ಯುವವಾಹಿನಿ ಡೆನ್ನಾನ ಡೆನ್ನನ – 2022 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಯುವವಾಹಿನಿ ಬೆಳ್ತಂಗಡಿ ಘಟಕ
21-08-2022, 2:48 PM
21-08-2022, 8:23 AM
ಕಟಪಾಡಿ :- ಯುನೈಟೆಡ್ ಕಿಂಗ್ಡಮ್ ನ ಬರ್ಮಿಂಗ್ಹ್ಯಾಮ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ವೇಯ್ಟ್ ಲಿಪ್ಟ್ ವಿಭಾಗದಲ್ಲಿ ದೇಶಕ್ಕೆ ಚೊಚ್ಚಲ ಪದಕ ಪಡೆದು ದೇಶದ ಕೀರ್ತಿ ಪತಾಕೆಯನ್ನು ಹಾರಿಸಿದ ಗುರುರಾಜ್ ಪೂಜಾರಿ ಇವರನ್ನು ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಿಸಿ ಅಭಿನಂದಿಸಲಾಯಿತು. ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಗ್ರಹದಲ್ಲಿ ಜರಗಿದ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಉಡುಪಿ ಘಟಕದ ಆತಿಥ್ಯದಲ್ಲಿ ಜರಗಿದ ಅಂತರ್ ಘಟಕ ಡೆನ್ನಾನ ಡೆನ್ನನ 2022 ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ […]
21-08-2022, 8:12 AM
ಕಟಪಾಡಿ :- ನಮ್ಮ ನಡವಳಿಕೆಯನ್ನು ರೂಪಿಸಲು ಸಾಂಸ್ಕೃತಿಕ ಚಟುವಟಿಕೆಗಳು ಪರೋಕ್ಷವಾಗಿ ಸಹಾಯ ಮಾಡುತ್ತಿದೆ. ಭಾಷೆ , ಸಂಸ್ಕೃತಿಯ ಒಡನಾಟದಿಂದ ಉತ್ತಮ ನಡವಳಿಕೆ ಮೂಡಲು ಸಾಧ್ಯ. ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಸಮಾಜವನ್ನು ತಿದ್ದಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವುದು ಸಾಧ್ಯ ಎಂದು ಇಂಧನ ಹಾಗೂ ಕನ್ನಡ ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಹೇಳಿದರು. ಅವರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಹಾಗೂ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ […]
16-08-2022, 5:02 PM
ಕೊಲ್ಯ :- ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯದಲ್ಲಿ ತಾ. 16 ಆಗಸ್ಟ್ 2022 ರಂದು ಗುರುಗಳಾದ ಡಾ. ಅರುಣ್ ಉಳ್ಳಾಲ್ ರವರಿಂದ ಓಂಕಾರದೊಂದಿಗೆ ಆರಂಭಗೊಂಡು ಗಣಪತಿ ಸ್ತುತಿ, ಗುರುಸ್ತುತಿ ಮುಖೇನ ತರಗತಿಯನ್ನು ಪ್ರಾರಂಭಿಸಲಾಯಿತು. ವಿದ್ಯಾರ್ಥಿಗಳಿಂದಲೇ ನಿತ್ಯಾನುಷ್ಠಾನ ಶ್ಲೋಕ ಪಠಣೆ ಮಾಡಿಸಲಾಯಿತು. ಇಂದಿನ ತರಗತಿಯಲ್ಲಿ ವಿಶೇಷವಾಗಿ ರಕ್ಷಾ ಬಂಧನದ ಮಹತ್ವವನ್ನು ಗುರುಗಳು ತಿಳಿಸಿಕೊಟ್ಟರು ಹಾಗೂ ಎಲ್ಲಾ ವಿದ್ಯಾರ್ಥಿಗಳು ಸೇರಿ ಪರಸ್ಪರ ರಕ್ಷೆ ಕಟ್ಟಿ ಸಹೋದರತೆಯ ಹಬ್ಬ ರಕ್ಷಾ ಬಂಧನ ವನ್ನು ಸಂಭ್ರಮದಿಂದ ಆಚರಿಸಲಾಯಿತು.ವಿಶೇಷವಾಗಿ […]
