26-07-2026, 2:00 PM
ಮುಲ್ಕಿ, ಜುಲೈ 26: “ಇಂದು ದೇಶ-ವಿದೇಶಗಳಲ್ಲಿ ಆಟಿಡೊಂಜಿ ದಿನದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದರೆ, ಅದಕ್ಕೆ ಮೂಲ ಪ್ರೇರಣೆಯೇ ಯುವವಾಹಿನಿ (ರಿ.) ಮುಲ್ಕಿ ಘಟಕ” ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ್ ಹೆಜ್ಮಾಡಿ ಹೇಳಿದರು. ಅವರು ಜುಲೈ 26ರಂದು ಮುಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಆಯೋಜಿಸಲಾದ 24ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಿಂದಿನ ಕಾಲದ ಚಿಮಿನಿ ದೀಪ ಬೆಳಗಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ […]
Read More
25-07-2026, 6:00 PM
ಮಂಗಳೂರು, ಜುಲೈ 25: ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ವಿಶೇಷ ಕಾರ್ಯಕ್ರಮವು ಜುಲೈ 25ರಂದು ಶನಿವಾರ ಸಂಜೆ ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ವಹಿಸಿದ್ದರು. ಅಧ್ಯಕ್ಷೀಯ ಭಾಷಣದಲ್ಲಿ ಅವರು ಕಾರ್ಗಿಲ್ ವಿಜಯ ದಿವಸದ ಮಹತ್ವವನ್ನು ವಿವರಿಸಿ, ದೇಶದ ಗಡಿಯನ್ನು ರಕ್ಷಿಸಲು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡಿದ ವೀರ ಯೋಧರ ಶೌರ್ಯ, ತ್ಯಾಗ ಹಾಗೂ ದೇಶಭಕ್ತಿಯನ್ನು ಸ್ಮರಿಸಿದರು. ದೇಶಕ್ಕಾಗಿ ಸರ್ವಸ್ವವನ್ನು ಅರ್ಪಿಸಿದ […]
Read More
25-07-2026, 1:00 PM
ಬಂಟ್ವಾಳ, ಜು. 25 : ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಬಂಟ್ವಾಳ ಘಟಕದ ಆಶ್ರಯದಲ್ಲಿ ಐ.ಎಂ.ಎ. ಮಂಗಳೂರು ಶಾಖೆಯ ಸಹಕಾರದೊಂದಿಗೆ ಬಿ.ಸಿ.ರೋಡ್ ಬ್ರಹ್ಮಶ್ರೀ ನಾರಾಯಣಗುರು ಸಭಾಂಗಣದಲ್ಲಿ ಉಚಿತ ಆರೋಗ್ಯ ಮತ್ತು ಕಣ್ಣಿನ ತಪಾಸಣಾ ಶಿಬಿರ ಹಾಗೂ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಶನಿವಾರ ಯಶಸ್ವಿಯಾಗಿ ನಡೆಯಿತು. ಆರೋಗ್ಯ ಜಾಗೃತಿ ಹಾಗೂ ಸಮಾಜಸೇವೆಯ ಉದ್ದೇಶದಿಂದ ಆಯೋಜಿಸಲಾದ ಈ ಶಿಬಿರದಲ್ಲಿ ಯುವವಾಹಿನಿಯ ಸುಮಾರು 70 ಮಂದಿ ಸದಸ್ಯರು ಸೇರಿದಂತೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ […]
Read More
24-07-2026, 1:00 PM
