ಸುಳ್ಯ, ಜುಲೈ 19 : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಜೂನ್ ತಿಂಗಳ ‘ಗುರುಸ್ಪೂರ್ತಿ’ ಕಾರ್ಯಕ್ರಮವು ಘಟಕದ ಪೂರ್ವಾಧ್ಯಕ್ಷ ಸುನಿಲ್ ಪೂಜಾರಿ ಕಳಂಜಪಟ್ಟೆ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು.

ಕಾರ್ಯಕ್ರಮದಲ್ಲಿ ಹೊನ್ನಪ್ಪ ಕೈಂದಾಡಿ ಅವರು ನಾರಾಯಣಗುರುಗಳ ಸಂದೇಶವನ್ನು ನೀಡುತ್ತಾ, ಗುರುಗಳ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಕರೆ ನೀಡಿದರು.
ಯುವವಾಹಿನಿ (ರಿ.) ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಅಲೆಕ್ಕಾಡಿ ಹಾಗೂ ಯುವವಾಹಿನಿ ತಾಲೂಕು ಘಟಕದ ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕ ರಮೇಶ್ ಜಯನಗರ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಭಜನಾ ಕಾರ್ಯಕ್ರಮ ನಡೆಯಿತು. ನೂತನ ಪ್ರವೀಣ್ ನೆಟ್ಟಾರ್ ಕಾರ್ಯಕ್ರಮ ನಿರೂಪಿಸಿದರೆ, ಚಂದ್ರಶೇಖರ ಹೈದಂಗೂರು ವಂದಿಸಿದರು.


