
16-10-2026, 9:00 PM
ಕೊಲ್ಯ, ಅ. 16: ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ನವರಾತ್ರಿ ಮಹೋತ್ಸವದ ಪ್ರಯುಕ್ತ ಶುಕ್ರವಾರ ನೆತ್ತಿಲ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ನವರಾತ್ರಿ ಪೂಜೆ ಹಾಗೂ ಅನ್ನದಾನ ಸೇವೆ ಭಕ್ತಿಭಾವದಿಂದ ನೆರವೇರಿತು. ಸಂಜೆ ನಡೆದ ಭಜನಾ ಸೇವೆಯಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪಾಲ್ಗೊಂಡು ಶ್ರೀ ದೇವಿಯ ಕೀರ್ತನೆಗಳನ್ನು ಹಾಡಿದರು. ಬಳಿಕ ನಡೆದ ಮಹಾಪೂಜೆ ಹಾಗೂ ಮಹಾಮಂಗಳಾರತಿಯಲ್ಲಿ ಸರ್ವರೂ ಭಕ್ತಿಯಿಂದ ಪ್ರಾರ್ಥಿಸಿದರು. ದೇವಸ್ಥಾನದ ಅರ್ಚಕರು ಯುವವಾಹಿನಿ ಘಟಕದ ಸರ್ವ ಸದಸ್ಯರ ಪರವಾಗಿ ಪ್ರಾರ್ಥಿಸಿ ಘಟಕದ […]
Read More

16-10-2026, 9:00 PM
ವಿಟ್ಲ, ಅ. 16: ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ದುರ್ಗಾಪೂಜೆಯ ಪ್ರಯುಕ್ತ ಘಟಕದ ಸದಸ್ಯೆ ನಿರ್ಮಲ ಸುರೇಂದ್ರ ಅವರ ಮನೆಯಲ್ಲಿ ಶುಕ್ರವಾರ ಸಂಜೆ ಭಜನಾ ಸಂಕೀರ್ತನೆ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು. ಸಂಜೆ 6.15ರಿಂದ ರಾತ್ರಿ 8 ಗಂಟೆಯವರೆಗೆ ನಡೆದ ಭಜನಾ ಸೇವೆಯಲ್ಲಿ ಯುವವಾಹಿನಿ ಘಟಕದ ಸದಸ್ಯರು ಭಕ್ತಿಭಾವದಿಂದ ಶ್ರೀ ದುರ್ಗಾದೇವಿಯ ನಾಮಸ್ಮರಣೆ ಹಾಗೂ ಕೀರ್ತನೆಗಳನ್ನು ಹಾಡಿದರು. ಭಜನಾ ಸಂಕೀರ್ತನೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳು ಭಕ್ತಿಪರವಶರಾದರು. ಈ ಭಜನಾ ಸೇವೆಯಲ್ಲಿ ಘಟಕದ ಅಧ್ಯಕ್ಷ ಆನಂದ, ಉಪಾಧ್ಯಕ್ಷ ಕೇಶವ […]
Read More

15-10-2026, 9:00 PM
ಯುವವಾಹಿನಿ (ರಿ.), ಮಂಗಳೂರು ಮಹಿಳಾ ಘಟಕದ ವತಿಯಿಂದ ನವರಾತ್ರಿಯ ಅಂಗವಾಗಿ ದಿನಾಂಕ 15-10-2026, ಗುರುವಾರದಂದು ಸಂಜೆ 7:00 ರಿಂದ 9:00 ಗಂಟೆಯವರೆಗೆ ಶ್ರೀ ನವದುರ್ಗಾಂಬಿಕಾ ದೇವಸ್ಥಾನ, ನೆಕ್ಕಿಲದಲ್ಲಿ ಭಜನಾ ಸೇವೆ ನಡೆಯಿತು. ಸುಮಧುರ ಭಜನೆಗಳನ್ನು ಹಾಡಿ, ಭಕ್ತಿಭಾವದಿಂದ ದೇವಿಯ ಆರಾಧನೆಯನ್ನು ನೆರವೇರಿಸಲಾಯಿತು. ನಂತರ ಮಹಾಪೂಜೆಯಲ್ಲಿ ಭಾಗವಹಿಸಿ, ದೇವಿಯ ಆಶೀರ್ವಾದವನ್ನು ಪಡೆಯಲಾಯಿತು.
Read More

