ವಿಟ್ಲ, ಅ. 16: ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ದುರ್ಗಾಪೂಜೆಯ ಪ್ರಯುಕ್ತ ಘಟಕದ ಸದಸ್ಯೆ ನಿರ್ಮಲ ಸುರೇಂದ್ರ ಅವರ ಮನೆಯಲ್ಲಿ ಶುಕ್ರವಾರ ಸಂಜೆ ಭಜನಾ ಸಂಕೀರ್ತನೆ ಕಾರ್ಯಕ್ರಮವು ಶ್ರದ್ಧಾಭಕ್ತಿಯಿಂದ ನೆರವೇರಿತು.

ಸಂಜೆ 6.15ರಿಂದ ರಾತ್ರಿ 8 ಗಂಟೆಯವರೆಗೆ ನಡೆದ ಭಜನಾ ಸೇವೆಯಲ್ಲಿ ಯುವವಾಹಿನಿ ಘಟಕದ ಸದಸ್ಯರು ಭಕ್ತಿಭಾವದಿಂದ ಶ್ರೀ ದುರ್ಗಾದೇವಿಯ ನಾಮಸ್ಮರಣೆ ಹಾಗೂ ಕೀರ್ತನೆಗಳನ್ನು ಹಾಡಿದರು. ಭಜನಾ ಸಂಕೀರ್ತನೆಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಭಕ್ತಾದಿಗಳು ಭಕ್ತಿಪರವಶರಾದರು.
ಈ ಭಜನಾ ಸೇವೆಯಲ್ಲಿ ಘಟಕದ ಅಧ್ಯಕ್ಷ ಆನಂದ, ಉಪಾಧ್ಯಕ್ಷ ಕೇಶವ ಪೂಜಾರಿ ಸೇರಿದಂತೆ ಘಟಕದ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಶ್ರೀ ದುರ್ಗಾದೇವಿಯ ಕೃಪೆಗೆ ಪಾತ್ರರಾದರು.







