ಮಂಗಳೂರು: ಭಜನೆ ಎಂಬ ಪದಕ್ಕೆ ವಿಶೇಷ ಅರ್ಥವಿದೆ. ‘ಭ’ ಎಂದರೆ ಭಗವಂತ, ‘ಜ’ ಎಂದರೆ ಜನ್ಮಾಂತರ, ‘ನೆ’ ಎಂದರೆ ನೆನೆಯುವುದು. ಜನ್ಮಜನ್ಮಾಂತರಗಳಿಂದ ಮಾಡಿದ ಪಾಪವನ್ನು ಕಳೆಯಲು ಹಾಗೂ ದೇವರನ್ನು ಒಲಿಸಿಕೊಳ್ಳಲು ಭಗವಂತನನ್ನು ಪೂಜಿಸುವುದೇ ಭಜನೆ.
ಯುವವಾಹಿನಿ(ರಿ.) ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನೆ ಕಾರ್ಯಕ್ರಮದ 47 ನೇ ಭಜನಾ ಕಾರ್ಯಕ್ರಮವು ಘಟಕದ ಸದಸ್ಯರಾದ ಚಂದ್ರಶೇಖರ್ ಪೂಜಾರಿ ಇವರ ಮನೆಯಲ್ಲಿ ದಿನಾಂಕ 19/04/2024 ಶುಕ್ರವಾರದಂದು ಸಂಜೆ 7.00 ಗಂಟೆಗೆ ಸರಿಯಾಗಿ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಪ್ರಾರಂಭಗೊಂಡಿತು. ಸರಿ ಸುಮಾರು ಒಂದು ಗಂಟೆಗಳ ಕಾಲ ಮನೆಯವರು, ಸಂಬಂಧಿಕರು ಹಾಗೂ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ರಾತ್ರಿ 8.30 ಕ್ಕೆ ಮಂಗಳಾರತಿಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಇಂದಿರಾ ಸುರೇಶ್, ಎರಡನೇ ಉಪಾಧ್ಯಕ್ಷರಾದ ಗೀತಾ ವಸಂತ್, ನಿಕಟ ಪೂರ್ವ ಅಧ್ಯಕ್ಷರಾದ ಯಶವಂತ್ ಪೂಜಾರಿ, ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ನಯನ ರಮೇಶ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಜಯಾನಂದ ಅಮೀನ್, ಚಂದಪ್ಪ ಸನಿಲ್ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.