ಕಂಕನಾಡಿ: ಯುವವಾಹಿನಿ(ರಿ.) ಕಂಕನಾಡಿ ಘಟಕದ ಸದಸ್ಯರ ಮತ್ತು ಕುಟುಂಬ ಸದಸ್ಯರ ನಡುವೆ ಬಾಂಧವ್ಯ ವೃದ್ಧಿಗಾಗಿ ಪುಣ್ಯಕ್ಷೇತ್ರ ದರ್ಶನ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡು ದಿನಾಂಕ 26-04-2024 ಶುಕ್ರವಾರದಂದು ಹಮ್ಮಿಕೊಂಡಿದ್ದರು.
ಮಂಗಳೂರು ರೈಲ್ವೆ ನಿಲ್ದಾಣದಿಂದ ರಾತ್ರಿ 9:00ಕ್ಕೆ ಹೊರಟು ಮರುದಿನ ತಾರೀಕು 27-04-2024 ಶನಿವಾರ ಸಾಯಂಕಾಲ 5:30 ಗಂಟೆಗೆ MANMAD ರೈಲ್ವೇ ಸ್ಟೇಷನ್ ತಲುಪಿ ಅಲ್ಲಿಂದ ಶಿರಡಿಯಲ್ಲಿ ವಸತಿ ಗೃಹಕ್ಕೆ ತೆರಳಿ, ಸ್ನಾನಾದಿ ಮುಗಿಸಿ ನಂತರ ರಾತ್ರಿ 9 ಗಂಟೆಗೆ ಶಿರಡಿ ಕ್ಷೇತ್ರ ದರ್ಶನ ಮಾಡಿ ವಿಶ್ರಾಂತಿ ಪಡೆದರು. 28-04-2024ನೇ ಆದಿತ್ಯವಾರ ಶನಿ ಸಿಂಗಣಾಪುರ, ಶ್ರೀ ಗ್ರೀಷ್ಮೇಶ್ವರ ಜ್ಯೋತಿರ್ಲಿಂಗ, ಎಲ್ಲೋರ ಗುಹೆ, ಸ್ಲೀಪಿಂಗ್ ಹನುಮಾನ್ ದೇವಸ್ಥಾನ, ಮಿನಿ ತಾಜ್ ಮಹಲ್ ವೀಕ್ಷಿಸಿ ಅಲ್ಲಿಂದ ಶಿರಡಿಯಲ್ಲಿ ವಸತಿ ಗೃಹದಲ್ಲಿ ವಿಶ್ರಾಂತಿ.
ದಿನಾಂಕ 29-04-2024ನೇ ಸೋಮವಾರ ಬೆಳಗಿನ ಉಪಾಹಾರ ಮುಗಿಸಿ ನಂತರ ನಾಸಿಕ್ ದರ್ಶನ, ತ್ರಯಂಬಕೇಶ್ವರ್ ಜ್ಯೋತಿರ್ಲಿಂಗ, ಪಂಚವಟಿ ದರ್ಶನ, ಮುಕ್ತಿಧಾಮ ದರ್ಶನ ಮಾಡಿ ಅದೇ ದಿನ ರಾತ್ರಿ ಗಂಟೆ 1.15ಕ್ಕೆ MANMAD ರೈಲ್ವೆ ಸ್ಟೇಷನ್ ನಿಲ್ದಾಣಕ್ಕೆ ತಲುಪಿ ಮಂಗಳೂರಿಗೆ ಪಯಣ. ದಿನಾಂಕ 30-04-2024ರಂದು ಮಂಗಳೂರಿಗೆ ತಲುಪಿದರು. ಪುಣ್ಯ ಕ್ಷೇತ್ರಗಳ ದರ್ಶನ ಮಾಡಿದ ಯಾತ್ರಾರ್ಥಿಗಳ ಮನಸ್ಸು ಧನ್ಯತಾ ಭಾವನೆಯನ್ನು ಹೊಂದಿತು.