ಸದಸ್ಯರು ಉಪಸ್ಥಿತಿ ಇದ್ದರು.
Read More
29-12-2025, 6:08 AM
ಮಂಗಳೂರು : ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯರು ಹಾಗೂ ಬ್ರಹ್ಮಶ್ರೀ ನಾರಾಯಣಗುರುಗಳ ಅನುಯಾಯಿಗಳ ತಂಡವು ದಿನಾಂಕ: 29- 12-2025 ರಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಕೇರಳದ ಶಿವಗಿರಿಯಲ್ಲಿ ಡಿಸಂಬರ್ 30, 31 ರಂದು ನಡೆಯಲಿರುವ ತೀರ್ಥಾಟನೆಯಲ್ಲಿ ಭಾಗವಹಿಸಲು ಪ್ರಯಾಣ ಬೆಳೆಸಿದರು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.)ಮಂಗಳೂರು ಘಟಕದ ಮಾಜಿ ಅಧ್ಯಕ್ಷರುಗಳಾದ ಹರೀಶ್ ಪೂಜಾರಿ, ಹರೀಶ್ ವಿ. ಪಚ್ಚನಾಡಿ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು.
Read More
12-12-2025, 5:36 AM
25-11-2025 ಸಂಗೀತ ಎಂಬುದು ಮನಸ್ಸುಗಳನ್ನು ಜೋಡಿಸುವ ಶಕ್ತಿ, ಜನರನ್ನು ಒಗ್ಗೂಡಿಸುವ ಶಕ್ತಿ ಹಾಗೂ ನಮ್ಮ ಮನಸ್ಸಿನ ಭಾವನೆಗಳನ್ನು ಸುಂದರವಾಗಿ ವ್ಯಕ್ತಪಡಿಸುವ ಒಂದು ಕಲೆಯಾಗಿದೆ ಎಂದು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆಯ ಉಪಾಧ್ಯಕ್ಷರಾದ ದೀಕ್ಷಿತ್ ಅತ್ತಾವರ ಹೇಳಿದರು. ಅವರು ಘಟಕದ ಆಶ್ರಯದಲ್ಲಿ ನಡೆದ ಸಂಗೀತ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮಾತನಾಡಿ ಪ್ರತಿಯೊಬ್ಬ ವ್ಯಕ್ತಿಯಲ್ಲೂ ಪ್ರತಿಭೆಯೊoದಿರುತ್ತದೆ ಅಂತಹ ಪ್ರತಿಭೆಗಳನ್ನು ಮುನ್ನೆಲೆಗೆ ತರಲು ಮಂಗಳೂರು ಘಟಕವೂ […]
Read More
04-12-2025, 5:38 PM
ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮಭೂಮಿ ಕೇರಳದ ಶಿವಗಿರಿಗೆ ಯಾತ್ರೆಯನ್ನು ಅ. 11ರಿಂದ ಅ. 14ರವರೆಗೆ ಹಮ್ಮಿಕೊಳ್ಳಲಾಗಿತ್ತು. ಅ. 11ರಂದು ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ 49 ಭಕ್ತರನ್ನು ಒಳಗೊಂಡ ಯಾತ್ರಾರ್ಥಿಗಳ ತಂಡ ಹೊರಟು, ಮರುದಿನ ಬೆಳಗ್ಗೆ ಶಿವಗಿರಿ ತಲುಪಿ ಶಾರದಾ ಮಠ, ವೈದಿಕ ಮಠ ಮತ್ತು ಗುರು ಸಮಾಧಿಯನ್ನು ವೀಕ್ಷಿಸಿತು. ಬೆಳಗಿನ ಉಪಹಾರದ ನಂತರ ಚಂಬಲಂತಿಯಲ್ಲಿ ಗುರುಗಳ ಜನ್ಮಗ್ರಹ ದರ್ಶನ ಪಡೆದ ಯಾತ್ರಾರ್ಥಿಗಳು, ಬಳಿಕ ಗುರುಗಳು ಸ್ಥಾಪಿಸಿದ ಮೂರನೇ ದೇವಸ್ಥಾನವಾದ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ […]
Read More