
08-10-2026, 8:00 PM
ಮೂಲ್ಕಿ ಅ 08: ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ಗುರು ಸಂದೇಶವನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಮನೆ ಮನೆ ಭಜನಾ ಕಾರ್ಯಕ್ರಮವು ಘಟಕದ ಸಕ್ರಿಯ ಸದಸ್ಯರಾದ ಬಿಪಿನ್ ಪ್ರಸಾದ್ ಅವರ ನೇತೃತ್ವದಲ್ಲಿ ಪಡುಬಿದ್ರಿಯ ದತ್ತ ಗುರು ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಘಟಕದ ಸುಮಾರು 27 ಮಂದಿ ಸದಸ್ಯರು ಭಜನಾ ಸೇವೆಯಲ್ಲಿ ಪಾಲ್ಗೊಂಡರು. ಭಜನೆಯ ಮೂಲಕ ಗುರು ತತ್ವ, ಭಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುವ ಈ ಕಾರ್ಯಕ್ರಮಕ್ಕೆ ಮಂದಿರದಲ್ಲಿ ಉಪಸ್ಥಿತರಿದ್ದ ಭಕ್ತರು ಮೆಚ್ಚುಗೆ […]
Read More

07-10-2026, 10:00 PM
ಪ್ರಯಾಗರಾಜ್, ಅ. 7: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾದ ಅಯೋಧ್ಯೆ–ಕಾಶಿ–ಪ್ರಯಾಗರಾಜ್ ಧಾರ್ಮಿಕ ಯಾತ್ರೆಯ ಅಂಗವಾಗಿ ಯಾತ್ರಾರ್ಥಿಗಳು ಪ್ರಯಾಗರಾಜ್ನ ಪವಿತ್ರ ತ್ರಿವೇಣಿ ಸಂಗಮದಲ್ಲಿ ತೀರ್ಥಸ್ನಾನ ನೆರವೇರಿಸಿ ಪುಣ್ಯಾನುಭವ ಪಡೆದರು. ಗಂಗಾ, ಯಮುನಾ ಹಾಗೂ ಅಂತರ್ವಾಹಿನಿ ಸರಸ್ವತಿ ನದಿಗಳ ಪವಿತ್ರ ಸಂಗಮವೆಂದು ಪ್ರಸಿದ್ಧವಾಗಿರುವ ತ್ರಿವೇಣಿ ಸಂಗಮದಲ್ಲಿ ಯಾತ್ರಾರ್ಥಿಗಳು ಪವಿತ್ರ ಸ್ನಾನ ಮಾಡಿ ಭಕ್ತಿಭಾವ ಮೆರೆದರು. ಬಳಿಕ ಪ್ರಸಿದ್ಧ ಹನುಮಾನ್ ಮಂದಿರ ಹಾಗೂ ಶಕ್ತಿಪೀಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಾರ್ಥನೆ ಸಲ್ಲಿಸಿದರು. ಯುವವಾಹಿನಿ ಮಾಣಿ ಘಟಕದ […]
Read More

06-10-2026, 9:00 PM
ಮಂಗಳೂರು: ಯುವವಾಹಿನಿ (ರಿ.) ಮಂಗಳೂರು ಘಟಕದ ಪುರುಷರ ಹಗ್ಗಜಗ್ಗಾಟ ತಂಡವು ಮೂಡುಬಿದಿರೆಯಲ್ಲಿ ನಡೆದ ಅಂತರ್ ಘಟಕ ಕ್ರೀಡಾಕೂಟದಲ್ಲಿ ಪ್ರಥಮ ಸ್ಥಾನ ಗಳಿಸಿದ ಹಿನ್ನೆಲೆಯಲ್ಲಿ ತಂಡದ ಆಟಗಾರರಿಗೆ ಗೌರವಾರ್ಪಣೆ ಸಲ್ಲಿಸಲಾಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ, ಮೋಹನ್ ಆಳ್ವ ಅವರ ಸಹಕಾರದೊಂದಿಗೆ ಆಳ್ವಾಸ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ಅಂತರ್ ಘಟಕ ಕ್ರೀಡಾಕೂಟದಲ್ಲಿ ಮಂಗಳೂರು ಘಟಕದ ಪುರುಷರ ಹಗ್ಗಜಗ್ಗಾಟ ತಂಡವು ಪ್ರಥಮ ಸ್ಥಾನ ಪಡೆದು ಘಟಕಕ್ಕೆ ಹೆಮ್ಮೆ ತಂದಿದೆ. ಅಕ್ಟೋಬರ್ 6ರಂದು ಯುವವಾಹಿನಿ ಮಂಗಳೂರು ಘಟಕದ […]
Read More