15-10-2026, 9:00 PM
ಮಂಗಳೂರು: ದಸರಾ ಸಂಭ್ರಮದ ಪ್ರಯುಕ್ತ ಕುದ್ರೋಳಿ ಕ್ಷೇತ್ರದಲ್ಲಿ ರರಾಜಿಸುತ್ತಿರುವ ಶಾರದಾ ಮಾತೆಯ ಸನ್ನಿಧಿಯಲ್ಲಿ ಭಕ್ತಿಭಾವದ ರಾಗ ತಾಳಗಳ ನಾದವನ್ನು ಪಸರಿಸುತ್ತಾ ಶಾರದಾ ಮಾತೆಯ ಆಶೀರ್ವಾದ ಪಡೆಯಲಾಯಿತು. ದಿನಾಂಕ: 15-10-2026, ಗುರುವಾರ ದಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ಮಾತೆಯ ಸನ್ನಿಧಿಯಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ನವರಾತ್ರಿಯ ಅಂಗವಾಗಿ ಮಧ್ಯಾಹ್ನ 12 ರಿಂದ 1:00 ಗಂಟೆಯವರೆಗೆ ಭಜನಾ ಸೇವೆಯು ನೆರವೇರಿತು. ಭಕ್ತಿಭಾವದಿಂದ ದೇವರ ನಾಮಸ್ಮರಣೆ ಆರಾಧನೆಯನ್ನು ಘಟಕದ ಭಜನಾ ತಂಡದಿಂದ ಸೇವೆ ಸಲ್ಲಿಸಲಾಯಿತು. ಭಜನಾ […]
Read More

14-10-2026, 9:00 PM
ಕೊಲ್ಯ, ಅ. 14: ರಾಸಾಯನಿಕ ಪದಾರ್ಥಗಳ ಬಳಕೆಯ ಆತಂಕದ ನಡುವೆ ಆರೋಗ್ಯಕರ ಆಹಾರ ಸೇವನೆ ಹಾಗೂ ಪರಿಸರ ಸಂರಕ್ಷಣೆಯ ಉದ್ದೇಶದಿಂದ ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಸದಸ್ಯರಿಗಾಗಿ ‘ನಮ್ಮ ಕೈತೋಟ, ನಮ್ಮ ಆಹಾರ’ ಎಂಬ ವಿನೂತನ ಕಾರ್ಯಕ್ರಮವನ್ನು ಅಕ್ಟೋಬರ್ 14ರಂದು ಕೊಲ್ಯದಲ್ಲಿ ಆಯೋಜಿಸಲಾಯಿತು. ಮನೆಯ ಕೈತೋಟದಲ್ಲಿ ಸಾವಯವ ಪದ್ಧತಿಯಲ್ಲಿ ತರಕಾರಿಗಳನ್ನು ಬೆಳೆಸಿ, ಅವುಗಳನ್ನು ಆಹಾರವಾಗಿ ಬಳಸುವ ಮೂಲಕ ಆರೋಗ್ಯ ಕಾಪಾಡುವುದರ ಜೊತೆಗೆ ಕೃಷಿ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಈ ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿತ್ತು. ಉಳ್ಳಾಲ ವಲಯದ […]
Read More

14-10-2026, 9:00 PM
ಬಜಪೆ, ಅ. 14: ನವರಾತ್ರಿ ಮಹೋತ್ಸವದ ಅಂಗವಾಗಿ ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ಸುಂಕದಕಟ್ಟೆಯ ಶ್ರೀ ಅಂಬಿಕಾ ಅನ್ನಪೂರ್ಣೇಶ್ವರಿ ದೇವಸ್ಥಾನದಲ್ಲಿ ಭಜನಾ ಸಂಕೀರ್ತನೆ ಭಕ್ತಿಭಾವದಿಂದ ನೆರವೇರಿತು. ಶಕ್ತಿ ಸ್ವರೂಪಿಣಿಯಾದ ಶ್ರೀ ದೇವಿಯನ್ನು ಆರಾಧಿಸುವ ನವರಾತ್ರಿಯ ನಾಲ್ಕನೇ ದಿನವಾದ ಬುಧವಾರ, ಅಕ್ಟೋಬರ್ 14ರಂದು ಸಂಜೆ 6ರಿಂದ ರಾತ್ರಿ 8ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಯುವವಾಹಿನಿ ಬಜಪೆ ಘಟಕದ ಸದಸ್ಯರು ಶ್ರೀ ದೇವಿಯ ನಾಮಸ್ಮರಣೆ ಹಾಗೂ ಭಜನೆಗಳನ್ನು ಭಕ್ತಿಯಿಂದ ಹಾಡಿ, ಕ್ಷೇತ್ರದಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದರು. ಭಜನಾ ಕಾರ್ಯಕ್ರಮದ […]
Read More

14-10-2026, 8:00 PM
ಮಂಗಳೂರು, ಅ. 14: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಕ್ಟೋಬರ್ 14ರಂದು ಕೊಂಚಾಡಿಯ ಶ್ರೀ ದುರ್ಗಾಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9ರಿಂದ 10.30ರವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯೆಯರು ಭಕ್ತಿಭಾವದಿಂದ ಪಾಲ್ಗೊಂಡು, ದೇವಿಯ ಸ್ತುತಿಗೀತೆಗಳನ್ನು ಹಾಡುವ ಮೂಲಕ ಭಕ್ತಿರಸವನ್ನು ಪಸರಿಸಿದರು. ಸಾಮೂಹಿಕ ಭಜನೆಯ ಮೂಲಕ ಆಧ್ಯಾತ್ಮಿಕ ವಾತಾವರಣ ನಿರ್ಮಾಣಗೊಂಡಿತು. ಭಕ್ತಿಪೂರ್ವಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸದಸ್ಯೆಯರು ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಕೃಪೆಗೆ ಪಾತ್ರರಾದರು.
Read More

