ಮಂಗಳೂರು: ದಸರಾ ಸಂಭ್ರಮದ ಪ್ರಯುಕ್ತ ಕುದ್ರೋಳಿ ಕ್ಷೇತ್ರದಲ್ಲಿ ರರಾಜಿಸುತ್ತಿರುವ ಶಾರದಾ ಮಾತೆಯ ಸನ್ನಿಧಿಯಲ್ಲಿ ಭಕ್ತಿಭಾವದ ರಾಗ ತಾಳಗಳ ನಾದವನ್ನು ಪಸರಿಸುತ್ತಾ ಶಾರದಾ ಮಾತೆಯ ಆಶೀರ್ವಾದ ಪಡೆಯಲಾಯಿತು.

ದಿನಾಂಕ: 15-10-2026, ಗುರುವಾರ ದಂದು ಶ್ರೀ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ಶಾರದಾ ಮಾತೆಯ ಸನ್ನಿಧಿಯಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ನವರಾತ್ರಿಯ ಅಂಗವಾಗಿ ಮಧ್ಯಾಹ್ನ 12 ರಿಂದ 1:00 ಗಂಟೆಯವರೆಗೆ ಭಜನಾ ಸೇವೆಯು ನೆರವೇರಿತು.
ಭಕ್ತಿಭಾವದಿಂದ ದೇವರ ನಾಮಸ್ಮರಣೆ ಆರಾಧನೆಯನ್ನು ಘಟಕದ ಭಜನಾ ತಂಡದಿಂದ ಸೇವೆ ಸಲ್ಲಿಸಲಾಯಿತು. ಭಜನಾ ಸೇವೆಯ ನಂತರ ದೇವಿಯ ಪೂಜೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಶಾರದಾ ಮಾತೆಯ ಕೃಪೆಗೆ ಪಾತ್ರರಾದರು.
ಈ ಪುಣ್ಯ ಕಾರ್ಯದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ನಾಗೇಶ್ ಅಮೀನ್ ಮುಲ್ಲಕಾಡು, ಕಾರ್ಯದರ್ಶಿ ಉಷಾ, ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.