06-10-2026, 2:00 PM
ಶಕ್ತಿನಗರ ಅ 06: ಮಹಿಳೆಯರು ಕಾಲಕ್ಕೆ ತಕ್ಕಂತೆ ಮಾರುಕಟ್ಟೆಯಲ್ಲಿ ಬೇಡಿಕೆಯಿರುವ ಕೌಶಲ್ಯಗಳನ್ನು ಕಲಿತು ಸ್ವ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕ ಸ್ವಾವಲಂಬನೆ ಸಾಧಿಸಬೇಕು ಎಂದು ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇದರ ಕಾರ್ಯಕ್ರಮ ವ್ಯವಸ್ಥಾಪಕ ಜೀವನ್ ಕೊಲ್ಯ ಹೇಳಿದರು. ಯುವವಾಹಿನಿ (ರಿ.) ಶಕ್ತಿನಗರ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ಸೇವಾ ಟ್ರಸ್ಟ್ (ರಿ.), ಕುಂಟಲ್ಪಾಡಿ ಹಾಗೂ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಐದು ದಿನಗಳ ಉಚಿತ ಸೀರೆ ಕುಚ್ಚು ಕೌಶಲ್ಯ […]
Read More

05-10-2026, 8:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 05-10-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಶ್ರೀ ಹಯಗ್ರೀವ ಭಜನಾ ಮಂಡಳಿ ಅಶೋಕನಗರ ಇವರ ಸಹಯೋಗದಲ್ಲಿ ನೆರವೇರಿತು. ಸುಮಧುರ ರಾಗ ತಾಳಗಳಿಂದ ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ […]
Read More

04-10-2026, 11:00 PM
ಮೂಡುಬಿದಿರೆ ಅ 04 : ಭಾರತೀಯ ನೌಕಾಪಡೆಯಲ್ಲಿ ವೈದ್ಯಕೀಯ ಸೇವೆ ಸಲ್ಲಿಸುತ್ತಿರುವ ಕಾರವಾರ ನೌಕಾನೆಲೆಯ ಐಎನ್ಎಸ್ ವಿಕ್ರಮಾದಿತ್ಯದ ಮುಖ್ಯ ವೈದ್ಯಾಧಿಕಾರಿ ಸರ್ಜನ್ ಕಮಾಂಡರ್ (ಡಾ.) ಅರ್ಜುನ್ ಅಂಚನ್ ಅವರ ವಿಶಿಷ್ಟ ಸಾಧನೆ ಹಾಗೂ ದೇಶಸೇವೆಯನ್ನು ಗುರುತಿಸಿ ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವದ ಸಂದರ್ಭದಲ್ಲಿ ನಡೆದ ಪಥಸಂಚಲನದಲ್ಲಿ ಧ್ವಜವಂದನೆ ಸ್ವೀಕರಿಸಿದ ಸರ್ಜನ್ ಕಮಾಂಡರ್ ಡಾ. ಅರ್ಜುನ್ ಅಂಚನ್ ಅವರನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಸಮುದ್ರದಾಳದ […]
Read More

04-10-2026, 8:00 PM
ಮೂಡುಬಿದಿರೆ, ಅ. 4: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವ–2026ರ ಸಮಾರೋಪ ಸಮಾರಂಭವು ಅಕ್ಟೋಬರ್ 4ರಂದು ಭಾನುವಾರ ಸಂಜೆ ವಿದ್ಯಾಗಿರಿಯ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ನಡೆಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ರೋಟರಿ ಜಿಲ್ಲೆ 1381ರ ಜಿಲ್ಲಾ ಗವರ್ನರ್ ರೊಟೇರಿಯನ್ ಸತೀಶ್ ಬೋಳಾರ್ ಮಾತನಾಡಿ, “ಯುವವಾಹಿನಿ ಕ್ರೀಡೋತ್ಸವ ಅತ್ಯಂತ ಶಿಸ್ತುಬದ್ಧವಾಗಿ ನಡೆದಿದ್ದು, ಸಮಾಜದ […]
Read More