12-10-2026, 9:00 PM
ಹೆಜಮಾಡಿ, ಅ. 12: ಯುವವಾಹಿನಿ (ರಿ.) ಹೆಜಮಾಡಿ ಘಟಕದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಹೆಜಮಾಡಿಯ ನಾರಾಯಣಗುರು ಮಂದಿರದಲ್ಲಿ ನವರಾತ್ರಿ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವು ಭಕ್ತಿಭಾವ ಮತ್ತು ಶ್ರದ್ಧಾಪೂರ್ವಕವಾಗಿ ನೆರವೇರಿತು. ನವರಾತ್ರಿಯ ಎರಡನೇ ದಿನದ ಶುಭ ಸಂದರ್ಭದಲ್ಲಿ ಗುರುಮಂದಿರದಲ್ಲಿ ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಘಟಕದ ಸದಸ್ಯರು ಹಾಗೂ ಭಕ್ತರು ಪೂಜೆಯಲ್ಲಿ ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾದರು. ಪೂಜೆಯ ಬಳಿಕ ಘಟಕದ ವತಿಯಿಂದ ಅನ್ನಸಂತರ್ಪಣೆ ಆಯೋಜಿಸಲಾಯಿತು. ಭಕ್ತರು ಪ್ರಸಾದ ಸ್ವೀಕರಿಸಿ ಕಾರ್ಯಕ್ರಮದ ಧಾರ್ಮಿಕ ವಾತಾವರಣದಲ್ಲಿ ಭಾಗಿಯಾದರು. […]
Read More

12-10-2026, 9:00 PM
ವಿಟ್ಲ, ಅ. 12: ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ವಿಟ್ಲ ಸೀಮೆಯ ಒಡೆಯ ಶ್ರೀ ಉಳ್ಳಾಲ್ತಿ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಸಂಜೆ ಭಜನಾ ಸಂಕೀರ್ತನೆ ಕಾರ್ಯಕ್ರಮವು ಭಕ್ತಿಭಾವದಿಂದ ನೆರವೇರಿತು. ಸಂಜೆ 6.15ರಿಂದ ರಾತ್ರಿ 8 ಗಂಟೆಯವರೆಗೆ ನಡೆದ ಭಜನಾ ಸಂಕೀರ್ತನೆಯಲ್ಲಿ ಭಕ್ತಿಗೀತೆಗಳ ಗಾಯನದ ಮೂಲಕ ಭಕ್ತಿಮಯ ವಾತಾವರಣ ನಿರ್ಮಾಣಗೊಂಡಿತು. ಶ್ರದ್ಧೆ ಮತ್ತು ಭಕ್ತಿಯಿಂದ ನಡೆದ ಈ ಭಜನಾ ಸೇವೆಯು ಭಾಗವಹಿಸಿದ ಭಕ್ತಾದಿಗಳನ್ನು ಭಕ್ತಿರಸದಲ್ಲಿ ಮಿಂದೇಳುವಂತೆ ಮಾಡಿತು. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) […]
Read More

12-10-2026, 8:00 PM
ಮಾಣಿ, ಅ. 12: ನವರಾತ್ರಿ ಉತ್ಸವದ ಅಂಗವಾಗಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಅಕ್ಟೋಬರ್ 12ರಂದು ಗೆಜ್ಜೆಗಿರಿ ನಂದನ ಬಿತ್ತಿಲು ಸನ್ನಿಧಾನದಲ್ಲಿ ಭಜನಾ ಸಂಕೀರ್ತನೆಯನ್ನು ಭಕ್ತಿಭಾವದಿಂದ ನಡೆಸಲಾಯಿತು. ಈ ಸಂದರ್ಭದಲ್ಲಿ ಘಟಕದ ಮಹಿಳಾ ನಿರ್ದೇಶಕಿ ಪುಷ್ಪಶ್ರೀ ನಾಗೇಶ್, ಮಾಜಿ ಅಧ್ಯಕ್ಷರಾದ ನಾಗೇಶ್ ಪೂಜಾರಿ ಕೊಂಕಣಪದವು, ಜನಾರ್ದನ ಪೂಜಾರಿ ಕೊಡಂಗೆ, ಯಶೋಧರ, ಲೋಕೇಶ್ ಕೋರ್ಯಾ, ಸುಜಿತ್ ಬಾಕಿಲ ಹಾಗೂ ಪುಟಾಣಿ ಮಕ್ಕಳು ಭಾಗವಹಿಸಿ ಭಜನಾ ಸೇವೆ ಸಲ್ಲಿಸಿದರು. ಭಕ್ತಿಗೀತೆಗಳ ಗಾಯನ, ನಾಮಸ್ಮರಣೆ ಹಾಗೂ ಪುಟಾಣಿ ಮಕ್ಕಳ ಉತ್ಸಾಹಭರಿತ […]
Read More