28-08-2024, 5:20 AM
ಮೂಡುಬಿದಿರೆ : ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಜಗತ್ತಿಗೆ ಸಾರಿದ ನಾರಾಯಣಗುರುಗಳು ಅಸ್ಪ್ರಶ್ಯತೆಯ ವಿರುದ್ಧ ಮೌನ ಕ್ರಾಂತಿಯ ಮೂಲಕ ಸಾಮಾಜಿಕ ಸುಧಾರಣೆಯನ್ನು ತನ್ನ ಜೀವಿತಾವಧಿಯಲ್ಲೇ ಸಾಧಿಸಿ ತೋರಿಸಿದ ಮನುಕುಲದ ಪರಿವರ್ತನಾ ಚಿಂತನೆಯ ವಿಶ್ವಗುರು ಬ್ರಹ್ಮಶ್ರೀ ನಾರಾಯಣಗುರುಗಳು ಎಂದು ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಮ್.ಮೋಹನ್ ಆಳ್ವ ಅಭಿಪ್ರಾಯ ಪಟ್ಟರು. ಅವರು ದಿನಾಂಕ 28-08-2024ನೇ ಬುಧವಾರದಂದು ಬ್ರಹ್ಮಶ್ರೀ ನಾರಾಯಣಗುರುಗಳ 170ನೇ ಜನ್ಮ ದಿನಾಚರಣೆಯ ಪ್ರಯುಕ್ತ ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ, ಮೂಡುಬಿದಿರೆ ಆಳ್ವಾಸ್ ಶಿಕ್ಷಣ […]
Read More
27-08-2024, 4:48 AM
ಬಂಟ್ವಾಳ: ಮೇಲು ಕೀಳೆಂದು ಬೀಗುವ, ಬಿಗು ನೀತಿಯ ಖಂಡಿಸಿ ಪಾಮರಪರ ಶಕ್ತಿಯಾಗಿ, ಏಕ ದೇವತಾರಾಧನೆಯ ಬೋಧಿಸಿ, ಸರ್ವರಿಗೂ ಸಮಾನ ಅವಕಾಶದ ಏರು ದ್ವನಿಯಾಗಿ ಹೋರಾಡಿ ಮೌನ ಕ್ರಾಂತಿಯ ಮೂಲಕ ಪಂಡಿತ – ಪಾಮರರೆಂಬ ಬೇಧವಿಲ್ಲದೆ ಕೃತಕ ಗೋಡೆಯನ್ನೊಡೆದು ಸಕಲರೊಳಗೊಂದಾದ ಅಗೋಚರ ಶಕ್ತಿಯ ಅರಿವು ಮೂಡಿಸಿದ ಮಹಾಶಕ್ತಿ ನಾರಾಯಣ ಗುರುವರ್ಯರು ಸಕಲ ಶೋಷಿತ ಸಮಾಜದ ಆಶಾಕಿರಣ ಎಂದು ಯುವವಾಹಿನಿ (ರಿ) ಬಂಟ್ವಾಳ ಘಟಕದ ಮಾಜಿ ಅಧ್ಯಕ್ಷ ರಾಜೇಶ್ ಸುವರ್ಣ ತಿಳಿಸಿದರು. ಅವರು ಹರೀಶ್ ಸಾಲ್ಯಾನ್ ಅಜೆಕಲ ಇವರ ಮನೆಯಲ್ಲಿ […]
Read More
26-08-2024, 3:01 PM
ಬಂಟ್ವಾಳ : ನಾರಾಯಣ ಗುರುಗಳ ತತ್ವ ಸಂದೇಶದ ಆದರ್ಶಗಳನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕು, ಈ ಆದರ್ಶಗಳು ವಿದ್ಯಾರ್ಥಿಗಳ ಮುಂದಿನ ಭವಿಷ್ಯದ ದಾರಿ ದೀಪವಾಗಿದೆ ಎಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ತಿಳಿಸಿದರು. ಅವರು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ಇದರ ಆಶ್ರಯದಲ್ಲಿ ಕರ್ನಾಟಕ ಸರಕಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಶ್ರೀನಾರಾಯಣ ಗುರು ವಸತಿ ಶಾಲೆ ಪೂಂಜಾಲಕಟ್ಟೆ ಇವರ ಸಹಯೋಗದೊಂದಿಗೆ ಶ್ರೀ ನಾರಾಯಣ ಗುರು ವಸತಿ ಶಾಲೆ ಪೂಂಜಾಲಕಟ್ಟೆಯಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ […]
Read More
26-08-2024, 2:51 PM
