ಬಜಪೆ: ಯುವವಾಹಿನಿ ಬಜಪೆ ಘಟಕದ ವತಿಯಿಂದ ಮೇ ತಿಂಗಳ ‘ಮನೆ ಮನೆ ಭಜನಾ ಸಂಕೀರ್ತನೆ’ ಕಾರ್ಯಕ್ರಮವು ದಿನಾಂಕ 17.05.2026 ರಂದು ಸಂಜೆ 6.00 ರಿಂದ 7.30 ರವರೆಗೆ ಅತ್ಯಂತ ಶ್ರದ್ಧಾ-ಭಕ್ತಿಭಾವದಿಂದ ಜರಗಿತು.

ಘಟಕದ ಮಾಜಿ ಅಧ್ಯಕ್ಷರಾದ ದೇವರಾಜ್ ಅಮೀನ್ ಹಾಗೂ ಕಾರ್ಯದರ್ಶಿ ಸುಚಿತ ದೇವರಾಜ್ ದಂಪತಿಗಳ ನಿವಾಸವಾದ ಬಜಪೆ-ಕಟೀಲ್ ರಸ್ತೆಯ “ಶಿವಗಿರಿ” ಯಲ್ಲಿ ಈ ಭಕ್ತಿಪೂರ್ವಕ ಭಜನಾ ಸೇವೆ ನೆರವೇರಿತು. ದೇವರಾಜ್ ಅಮೀನ್ ಅವರ ತಂದೆ-ತಾಯಿಯವರ 45ನೇ ವಿವಾಹ ವಾರ್ಷಿಕೋತ್ಸವದ ಶುಭ ಸಂದರ್ಭದಲ್ಲಿ ಈ ವಿಶೇಷ ಭಜನಾ ಸೇವೆಯನ್ನು ಹಮ್ಮಿಕೊಳ್ಳಲಾಗಿತ್ತು. ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ, ಸಂಚಾಲಕರಾದ ದಿವ್ಯ ಸುನಿಲ್,
ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಸದಸ್ಯರು ಸದಸ್ಯರು ಉಪಸ್ಥಿತರಿದ್ದರು. ಭಜನಾ ಕಾರ್ಯಕ್ರಮದ ಬಳಿಕ ನೆರೆದ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಮಾಡಲಾಯಿತು. ಇಂದಿನ ಆಧುನಿಕ ಯುಗದಲ್ಲಿ ಮುಂದಿನ ಪೀಳಿಗೆಗೆ ಭಕ್ತಿ, ಸತ್ಸಂಸ್ಕಾರ ಹಾಗೂ ಭಾರತೀಯ ಪರಂಪರೆಯ ಮೌಲ್ಯಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಯುವವಾಹಿನಿ ಹಮ್ಮಿಕೊಳ್ಳುತ್ತಿರುವ ‘ಮನೆ ಮನೆ ಭಜನಾ ಸಂಕೀರ್ತನೆ’ ಅಭಿಯಾನಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.


