16-06-2024, 6:22 AM
ವಿಟ್ಲ : ಯುವವಾಹಿನಿ (ರಿ.) ವಿಟ್ಲ ಘಟಕ ಬಿಲ್ಲವ ಸಂಘ ಮತ್ತು ಮಹಿಳಾ ಘಟಕ ವಿಟ್ಲ ಇದರ ಜಂಟಿ ಆಶ್ರಯದಲ್ಲಿ ಸರಕಾರಿ ಲೇಡಿ ಗೋಷನ್ ಆಸ್ಪತ್ರೆ ಮಂಗಳೂರು ಇದರ ಸಹಯೋಗದಲ್ಲಿ ದಿನಾಂಕ 16-06-2024 ರಂದು ರಕ್ತದಾನ ಶಿಬಿರ ನಡೆಯಿತು. ಬಿಲ್ಲವ ಸಂಘ (ರಿ.) ವಿಟ್ಲ ದ ಅಧ್ಯಕ್ಷರಾದ ಶ್ರೀ ಮಾಧವ ಪೂಜಾರಿ ಪಟ್ಲ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕೆ ಚಾಲನೆ ನೀಡಿದರು. ಶಿಬಿರದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ವಿಟ್ಲ ಘಟಕದ ಅಧ್ಯಕ್ಷರಾದ ರಾಜೇಶ್ ವಿಟ್ಲ ವಹಿಸಿದ್ದರು. ಮುಖ್ಯ […]
Read More
14-06-2024, 5:07 PM
ಮೂಲ್ಕಿ: ಯುವವಾಹಿನಿ(ರಿ.) ಮೂಲ್ಕಿ ಘಟಕದ 2024-25 ರ ಸಾಲಿನ ನೂತನ ಕಾರ್ಯಕಾರಿ ಸಮಿತಿ ಪದಗ್ರಹಣ ಸಮಾರಂಭ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ದಿ 14-06-2024 ರಂದು ಮೂಲ್ಕಿ ಬಿಲ್ಲವ ಸಂಘದಲ್ಲಿ ಜರಗಿತು. ಮೂಲ್ಕಿ ಯುವವಾಹಿನಿ(ರಿ.) ಘಟಕದ ನೂತನ ಅಧ್ಯಕ್ಷರು ರಿತೇಶ್ ಅಂಚನ್ ಅವರ ನೂತನ ತಂಡಕ್ಕೆ ಪ್ರತಿಜ್ಞಾ ವಿಧಿ ಭೋದಿಸಿ, ಯುವವಾಹಿನಿ(ರಿ) ಕೇಂದ್ರ ಸಮಿತಿ ಅಧ್ಯಕ್ಷರು ಹರೀಶ್ ಕೆ. ಪೂಜಾರಿ ಮೂಲ್ಕಿ ಘಟಕವು ಶೈಕ್ಷಣಿಕ, ಸಾಮಾಜಿಕ ಸೇವಾ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ಒತ್ತು ನೀಡುತ್ತಿರುವುದು ಶ್ಲಾಘನಿಯ ಎಂದು […]
Read More
09-06-2024, 3:16 PM
ಮಂಗಳೂರು: ಯುವವಾಹಿನಿ (ರಿ) ಶಕ್ತಿನಗರ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸಹಯೋಗದಲ್ಲಿ 09-06-2024ನೇ ಆದಿತ್ಯವಾರ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ ಮತ್ತು ಸಂಘಟನಾ ಕಾರ್ಯದರ್ಶಿಯಾದ ದೀಕ್ಷಿತ್ ಪೂಜಾರಿ ಮತ್ತು ಘಟಕದ ಅಧ್ಯಕ್ಷರಾದ ಗಣೇಶ್ ಕೆ. ಮಹಾಕಾಳಿ, ಉಪಾಧ್ಯಕ್ಷರಾದ ತುಕಾರಾಂ, ಕಾರ್ಯದರ್ಶಿ ಅಕ್ಷತಾ ಚರಣ್ ಇವರು ಉಪಸ್ಥಿತರಿದ್ದರು. ಉತ್ತಮ ಶ್ರೇಣಿಯಲ್ಲಿ ಅಂಕ ಪಡೆದ […]