16-08-2022, 2:39 PM
ಮಂಗಳೂರು :- ಸಹೋದರತ್ವದ ಸಂದೇಶವನ್ನು ಸಾರುವ ರಕ್ಷಾ ಬಂಧನ ಕಾರ್ಯಕ್ರಮವು ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 16 ಆಗಸ್ಟ್ 2022 ರಂದು ಯುವವಾಹಿನಿ ಸಭಾಂಗಣ ಉರ್ವಾ ಸ್ಟೋರ್ ಇಲ್ಲಿ ನಡೆಯಿತು. ಘಟಕದ ಅಧ್ಯಕ್ಷೆ ಸುನೀತಾ ಗೋಪಾಲ್ ರವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ರಕ್ಷಾ ಬಂಧನದ ಶುಭಾಶಯಗಳನ್ನು ನೀಡಿದರು. ಮಹಿಳಾ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಮಂಗಳೂರು ಘಟಕದ ಸಹೋದರರಿಗೆ ಸಹೋದರತ್ವದ ಸಂಕೇತವಾದ ರಕ್ಷೆಯನ್ನು ಕಟ್ಟಿ ರಕ್ಷಾ ಬಂಧನ ಹಬ್ಬವನ್ನು ಆಚರಿಸಿ ಎಲ್ಲರೂ ಸಂಭ್ರಮಿಸಿದರು.ಘಟಕದ ಪದಾಧಿಕಾರಿಗಳು ಹಾಗೂ […]
15-08-2022, 5:25 PM
ಕೂಳೂರು :- ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೂಳೂರು ಘಟಕ ಹಾಗೂ ಲಯನ್ಸ್ ಮತ್ತು ಲಿಯೋಕ್ಲಬ್ ಪಲ್ಗುಣಿ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಸಮಾರಂಭವು ದಿನಾಂಕ 15 ಆಗಸ್ಟ್ 2022ರ ಸೋಮವಾರ ದಂದು ಫಲ್ಗುಣಿ ಸಭಾಂಗಣ ಕೂಳೂರಿನಲ್ಲಿ ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ರವರು ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಜಯ ಬಂಗೇರ ಇವರು ಧ್ವಜಾರೋಹಣವನ್ನು ಮಾಡಿದರು. […]
15-08-2022, 5:22 PM
ಕೂಳೂರು :- ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಭಾರತದ 75 ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗ್ರಾಮೀಣ ಪ್ರದೇಶದ ಮಕ್ಕಳ ಕ್ರೀಡೆಗೆ ಪ್ರೋತ್ಸಾಹ ಕೊಡುವ ಉದೇಶದೊಂದಿಗೆ ಕ್ರೀಡಾ ನಿರ್ದೇಶಕರ ಸಂಚಾಲಕತ್ವದಲ್ಲಿ ದಿನಾಂಕ 15 ಆಗಸ್ಟ್ 2022 ಸೋಮವಾರದಂದು ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಬೋರುಗುಡ್ಡೆ, ಜೋಕಟ್ಟೆ ಇಲ್ಲಿ ಕ್ರೀಡಾ ಸಾಮಾಗ್ರಿ ವಿತರಣೆ ಕಾರ್ಯಕ್ರಮವು ನಡೆಯಿತು. ಶಾಲಾ ಮುಖ್ಯೋಪಾಧ್ಯಾಯಿನಿ ಪದ್ಮಾ ರವರು ಎಲ್ಲರನ್ನೂ ಸ್ವಾಗತಿಸಿ, ಘಟಕದ ಸಮಾಜ ಮುಖಿ ಕೆಲಸವನ್ನು ಶ್ಲಾಘಿಸಿದರು. ಘಟಕದ ಕ್ರೀಡಾ ನಿರ್ದೇಶಕರಾದ ಪ್ರದೀಪ್ ಶಿಕ್ಷಕರು […]
15-08-2022, 5:20 PM