ಬಂಟ್ವಾಳ: ದೇಶದ ಭವಿಷ್ಯವು ಯುವಶಕ್ತಿಯ ಕೈಯಲ್ಲಿದೆ. ನಾವು ನಿತ್ಯ ಬಳಸುವ ಬೆಲೆಬಾಳುವ ವಸ್ತುಗಳಿಗಿಂತಲೂ ಅಮೂಲ್ಯವಾದದು ಯುವಶಕ್ತಿ. ಯುವ ಮನಸ್ಸುಗಳಿಗೆ ಸರಿಯಾದ ದಾರಿ ಮತ್ತು ಮಾರ್ಗದರ್ಶನವನ್ನು ನೀಡಿದರೆ ಅವರೇ ಆಸ್ಥಿಯಾಗುತ್ತಾರೆ. ಎಲ್ಲಾ ಧರ್ಮಗಳಿಗಿಂತಲೂ ಮಾನವ ಧರ್ಮವೇ ಶ್ರೇಷ್ಠವಾದದ್ದು. ವ್ಯಕ್ತಿ ಗೌರವ, ಸ್ನೇಹ,ವಿಶ್ವಾಸದ ಒಳ್ಳೆಯ ನಡೆನುಡಿಯ ಮೂಲಕ ಶ್ರೇಷ್ಠ ವ್ಯಕ್ತಿತ್ವವನ್ನು ನಿರ್ಮಾಣ ಮಾಡಬಹುದು. ನಾರಾಯಗುರುಗಳ ಚಿಂತನೆ ಯುವಸಮುದಾಯಕ್ಕೆ ಚೈತನ್ಯವನ್ನು ತುಂಬುವ ಕೆಲಸವನ್ನು ಮಾಡುತ್ತದೆ. ಎಲ್ಲರೊಳಗೊಂದಾಗಿ, ಒಳ್ಳೆಯ ಮನುಷ್ಯರಾಗಿ ಬದುಕುವುದು ನಾರಾಯಣ ಗುರು ಚಿಂತನೆಯ ಆಶಯವಾಗಿದೆ. ಯುವ ಪೀಳಿಗೆಗೆ ನಮ್ಮ ದೇಶದ […]
Read More
25-08-2024, 3:03 PM
ಕೆಂಜಾರು: ಯುವವಾಹಿನಿ (ರಿ ) ಕೆಂಜಾರು – ಕರಂಬಾರು ಘಟಕದ ವತಿಯಿಂದ 6 ನೇ ವರ್ಷದ ಶ್ರೀ ಕೃಷ್ಣ ವೇಷ ಸ್ಪರ್ಧೆ (ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ರಾಧಾ-ಕೃಷ್ಣ ಹಾಗೂ ಯಶೋಧ ಕೃಷ್ಣ) ಒಟ್ಟು 5 ವಿಭಾಗಗಳಲ್ಲಿ ಶ್ರೀ ದೇವಿ ಭಜನಾ ಮಂದಿರ ಕೆಂಜಾರು- ಕರಂಬಾರು ಇದರ ಹೊರಾಂಗಣದ ಮುಕ್ತ ವೇದಿಕೆಯಲ್ಲಿ 25-08-2024 ರಂದು ಜರಗಿತು. ಬೆಳಿಗ್ಗೆ 9.30 ಕ್ಕೆ ಶ್ರೀ ದೇವಿಗೆ ಪೂಜೆ ಸಲ್ಲಿಸಿ, ಉದ್ಘಾಟನಾ ಸಭಾ ಕಾರ್ಯಕ್ರಮ ಜರಗಿತು. ಘಟಕದ ಅಧ್ಯಕ್ಷ ವಿನೋದ್ […]
Read More
24-08-2024, 3:32 AM
ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥವನ್ನು ದಿನಾಂಕ 24-08-2024ನೇ ಶನಿವಾರ ಕುದ್ರೋಳಿ ಶ್ರೀ ಗ್ರಂಥ ಗೋಕರ್ಣನಾಥ ಕ್ಷೇತ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು. ಜಗತ್ತಿಗೆ ಮಾನವೀಯತೆಯ ಸಂದೇಶ ನೀಡಿದವರಲ್ಲಿ ಬುದ್ಧ ಮತ್ತು ಬಸವಣ್ಣರ ಬಳಿಕದ ಸ್ಥಾನ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಸಲ್ಲುತ್ತದೆ ಎಂದು ಗ್ರಂಥ […]
Read More
22-08-2024, 3:14 AM
ಶಕ್ತಿನಗರ : ದಿನಾಂಕ : 22-08-2024 ರಂದು ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕುಂಟಲ್ಪಾಡಿ ಇಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜಯಂತಿಯನ್ನು ಬಹಳ ವಿಜೃಂಭಣೆಯಿಂದ ನಡೆಸಲಾಯಿತು. ಪೂಜೆಯ ಮುಂದಾಳತ್ವವನ್ನು ಯುವ ವಾಹಿನಿ (ರಿ) ಶಕ್ತಿನಗರ ಘಟಕದ ನಾರಾಯಣ ಗುರುತತ್ವ ಪ್ರಚಾರಕರಾದ ಶ್ರೀ ಯೋಗೀಶ್ ಸುವರ್ಣ ಇವರು ವಹಿಸಿಕೊಂಡಿದ್ದರು. ಮೊದಲಿಗೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ಕುಂಟಾಲ್ಪಾಡಿ ಇಲ್ಲಿ ಮುಂಜಾನೆ ಗಣಹೋಮವನ್ನು ನಡೆಸಿ ಮಂದಿರವನ್ನು ಶುದ್ಧೀಕರಿಸಲಾಯಿತು. ನಂತರ ಬ್ರಹ್ಮಶ್ರೀ ನಾರಾಯಣ ಗುರುಗಳ ಮೂರ್ತಿಯನ್ನು ಮಾಜಿ ಅಧ್ಯಕ್ಷರಾದ ಶ್ರೀನಿವಾಸ ಪೂಜಾರಿ ಇವರ ಮನೆಯಲ್ಲಿ ಪ್ರತಿಷ್ಠಾಪಿಸಲಾಯಿತು. […]