Read More
09-06-2024, 3:13 PM
ಕುಪ್ಪೆಪದವು: ಯುವವಾಹಿನಿ(ರಿ.) ಕುಪ್ಪೆಪದವು ಘಟಕದ ವತಿಯಿಂದ 09-06-2024 ನೇ ಆದಿತ್ಯವಾರ ನಾಗಂದಡಿ ಸಭಾಭವನದಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮವು ನಡೆಯಿತು. ಯುವವಾಹಿನಿ(ರಿ.) ಕುಪ್ಪೆಪದವು ಘಟಕದ ಅಧ್ಯಕ್ಷರು ಅಕ್ಷಿತ್ ಕುಮಾರ್ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ನಿಕಟಪೂರ್ವ ಅಧ್ಯಕ್ಷರು ಸೌಮ್ಯಾ ಕೋಟ್ಯಾನ್, ಕಾರ್ಯದರ್ಶಿ ರೇಣುಕಾ ಸುನಿಲ್, ಕೋಶಾಧಿಕಾರಿ ದೇಜಪ್ಪ ಪೂಜಾರಿ ಉಪಸ್ಥಿತರಿದ್ದರು. ಸುಮಾರು 56 ಮಕ್ಕಳು ಕಾರ್ಯಕ್ರಮದ ಪ್ರಯೋಜನ ಪಡೆದುಕೊಂಡರು. ಮಾಜಿ ಅಧ್ಯಕ್ಷರು ಅಜಯ್ ಅಮೀನ್ ಸ್ವಾಗತಿಸಿದರು. ಅಧ್ಯಕ್ಷರು ತಮ್ಮ ಅಧ್ಯಕ್ಷೀಯ ಮಾತನ್ನಾಡಿದರು. ಕಾರ್ಯದರ್ಶಿ ರೇಣುಕಾ ಸುನಿಲ್ ನಿರೂಪಿಸಿ […]
Read More
09-06-2024, 3:01 PM
ಮಾಣಿ: ಪರಿಸರ ದಿನಾಚರಣೆ ಕಾರ್ಯಕ್ರಮ ಮಾಡುವ ಮೂಲಕ ಪರಿಸರವನ್ನು ಉಳಿಸಿ, ಬೆಳೆಸುವಂತ ಕೆಲಸವಾಗಬೇಕು. ಇಂತಹ ಕಾರ್ಯಕ್ರಮ ಕೇವಲ ಒಂದು ದಿನಕ್ಕೆ ಸಿಮಿತವಾಗದೆ ಪ್ರತಿದಿನವು ಪರಿಸರವನ್ನು ಪೋಷಿಸುವಂತ ಕೆಲಸ ಆಗಬೇಕು. ಜಗದ ಪ್ರತಿಯೊಬ್ಬನಿಗೂ ಪರಿಸರ ಅತ್ಯಮೂಲ್ಯ ಮತ್ತು ಅತ್ಯಗತ್ಯ. ಪ್ರಕೃತಿಯಿಂದ ನಮಗೆ ಉಪಯೋಗವಿದೆ, ಗಾಳಿ, ನೆರಳು, ಹೀಗೆ ವಿವಿಧ ರೀತಿಯಲ್ಲಿ ಪರಿಸರವು ನಮಗೆ ಸಹಕಾರಿಯಾಗಿದೆ ಎಂದು ಬಂಟ್ವಾಳದ ವಲಯ ಅರಣ್ಯಾಧಿಕಾರಿಯಾದ ಪ್ರಫುಲ್ ಶೆಟ್ಟಿ ಹೇಳಿದರು. ಅವರು ದಿನಾಂಕ 09-06-2024ರ ಆದಿತ್ಯವಾರದಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಪೆರಾಜೆ ಇಲ್ಲಿ […]
Read More
06-06-2024, 4:25 PM
