ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 05-10-2026 ರಂದು ಸಂಜೆ ನಡೆಯಿತು.

ಈ ವಾರದ ಭಜನಾ ಸೇವೆ ಶ್ರೀ ಹಯಗ್ರೀವ ಭಜನಾ ಮಂಡಳಿ ಅಶೋಕನಗರ ಇವರ ಸಹಯೋಗದಲ್ಲಿ ನೆರವೇರಿತು. ಸುಮಧುರ ರಾಗ ತಾಳಗಳಿಂದ ದೇವರ ನಾಮ ಸ್ಮರಣೆಯ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು.
ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ ಗುರುಗಳಿಗೆ ಪೂಜೆ ಸಲ್ಲಿಸಿ, ಭಜನಾ ತಂಡದ ಸದಸ್ಯರಿಗೆ ಗೌರವ ಸಲ್ಲಿಸಲಾಯಿತು.
ಮಂಗಳೂರು ಘಟಕದ ಅಧ್ಯಕ್ಷರು ಹರೀಶ್ ಕೆ ಸುವರ್ಣ, ನಾರಾಯಣ ಗುರು ತತ್ವಾದರ್ಶಗಳ ಪ್ರಚಾರ ನಿರ್ದೇಶಕರಾದ ಗೋಪಾಲ ಪೂಜಾರಿ, ನಾರಾಯಣ ಗುರು ತತ್ವ ಆದರ್ಶಗಳ ನಿಕಟಪೂರ್ವ ನಿರ್ದೇಶಕರಾದ ಪೂವಪ್ಪ ಕುಕ್ಯಾನ್, ಘಟಕದ ಮಾಜಿ ಅಧ್ಯಕ್ಷರುಗಳು ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಹಾಗೆಯೇ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಕೋಶಾಧಿಕಾರಿ ಸತೀಶ್ ಕಿಲ್ಪಾಡಿ ಉಪಸ್ಥಿತರಿದ್ದರು.