ವಿಟ್ಲ, ಜು. 24 : ಯುವವಾಹಿನಿ (ರಿ.) ವಿಟ್ಲ ಘಟಕದ ವತಿಯಿಂದ ಘಟಕದ ಸದಸ್ಯೆ ಹರಿಣಾಕ್ಷಿ ಸುಧಾಕರ ಪೂಜಾರಿ ಅವರ ಮನೆಯಲ್ಲಿ ದುರ್ಗಾಪೂಜೆಯ ಪ್ರಯುಕ್ತ ಭಜನಾ ಸಂಕೀರ್ತನೆ ಕಾರ್ಯಕ್ರಮವು ಭಕ್ತಿಭಾವದಿಂದ ನಡೆಯಿತು. ಭಜನಾ ಸಂಕೀರ್ತನೆಯು ಶ್ರದ್ಧಾ-ಭಕ್ತಿಯಿಂದ ನೆರವೇರಿದ್ದು, ಭಕ್ತಾದಿಗಳಲ್ಲಿ ಆಧ್ಯಾತ್ಮಿಕ ವಾತಾವರಣವನ್ನು ಮೂಡಿಸಿತು. ದೇವಿಯ ಸನ್ನಿಧಿಯಲ್ಲಿ ನಡೆದ ಭಜನಾ ಸೇವೆಯಲ್ಲಿ ಯುವವಾಹಿನಿ ಸದಸ್ಯರು ಭಕ್ತಿಗೀತೆಗಳನ್ನು ಹಾಡುವ ಮೂಲಕ ದುರ್ಗಾದೇವಿಯ ಕೃಪೆಗೆ ಪ್ರಾರ್ಥನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ವಿಟ್ಲ ಘಟಕದ ಅಧ್ಯಕ್ಷ ಕೆ.ಟಿ. ಆನಂದ ಪೂಜಾರಿ, ಎರಡನೇ […]
Read More
23-07-2026, 10:00 PM
ಬಂಟ್ವಾಳ, ಜು. 23 : ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ಗುರುತತ್ವವಾಹಿನಿ 72ನೇ ಮಾಲಿಕೆ ಕಾರ್ಯಕ್ರಮವು ಗುರುವಾರ ಸಜೀಪ ಮುನ್ನೂರು ಗ್ರಾಮದ ಪುರುಷೋತ್ತಮ ಪೂಜಾರಿ ಮಿತ್ತಕಟ್ಟ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಗುರುತತ್ವ ಸಂದೇಶ ನೀಡಿದ ಜಯಶಂಕರ್ ಕಾನ್ಸಾಲೆ ಅವರು, ಶ್ರೀ ನಾರಾಯಣ ಗುರುಗಳ ತತ್ವಗಳು ಸಮಾಜದಲ್ಲಿ ಸಮಾನತೆ, ಸಹೋದರತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಶಾಶ್ವತ ಸಂದೇಶಗಳಾಗಿವೆ. ಗುರುಗಳ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ವ್ಯಕ್ತಿಯೊಂದಿಗೆ ಸಮಾಜವೂ ಅಭಿವೃದ್ಧಿಯತ್ತ ಸಾಗುತ್ತದೆ ಎಂದು ಹೇಳಿದರು. ಯುವವಾಹಿನಿ […]
Read More
22-07-2026, 2:00 PM
ಬೆಳ್ತಂಗಡಿ, ಜು. 22 : ಯುವವಾಹಿನಿ (ರಿ.) ಬೆಳ್ತಂಗಡಿ ಘಟಕದ 2026–27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯು ಮಹಾಮಂಡಲೇಶ್ವರ 1008 ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಕನ್ಯಾಡಿಯ ಶ್ರೀರಾಮ ಕ್ಷೇತ್ರದಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದರು. ಮಹಾಮಂಡಲೇಶ್ವರ ಶ್ರೀರಾಮ ಕ್ಷೇತ್ರ, ಕನ್ಯಾಡಿಯಲ್ಲಿ ನಡೆದ ಈ ಭೇಟಿಯು ಯುವವಾಹಿನಿಯ ನೂತನ ಸಾಲಿನ ಸಂಘಟನಾ ಹಾಗೂ ಸಮಾಜಮುಖಿ ಚಟುವಟಿಕೆಗಳಿಗೆ ಶುಭಾರಂಭದ ಸಂಕೇತವಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಅವರು, ಯುವವಾಹಿನಿಯು ಶಿಕ್ಷಣ, ಉದ್ಯೋಗ ಮತ್ತು […]
Read More
20-07-2026, 9:00 PM