ಮಂಗಳೂರು : ಯುವವಾಹಿನಿ (ರಿ) ಬಜಪೆ ಘಟಕ ಹಾಗೂ ಜೈ ತುಲುನಾಡ್ (ರಿ) ಮಂಗಳೂರು ಘಟಕದ ವತಿಯಿಂದ ಜೂನ್ 16 ರ ಭಾನುವಾರದಂದು ಬಜಪೆಯ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀ ಕ್ಷೇತ್ರ ದೊಡ್ಡಿಕಟ್ಟ ಸ್ವಯಂಭೂಲಿಂಗೇಶ್ವರ ದೇವಸ್ಥಾನದಲ್ಲಿ “ಬಲೆ ದೈ ನಡ್ಕ” ಎಂಬ ಕಾರ್ಯಕ್ರಮವು ನಡೆಯಿತು. ಪ್ರಾಥಮಿಕ ಆರೋಗ್ಯ ಕೇಂದ್ರ ಬಜ್ಪೆ ಇಲ್ಲಿನ ವೈದ್ಯಾಧಿಕಾರಿ ಡಾ. ಶಂಕರ್ ನಾಗ್ ಹಾಗೂ ಜೈ ತುಲುನಾಡ್ (ರಿ) ಮಂಗಳೂರು ಘಟಕದ ಅಧ್ಯಕ್ಷರಾದ ಮತ್ತು ಯುವವಾಹಿನಿ (ರಿ) ಬಜಪೆ ಘಟಕದ ಅಧ್ಯಕ್ಷರಾದ […]
Read More
05-06-2024, 2:47 PM
ಕೊಲ್ಯ: ಈ ಭೂಮಿ ಮೇಲೆ ಪ್ರಕೃತಿ ನಮಗೆ ತಾಯಿ ಇದ್ದಂತೆ, ನಮ್ಮ ಮನೆಯಲ್ಲಿ ನಮ್ಮ ಅಮ್ಮನನ್ನು ಆರೈಕೆ ಮಾಡುವಂತೆ ನಾವು ಗಿಡ ಮರಗಳನ್ನು ಉಳಿಸಿ ಬೆಳೆಸಿ, ಪ್ರಕೃತಿಯಲ್ಲಿ ದೇವರನ್ನು ಕಾಣಬೇಕು, ಪರಿಸರವನ್ನು ಪ್ರೀತಿಯಿಂದ ಆರೈಕೆ ಮಾಡಿದರೆ ಮಾತ್ರ ಮುಂದಿನ ಪೀಳಿಗೆಗೆ ಸ್ವಚ್ಛ ಪರಿಸರ ನೋಡಲು ಸಾಧ್ಯ ಎಂದು ಪರಿಸರ ಪ್ರೇಮಿ, ವೃಕ್ಷ ತಪಸ್ವಿ ಮಾಧವ ಉಳ್ಳಾಲ್ ಅಭಿಪ್ರಾಯಪಟ್ಟರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಯುವವಾಹಿನಿ(ರಿ.) ಕೊಲ್ಯ ಘಟಕದ ಸಾಪ್ತಾಹಿಕ ಸಭೆಯಲ್ಲಿ, ಪರಿಸರ ಸಂರಕ್ಷಣೆಯಲ್ಲಿ ನಾಗರೀಕರ ಕರ್ತವ್ಯದ ಕುರಿತು, ಕಳೆದ […]
Read More
02-06-2024, 2:59 PM
ಉಡುಪಿ: ಯುವವಾಹಿನಿ(ರಿ.) ಉಡುಪಿ ಘಟಕದ ವತಿಯಿಂದ ಕುಟುಂಬೋತ್ಸವವು ಕಟಪಾಡಿ ಉದ್ಭವ್ ವಿಂಟೇಜ್ ರೆಸಾರ್ಟ್ ನಲ್ಲಿ ಆದಿತ್ಯವಾರ 02-06-2024 ರಂದು ಆಯೋಜಿಸಿತ್ತು. ಕುಟುಂಬೋತ್ಸವಕ್ಕೆ ಹಾಜರಾದ ಸದಸ್ಯರನ್ನು ಆರತಿ ಬೆಳಗಿಸಿ ಉದ್ಘಾಟಿಸಿದರು. ಕುಂಕುಮ ಹಚ್ಚಿ, ಪುಷ್ಪ ಪಕಳೆಗಳಿಂದ ಸ್ವಾಗತಿಸಲಾಯಿತು. ಸಹಭೋಜನ ಸವಿಯನುಂಡು, ಸಂಘ ಜೀವನದ ಸುಖವನನುಭವಿಸಿ, ಬೆಳಗಿನಿಂದ ಸಂಜೆಯವರೆಗೂ ಎಲ್ಲರೂ ಜೊತೆಗಿದ್ದು ಊಟ ಉಪಹಾರ, ಒಂದಷ್ಟು ಆಟೋಟ, ಪ್ರತಿಭಾ ಪ್ರದರ್ಶನ, ಬಹುಮಾನ ವಿತರಣೆ ಇತ್ಯಾದಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸವಿ ನೆನಪುಗಳ ಬುತ್ತಿಯನ್ನು ಹೊತ್ತೊಯ್ದ ರಸಾನುಭವ.