Read More
20-08-2024, 11:10 AM
ಬೆಳ್ತಂಗಡಿ: ಜಗತ್ತಿಗೆ ವಿಶ್ವ ಮಾನವ ಸಂದೇಶವನ್ನ ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಗುರು ಜಯಂತಿ ಕಾರ್ಯಕ್ರಮ ಗುರು ನಮನವನ್ನ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದಲ್ಲಿ ಆಚರಿಸಲಾಯಿತು. ಗುರುಗಳಿಗೆ ಪುಷ್ಪನಮನವನ್ನ ಅರ್ಪಿಸಿ, ಗುರು ಶ್ಲೋಕ ಪಠಿಸಿ ಸರಳವಾಗಿ ಗುರುಗಳ ಜೀವನ ಸಾಧನೆಯ ವಿನಿಮಯ ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ ಅಧ್ಯಕ್ಷರಾದ ಸದಾಶಿವ ಪೂಜಾರಿ ಊರ, ನಿಕಟ ಪೂರ್ವಾಧ್ಯಕ್ಷ ಅಶ್ವಥ್ ಕುಮಾರ್, ಮಾಜಿ ಅಧ್ಯಕ್ಷರಾದ ಪ್ರಸಾದ್ ಎಮ್ .ಕೆ, ಪ್ರಶಾಂತ್ ಮಚ್ಚಿನ, ಸುಜಾತ ಅಣ್ಣಿ […]
Read More
20-08-2024, 6:23 AM
ಕೂಳೂರು : ಬ್ರಹ್ಮಶ್ರೀ ನಾರಾಯಣ ಗುರು ವರ್ಯರ 170 ನೇ ಜನುಮ ದಿನದ ಪ್ರಯುಕ್ತ ಯುವವಾಹಿನಿ (ರಿ) ಕೂಳೂರು ಘಟಕದ ವತಿಯಿಂದ ಸಮಾಜ ಸೇವಾ ನಿರ್ದೇಶಕರು ಜಯಲಕ್ಷ್ಮಿ ಇವರ ಸಂಚಾಲಕತ್ವದಲ್ಲಿ ದಿನಾಂಕ 20-08-2024 ರಂದು ಸಂಜೆ ಚಿರಂತನ ಚಾರಿಟೇಬಲ್ ಟ್ರಸ್ಟ್ ಇಡ್ಯಾ ಸುರತ್ಕಲ್ ಇಲ್ಲಿಗೆ ಭೇಟಿ ನೀಡಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರು ಇಂದಿರಾ ಸುರೇಶ್ ವಹಿಸಿದ್ದರು. ನಾರಾಯಣ ಗುರುಗಳ ಭಾವಚಿತ್ರಕ್ಕೆ ಆಶ್ರಮದ ಹಿರಿಯರು ದಯಾನಂದ ಮೆಂಡನ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಘಟಕದ […]
Read More
20-08-2024, 6:12 AM
ಬೆಂಗಳೂರು : ದಿನಾಂಕ 20/8/2024 ರಂದು ಬ್ರಹ್ಮಶ್ರೀ ನಾರಾಯಣ ಗುರುವರ್ಯರ 170 ನೇ ಜನ್ಮದಿನೋತ್ಸವದ ಅಂಗವಾಗಿ ಗುರುಸ್ಮರಣ ಭಜನೆ ಕಾರ್ಯಕ್ರಮವು ಘಟಕದ ಎರಡನೇ ಉಪಾಧ್ಯಕ್ಷರಾದ ಪ್ರಸಾದ್ ಕುಮಾರ್ ಇವರ ವಿಜಯನಗರದ ಸ್ವಗೃಹದಲ್ಲಿ ರಾತ್ರಿ ಜರುಗಿತು. ಈ ಪುಣ್ಯ ಸುಸಂದರ್ಭದಲ್ಲಿ ಅಧ್ಯಕ್ಷರು, ಕಾರ್ಯದರ್ಶಿ, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿಗಳು, ಗೌರವ ಸಲಹೆಗಾರರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರ ಪಾಲ್ಗೊಳ್ಳುವಿಕೆಯಲ್ಲಿ ಗುರುಸ್ಮರಣೆ ನಡೆಯಿತು. ಬಡವರ, ಶೋಷಿತ ಜನರ ಏಳಿಗೆಗಾಗಿ ಸಂಗ್ರಾಮದ ಹೋರಾಟಗಳನ್ನು ಮಾಡದೆ ಸಾಮಾಜಿಕವಾಗಿ, ಧಾರ್ಮಿಕವಾಗಿ, ಶೈಕ್ಷಣಿಕವಾಗಿ ಸಮಾಜದ […]
Read More