04-10-2026, 6:00 PM
ಕಟಪಾಡಿ ಅ 04 : ಯುವವಾಹಿನಿ (ರಿ.) ಕಾಪು ಘಟಕದ ವತಿಯಿಂದ ಅಕ್ಟೋಬರ್ 4ರಂದು ಕಾರುಣ್ಯ ಆಶ್ರಯಧಾಮ ವೃದ್ಧಾಶ್ರಮ, ಅಗ್ರಹಾರ, ಕಟಪಾಡಿಯಲ್ಲಿ ವಾಸಿಸುತ್ತಿರುವ ಹಿರಿಯರೊಂದಿಗೆ ಆತ್ಮೀಯ ಸಹಭೋಜನ ಕಾರ್ಯಕ್ರಮ ನಡೆಯಿತು. ಘಟಕದ ಸದಸ್ಯರು ವೃದ್ಧಾಶ್ರಮದ ಹಿರಿಯರೊಂದಿಗೆ ಕೆಲಕಾಲ ಆತ್ಮೀಯವಾಗಿ ಬೆರೆತು, ಅವರೊಂದಿಗೆ ಊಟವನ್ನು ಹಂಚಿಕೊಂಡು ಸಂತಸವನ್ನು ಹಂಚಿಕೊಂಡರು. ಹಿರಿಯರೊಂದಿಗೆ ಕಳೆದ ಈ ಕ್ಷಣಗಳು ಸದಸ್ಯರಿಗೆ ಪ್ರೀತಿ, ಮಾನವೀಯತೆ ಹಾಗೂ ಸೇವೆಯ ಮಹತ್ವವನ್ನು ಮತ್ತಷ್ಟು ಅರಿಯುವ ಸಾರ್ಥಕ ಅನುಭವ ನೀಡಿತು. ಸಾಮಾಜಿಕ ಕಳಕಳಿಯೊಂದಿಗೆ ಯುವವಾಹಿನಿ ಕಾಪು ಘಟಕದ ವತಿಯಿಂದ […]
Read More

04-10-2026, 11:00 AM
ಮೂಡುಬಿದಿರೆ ಅ. 04 : ಕಲೆ, ಸಾಹಿತ್ಯ, ಶಿಕ್ಷಣ, ಕ್ರೀಡೆ, ಸಂಸ್ಕೃತಿ, ವೈದ್ಯಕೀಯ, ಆಡಳಿತ, ಉದ್ಯಮ ಹಾಗೂ ದೇಶಪ್ರೇಮ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿ, ಆಧುನಿಕ ಮೂಡುಬಿದಿರೆಯ ನಿರ್ಮಾತೃ ಎಂದೇ ಗುರುತಿಸಿಕೊಂಡಿರುವ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರನ್ನು ಯುವವಾಹಿನಿ ಸಂಸ್ಥೆಯ ವತಿಯಿಂದ ಗೌರವಪೂರ್ವಕವಾಗಿ ಅಭಿನಂದಿಸಲಾಯಿತು. 2026ರ ಅಕ್ಟೋಬರ್ 4ರಂದು ಮೂಡುಬಿದಿರೆಯ ಆಳ್ವಾಸ್ ಕ್ರೀಡಾಂಗಣದಲ್ಲಿ ನಡೆದ ಯುವವಾಹಿನಿ ಕ್ರೀಡೋತ್ಸವದ ಸಂದರ್ಭದಲ್ಲಿ ಡಾ. ಮೋಹನ ಆಳ್ವರಿಗೆ ಅಭಿನಂದನೆ ಸಲ್ಲಿಸಿ, […]
Read More

04-10-2026, 10:00 AM
ಮೂಡುಬಿದಿರೆ ಅ 4: ಯುವಜನತೆಯೇ ದೇಶದ ನಿಜವಾದ ಸಂಪತ್ತು. ಈ ಯುವಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬೆಳೆಸಿದರೆ ದೇಶದ ಭವಿಷ್ಯ ಮತ್ತಷ್ಟು ಬಲಿಷ್ಠಗೊಳ್ಳುತ್ತದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಹೇಳಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಆಶ್ರಯದಲ್ಲಿ ಯುವವಾಹಿನಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಆಳ್ವಾಸ್ ಕೃಷಿಸಿರಿ ವೇದಿಕೆಯಲ್ಲಿ ಅಕ್ಟೋಬರ್ 4 ಭಾನುವಾರ ನಡೆದ *‘ಯುವವಾಹಿನಿ ಕ್ರೀಡೋತ್ಸವ–2026’*ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕ್ರೀಡೆಯ ಪ್ರಮುಖ ಸಂದೇಶವೇ ಕ್ರೀಡಾ ಸ್ಫೂರ್ತಿ. […]
Read More