ಪೆರ್ಮಂಕಿ : ಯುವವಾಹಿನಿ (ರಿ.) ಪೆರ್ಮಂಕಿ ಘಟಕದ ವತಿಯಿಂದ ಗೆಜ್ಜೆಗಿರಿ ಶ್ರೀ ಆದಿ ಧೂಮಾವತಿ ಶ್ರೀದೇಯಿ ಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿಯ ಕಲ್ಕುಡ-ಕಲ್ಲುರ್ಟಿ ದೈವದ ಮಹಾತ್ಮೆ ಸಾರುವ ‘ನಾಗರತಿ’ ಎಂಬ ಕಾಲಮಿತಿ ಯಕ್ಷಗಾನ ಪ್ರದರ್ಶನವು ಪೆರ್ಮಂಕಿಯ ವಿಶಾಲ್ ಗಾರ್ಡನ್‌ನಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ನೆರವೇರಿತು.

ಸನ್ಮಾನ ಮತ್ತು ಆರ್ಥಿಕ ನೆರವು:
ಇದೇ ಸಂದರ್ಭದಲ್ಲಿ ಉದ್ಯಮ ರಂಗದ ಜೊತೆಗೆ ಸಾಮಾಜಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಪ್ರಮುಖ ಉದ್ಯಮಿ, ಸಮಾಜ ಸೇವಕ ಶೈಲೇಂದ್ರ ವೈ. ಸುವರ್ಣ ಅವರನ್ನು ಘಟಕದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಯುವವಾಹಿನಿಯ ಸಾಮಾಜಿಕ ಕಳಕಳಿಯ ಭಾಗವಾಗಿ, ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಕುಟುಂಬವೊಂದಕ್ಕೆ ಈ ಸಂದರ್ಭದಲ್ಲಿ ಆರ್ಥಿಕ ನೆರವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಹರೀಶ್ ಕೆ. ಪೂಜಾರಿ, ಪೆರ್ಮಂಕಿ ಘಟಕದ ಅಧ್ಯಕ್ಷ ಶಶಿಕುಮಾರ್ ಕರಂದಾಡಿ ಹಾಗೂ ಘಟಕದ ಸ್ಥಾಪಕಾಧ್ಯಕ್ಷ ದಿನೇಶ್ ಅಂಚನ್ ಪೆರ್ಮಂಕಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಅಶೋಕ್ ಕುಮಾರ್ ಸುರತ್ಕಲ್, ಬದಿನಡಿ ಕ್ಷೇತ್ರದ ಕೇಶವ ಯಾನೆ ಅಂತ ಪೂಜಾರಿ ಕರಂದಾಡಿ, ರುಕ್ಮಯ ಪೂಜಾರಿ, ಹರಿಕೇಶ್ ಶೆಟ್ಟಿ ಉಳಾಯಿಬೆಟ್ಟು, ಗುಣಕರ ಸಾಲ್ಯಾನ್, ಸುದರ್ಶನ ಶೆಟ್ಟಿ, ಗಂಗಾಧರ ಮಾಸ್ಟರ್, ಕಮಲಾಕ್ಷ ತಲ್ಲಿಮಾರ್, ದಯಾವತಿ ಹಾಗೂ ಸುರೇಶ್ ಕುಮಾರ್ ಮಲ್ಲೂರು ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಶ್ರೀನಾಥ್ ಪೆರ್ಮಂಕಿ ಸ್ವಾಗತಿಸಿದರು. ಕೀರ್ತಿರಾಜ್ ಕರಂದಾಡಿ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆ ಮಾಡಿದರು.


