ದಿನಾಂಕ 05-10-2025 ಆದಿತ್ಯವಾರ
ಮುಂಜಾನೆ ಬ್ರಹ್ಮಶ್ರೀ ನಾರಾಯಣ ಗುರು ಧ್ಯಾನ ಮಂದಿರ ಕೊಲ್ಯದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿ, 56 ಯಾತ್ರಿಗಳ ತಂಡ ಕೊಲ್ಯದಿಂದ ಸುಸಜ್ಜಿತ ಬಸ್ಸಿನ ಮೂಲಕ ಪ್ರಯಾಣ ಹೊರಟಿತು.
ಚಿತ್ರಾಪುರ ದುರ್ಗಾಪರಮೇಶ್ವರಿ ದೇವಸ್ಥಾನ, ನಾಗ ಕ್ಷೇತ್ರ ಪಾವಂಜೆ ದೇವಸ್ಥಾನ ಮತ್ತು ಬಪ್ಪನಾಡು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ದೇವಿಯ ದರ್ಶನ ಪಡೆದ ನಂತರ ಬೆಳಗ್ಗಿನ ಉಪಹಾರವನ್ನು ಸ್ವೀಕರಿಸಲಾಯಿತು. ತದ ನಂತರ ಇತ್ತೀಚೆಗೆ ನೂತನವಾಗಿ ನಿರ್ಮಾಣಗೊಂಡ ಕಾಪು ಮಾರಿಯಮ್ಮ ದೇವಸ್ಥಾನಕ್ಕೆ ಭೇಟಿ ನೀಡಲಾಯಿತು. ಕಡಿಯಾಳಿ ಶ್ರೀ ಮಹಿಷಮದಿ೯ನಿ ದೇವಸ್ಥಾನದಲ್ಲಿ ವಿಶೇಷವಾಗಿ ತಿರುಗುವ ಮರದ ಮುಚ್ಚಿಗೆಯನ್ನು ವೀಕ್ಷಿಸಿದ ನಂತರ ಪುಣ್ಯಕ್ಷೇತ್ರ ಶ್ರೀ ಅಮೃತೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಪಕ್ಕದಲ್ಲೆ ವಿಶಾಲ ಕೆರೆಯ ಸಮೀಪವಿದ್ದ ಬ್ರಹ್ಮಶ್ರೀ ನಾರಾಯಣ ಗುರು ಮಂದಿರಕ್ಕೆ ಭೇಟಿ ನೀಡಲಾಯಿತು.
ಅಲ್ಲಿಂದ ಮುಂದಕ್ಕೆ ಕಮಲಶಿಲೆ ದೇವಸ್ಥಾನಕ್ಕೆ ಹೊರಟು, ದೇವರ ದರ್ಶನ ಪಡೆದು, ಅನ್ನಪ್ರಸಾದ ಸ್ವೀಕರಿಸಿ ಸಮೀಪದಲ್ಲಿದ್ದ ಕಮಲಶಿಲೆ ಗುಹೆಗೆ ಭೇಟಿ ನೀಡಿ, ಹಲವಾರು ವರುಷಗಳ ಇತಿಹಾಸ ಹೊಂದಿರುವ ಗುಹೆಯ ಮಾಹಿತಿಯನ್ನು ಅರ್ಚಕರಿಂದ ತಿಳಿದುಕೊಳ್ಳಲಾಯಿತು.
ಹಟ್ಟಿಯಂಗಡಿ ಗಣಪತಿ ದೇವರ ಆರ್ಶಿವಾದ ಪಡೆದು ಕೋಡಿ ಕಡಲ ಕಿನಾರೆಯಲ್ಲಿ ಒಂದಷ್ಟು ಹೊತ್ತು ಕಳೆದು ಮುಸ್ಸಂಜೆ ಹೊತ್ತಿನಲ್ಲಿ ಕುಂಭಾಶಿ ಗಣಪತಿ ದೇವಸ್ಥಾನಕ್ಕೆ ತೆರಳಿ ರಾತ್ರಿಯ ಪೂಜೆಯನ್ನು ವೀಕ್ಷಿಸಲಾಯಿತು..
ಹಳೆಯಂಗಡಿಯಲ್ಲಿ ರಾತ್ರಿ ಸಹಭೋಜನ ಮಾಡಿ ಮರಳಿ ಗೂಡಿಗೆ ತಲುಪಿದೆವು. ಘಟಕದ ಎಲ್ಲಾ ಸದಸ್ಯರು ತಮಗೆ ನೀಡಿದ ಜವಾಬ್ದಾರಿಗಳನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿದರು.