ಮಂಗಳೂರು, ಜುಲೈ 20 : “ನಮಗೆ ಕನಸುಗಳಿರಬೇಕು. ಹಾಗೆಯೇ ದೂರದೃಷ್ಟಿಯೂ ಇರಬೇಕು. ನೀವು ಯಾವ ಕ್ಷೇತ್ರದಲ್ಲಿ ಉದ್ಯಮ ಆರಂಭಿಸಬೇಕೆಂದು ಬಯಸುತ್ತೀರೋ, ಆ ಕ್ಷೇತ್ರವನ್ನು ‘ನಾನು ಸಾಧಿಸಬಲ್ಲೆ’ ಎಂಬ ಆತ್ಮವಿಶ್ವಾಸದಿಂದ ಆಯ್ಕೆ ಮಾಡಿಕೊಂಡು, ಅದರ ಬಗ್ಗೆ ಸೂಕ್ತ ಮಾಹಿತಿಯನ್ನು ಪಡೆದುಕೊಳ್ಳಬೇಕು. ಹಿಂಜರಿಕೆಯಿಂದ ಸಮಯವನ್ನು ವ್ಯರ್ಥ ಮಾಡಿದರೆ, ಕಳೆದ ಸಮಯ ಮತ್ತೆ ಮರಳಿ ಸಿಗುವುದಿಲ್ಲ” ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಹೇಳಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, […]
Read More
20-07-2026, 8:00 PM
ಮಂಗಳೂರು, ಜುಲೈ 20: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ, ಸೋಮವಾರ ಸಂಜೆ ನಡೆದ ಭಜನಾ ಸೇವೆಯು ಭಕ್ತಿಭಾವದಿಂದ ನೆರವೇರಿತು. ಈ ವಾರದ ಭಜನಾ ಸೇವೆಯನ್ನು ಶ್ರೀ ನಾರಾಯಣ ಗುರು ಸೇವಾ ಮಂದಿರ, ಕೂಳೂರು ಇವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಭಜನಾ ತಂಡದ ಸದಸ್ಯರು ಹರಿನಾಮ ಸ್ಮರಣೆಯೊಂದಿಗೆ ಭಕ್ತಿರಸಪೂರ್ಣ ಭಜನೆಗಳನ್ನು ಹಾಡುವ ಮೂಲಕ ಶ್ರೀ ಗೋಕರ್ಣನಾಥ ಹಾಗೂ ಬ್ರಹ್ಮಶ್ರೀ […]
Read More
20-07-2026, 3:38 PM
ಕೊಲ್ಯ ಜುಲೈ 19 : ಯುವವಾಹಿನಿ (ರಿ) ಕೊಲ್ಯ ಘಟಕದ 2026-27 ನೇ ಸಾಲಿನ ಅಧ್ಯಕ್ಷರಾಗಿ ಜೀವನ್ ಕೊಲ್ಯ ಆಯ್ಕೆಯಾಗಿದ್ದಾರೆ 2026-27 ನೇ ಸಾಲಿನ ಕಾರ್ಯಕಾರಿ ಸಮಿತಿಅಧ್ಯಕ್ಷರು : ಜೀವನ್ ಕೊಲ್ಯಪ್ರಥಮ ಉಪಾಧ್ಯಕ್ಷರು : ಜೀವನ್ ಬೆರಿಕೆದ್ವಿತೀಯ ಉಪಾಧ್ಯಕ್ಷರು : ಲತೀಶ್ ಪಾಪುದಡಿಕಾರ್ಯದರ್ಶಿ : ಮುಕೇಶ್ ಕಿನ್ಯಜೊತೆ ಕಾರ್ಯದರ್ಶಿ : ಭಾಸ್ಕರ್ ಮಡ್ಯಾರ್ಕೋಶಾಧಿಕಾರಿ : ಅನಿತಾ ಸುಂದರ್ ನಿರ್ದೇಶಕರುನಾರಾಯಣ ಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರು : ಶಶಿಕಾಂತ್ ಪರ್ಯಾತ್ತೂರ್ವ್ಯಕ್ತಿತ್ವ ವಿಕಸನ ನಿರ್ದೇಶಕರು : ಸವಿತಾ ಬಂಗೇರಕ್ರೀಡಾ […]
Read More
19-07-2026, 8:00 PM
ಸುಳ್ಯ, ಜುಲೈ 19 : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಜೂನ್ ತಿಂಗಳ ‘ಗುರುಸ್ಪೂರ್ತಿ’ ಕಾರ್ಯಕ್ರಮವು ಘಟಕದ ಪೂರ್ವಾಧ್ಯಕ್ಷ ಸುನಿಲ್ ಪೂಜಾರಿ ಕಳಂಜಪಟ್ಟೆ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಹೊನ್ನಪ್ಪ ಕೈಂದಾಡಿ ಅವರು ನಾರಾಯಣಗುರುಗಳ ಸಂದೇಶವನ್ನು ನೀಡುತ್ತಾ, ಗುರುಗಳ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಕರೆ ನೀಡಿದರು. ಯುವವಾಹಿನಿ (ರಿ.) ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ […]
Read More