ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಿರಂತರವಾಗಿ ನಡೆಯುತ್ತಾ ಬಂದಿರುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ 06-04-2026 ರಂದು ಸೋಮವಾರ ಸಂಜೆ ಕ್ಷೇತ್ರದಲ್ಲಿ ಭಕ್ತಿಪೂರ್ವಕವಾಗಿ ಜರುಗಿತು.

ಈ ವಾರದ ಭಜನಾ ಸೇವೆಯನ್ನು ಶ್ರೀ ರಾಘವೇಂದ್ರ ಮಾತೃ ಭಜನಾ ಮಂಡಳಿ, ಕನ್ಯಾನ ಇವರ ಸಹಯೋಗದೊಂದಿಗೆ ನಡೆಸಿಕೊಡಲಾಯಿತು. ಸಂಜೆ 5.30ಕ್ಕೆ ಆರಂಭಗೊಂಡ ಭಜನಾ ಕಾರ್ಯಕ್ರಮದಲ್ಲಿ ಮಂಡಳಿಯ ಸದಸ್ಯರು ವಿವಿಧ ಭಕ್ತಿಗೀತೆ ಹಾಗೂ ನಾಮ ಸಂಕೀರ್ತನೆಗಳ ಮೂಲಕ ಭಕ್ತಾದಿಗಳನ್ನು ಭಕ್ತಿ ಪರವಶರನ್ನಾಗಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದು, ಭಜನಾ ಸೇವೆಯಲ್ಲಿ ಪಾಲ್ಗೊಂಡರು. ಭಜನೆಯ ಅಂತ್ಯದಲ್ಲಿ ಮಂಡಳಿಯ ಸದಸ್ಯರನ್ನು ಗೌರವಿಸಲಾಯಿತು. ಕ್ಷೇತ್ರದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಕೃಪೆಗೆ ಪಾತ್ರರಾದರು


