ಯುವವಾಹಿನಿ (ರಿ.), ಮಂಗಳೂರು ಮಹಿಳಾ ಘಟಕದ ವತಿಯಿಂದ ನವರಾತ್ರಿಯ ಅಂಗವಾಗಿ ದಿನಾಂಕ 15-10-2026, ಗುರುವಾರದಂದು ಸಂಜೆ 7:00 ರಿಂದ 9:00 ಗಂಟೆಯವರೆಗೆ ಶ್ರೀ ನವದುರ್ಗಾಂಬಿಕಾ ದೇವಸ್ಥಾನ, ನೆಕ್ಕಿಲದಲ್ಲಿ ಭಜನಾ ಸೇವೆ ನಡೆಯಿತು.

ಸುಮಧುರ ಭಜನೆಗಳನ್ನು ಹಾಡಿ, ಭಕ್ತಿಭಾವದಿಂದ ದೇವಿಯ ಆರಾಧನೆಯನ್ನು ನೆರವೇರಿಸಲಾಯಿತು. ನಂತರ ಮಹಾಪೂಜೆಯಲ್ಲಿ ಭಾಗವಹಿಸಿ, ದೇವಿಯ ಆಶೀರ್ವಾದವನ್ನು ಪಡೆಯಲಾಯಿತು.