ಮೂಲ್ಕಿ :- ದಿನಾಂಕ 15 ಆಗಸ್ಟ್ 2022 ನೇ ಸೋಮವಾರದಂದು ಯೂನಿಯನ್ ಕ್ಲಬ್ ಮೂಲ್ಕಿ ಯಲ್ಲಿ ಸ್ವಾತಂತ್ರ ದಿನಾಚರಣೆಯನ್ನು ಆಚರಿಸಲಾಯಿತು. ಘಟಕದ ಅಧ್ಯಕ್ಷೆ ಭಾರತಿ ಭಾಸ್ಕರ್ ಸ್ವಾಗತಿಸಿದರು.ಮುಖ್ಯ ಅತಿಥಗಳಾಗಿ ನಿವೃತ್ತ AGM G.I.C. ಜೆ.ಎಸ್.ಕರ್ಕೇರ ದ್ವಜಾರೋಹಣ ನೆರವೇರಿಸಿದರು. ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಹಾಗೂ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು. ಮಾಜಿ ಅಧ್ಯಕ್ಷ ಮೋಹನ್ ಸುವರ್ಣ ವಂದಿಸಿದರು. ಜಯಕುಮಾರ್ ಕುಬೆವೂರು ಕಾರ್ಯಕ್ರಮ ನಿರೂಪಿಸಿದರು. ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಎಲ್ಲರಿಗೂ ಸಿಹಿತಿಂಡಿಯನ್ನು […]
15-08-2022, 4:29 PM
ವೇಣೂರು:- 75ನೇ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆಯ ಪ್ರಯುಕ್ತ ಯುವವಾಹಿನಿ (ರಿ.) ವೇಣೂರು ಘಟಕದ ವತಿಯಿಂದ ದಿನಾಂಕ 13 ಆಗಸ್ಟ್ 2022 ಶನಿವಾರದಂದು ಎರಡು ಅಂಗನವಾಡಿ ಶಾಲೆಗಳಿಗೆ ಪುಟಾಣಿ ಮಕ್ಕಳ ಚೇರ್ ಗಳನ್ನು ಘಟಕದ ಅಧ್ಯಕ್ಷರಾದ ಯೋಗೀಶ್ ಬಿಕ್ರೋಟ್ಟು. ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಕ್ರೀಡಾ ಮತ್ತು ಅರೋಗ್ಯ ನಿರ್ದೇಶಕರಾದ ನವೀನ್ ಪಚ್ಚೇರಿಯವರ ನೇತೃತ್ವದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿಯವರಾದ ಪ್ರಶಾಂತ್ ಕುಕ್ಕೇಡಿ, ಕೋಶಾಧಿಕಾರಿ ರಕ್ಷಿತ್ ಬಜಿರೆ , ಸಂಘಟನಾ ಕಾರ್ಯದರ್ಶಿ ಸುಕೇಶ್ ಊರಬೆ […]
15-08-2022, 4:26 PM
ಯಡ್ತಾಡಿ :- 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತ ನಮ್ಮ ಘಟಕದಿಂದ ದಿನಾಂಕ 15 ಆಗಸ್ಟ್ 2022ರ ಸೋಮವಾರದಂದು ಯಡ್ತಾಡಿ ಹಿಂದೂ ರುದ್ರಭೂಮಿಯ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಘಟಕದ ಅಧ್ಯಕ್ಷರಾದ ಶ್ರೀ ಸೋಮಪ್ಪ ಪೂಜಾರಿಯವರು ಹಾಗೂ ಸದಸ್ಯರನ್ನೊಳಗೊಂಡ ತಂಡ ಸ್ಮಶಾನದ ಕಟ್ಟಡದ ಮೇಲ್ಛಾವಣಿ, ಸಲಕರಣೆ ಹಾಗೂ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿದರು. ಘಟಕದ ದ್ವಿತೀಯ ಉಪಾಧ್ಯಕ್ಷರಾದ ಶ್ರೀ ಮಂಜುನಾಥ್ ಪೂಜಾರಿಯವರು ಹಿಂದೆ ಈ ಹಿಂದೂ ರುದ್ರಭೂಮಿಯನ್ನು ಮಾಡುವಾಗ ಪಟ್ಟ ಶ್ರಮವನ್ನು ನೆನೆದರು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು ಮತ್ತು […]