Read More
02-06-2024, 2:55 PM
ಬೆಂಗಳೂರು: ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ, ಸ್ವಾಮಿ ವಿವೇಕಾನಂದರ ಚಿಂತನಾಧಾರೆ ಮತ್ತು ಅಂಬೇಡ್ಕರ್ ಅವರ ಪ್ರಾಯೋಗಿಕ ಬದುಕಿನಿಂದ ಯುವವಾಹಿನಿ ಸಂಘಟನೆಯು ಪ್ರೇರಣೆ ಪಡೆದು, ಮುನ್ನಡೆದರೆ ಸಮಾಜದಲ್ಲಿ ಇನ್ನಷ್ಟು ಸುಧಾರಣೆ ಕಾಣಲು ಸಾಧ್ಯ ಎಂದು ಮಂಗಳೂರು ಕುದ್ರೋಳಿ ನಾರಾಯಣ ಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಹೇಳಿದರು. ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ನಾಗಪುರ ವಾರ್ಡ್ ಡಾ.ರಾಜ್ಕುಮಾರ್ ಸಭಾಭವನದಲ್ಲಿ ಜೂ.2 ರಂದು ನಡೆದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ.) ಬೆಂಗಳೂರು ಘಟಕದ 2024-25ರ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ […]
Read More
02-06-2024, 2:32 PM
ಕಂಕನಾಡಿ: ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ನಲ್ಲಿ ಒಂದು ದಿನದ ಕಿರುಪ್ರವಾಸ ಕಾರ್ಯಕ್ರಮವನ್ನು ದಿನಾಂಕ 02-06-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರಾದ ಹರಿಣಿ ಹಾಗೂ ಬೇಬಿ ಗೋಪಾಲ್ ಇವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಶ್ರೀಯುತ ಲೋಕೇಶ್ ಅಮೀನ್, ಕಾರ್ಯದರ್ಶಿ ಮಮತಾ ತೇಜ್ ಪಾಲ್ ಇವರುಗಳ ಮುಂದಾಳತ್ವದಲ್ಲಿ ಸದಸ್ಯರು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 51 ಮಂದಿ ಪ್ರವಾಸಿಗರು ಬಸ್ಸಿನಲ್ಲಿ ಪ್ರಯಾಣ ಹೊರಟು ರೆಸಾರ್ಟ್ ತಲುಪಿ ಅಲ್ಲಿ ಉಪಾಹಾರವನ್ನು ಸೇವಿಸಿ ನಂತರ ಬೋಟಿನಲ್ಲಿ ಪ್ರಯಾಣಿಸಿ ಸುತ್ತಲೂ ನೀರಿನಿಂದ […]
Read More