
03-09-2026, 8:00 PM
ಮಾಣಿ, ಸೆ. 3: ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ದೇರಣ್ಣ ಪೂಜಾರಿ ಹಾಗೂ ಶಮಿತಾ ದೇರಣ್ಣ ಪೂಜಾರಿ ಅವರ ಮನೆಯಲ್ಲಿ ಭಜನೆ, ಸಂಕೀರ್ತನೆ ಹಾಗೂ ಗುರುತತ್ವ ಸಂದೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರೇಣುಕಾ ಕಣಿಯೂರು ಅವರು, “ನಾರಾಯಣ ಗುರುಗಳು ಮರೆಯಾದರೂ, ಅವರ ತತ್ವಸಂದೇಶಗಳು ಇಂದಿಗೂ ಜೀವಂತವಾಗಿವೆ. ಅವರು ಸಮಾಜದಲ್ಲಿ ಸಮಾನತೆ, ಮಾನವೀಯತೆ, […]
Read More

30-08-2026, 8:00 PM
ಮಾಣಿ: ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದಿನ ಕಾಲದಲ್ಲಿಯೇ ವಿದ್ಯೆ, ಸಂಘಟನೆ ಹಾಗೂ ಸಾಮಾಜಿಕ ಬದ್ಧತೆಗೆ ಹೆಚ್ಚಿನ ಒತ್ತು ನೀಡಿದ ಮಹಾನ್ ಚಿಂತಕರಾಗಿದ್ದರು. ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಯನ್ನು ತಂದ ಅವರು, ಎಲ್ಲರೂ ಒಂದೇ ಎಂಬ ಭಾವನೆಯೊಂದಿಗೆ ಬದುಕಬೇಕು, ಯಾರನ್ನೂ ಕೀಳು–ಮೇಲು ಎಂಬ ಭೇದದಿಂದ ನೋಡಬಾರದು ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು ಎಂದು ಯುವವಾಹಿನಿ (ರಿ.)ಯ ರಾಜೇಶ್ ಬಲ್ಯ ಹೇಳಿದರು. ಆಗಸ್ಟ್ 30ರಂದು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಘಟಕದ ಸಮಾಜ ಸೇವಾ ನಿರ್ದೇಶಕರಾದ ಸುರೇಶ್ ಬಾಕಿಲ […]
Read More

28-08-2026, 9:00 PM
ಮಾಣಿ: ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಿರುವ ‘ಮನೆ ಮನೆಗೆ ಗುರುತತ್ವ ಸಂದೇಶ’ ಕಾರ್ಯಕ್ರಮಕ್ಕೆ ನಾರಾಯಣ ಗುರುತತ್ವ ನಿರ್ದೇಶಕರಾದ ಶ್ರೀಧರ ಪೂಜಾರಿ ಮುಜಾಲ ಅವರ ಮನೆಯಲ್ಲಿ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಶಾಂತ್ ಬಿ. ಅನಂತಾಡಿ ಅವರು, “ವಿಶ್ವಗುರು ನಾರಾಯಣ ಗುರುಗಳು ಕೇವಲ ಒಬ್ಬ ಗುರುವಾಗಿರದೆ, ಸಮಾಜಕ್ಕೆ ಉತ್ತಮ ತತ್ವಸಂದೇಶ ಹಾಗೂ ಮಾರ್ಗದರ್ಶನ ನೀಡಿದ ಮಹಾನ್ ದಾರ್ಶನಿಕರು. ಇಂದಿನ ಸಮಾಜದಲ್ಲಿಯೂ ಅವರ ತತ್ವಸಂದೇಶಗಳು ಅತ್ಯಂತ ಪ್ರಸ್ತುತವಾಗಿವೆ” ಎಂದು ಹೇಳಿದರು. […]
Read More

26-08-2026, 7:00 PM
ಮಂಗಳೂರು: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರುಇದರ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಾಣಿ ಘಟಕದ ಆತಿಥ್ಯದಲ್ಲಿ, B.E.W.S. (R.), ಮಂಗಳೂರು ಹಾಗೂ ಭಾರತ್ ಸ್ಕೌಟ್ ಮತ್ತು ಗೈಡ್ಸ್ ದಕ್ಷಿಣ ಕನ್ನಡ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ “ಯುವ ದಿಕ್ಸೂಚಿ–2026 – ಕನಸುಗಳಿಗೆ ರೆಕ್ಕೆ, ಭವಿಷ್ಯಕ್ಕೆ ದಿಕ್ಕು” ಎಂಬ ಮೂರು ದಿನಗಳ IBPS ಬ್ಯಾಂಕಿಂಗ್ ಹಾಗೂ ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಪೂರ್ವ ತಯಾರಿ ತರಬೇತಿ ಕಾರ್ಯಾಗಾರವು ಯಶಸ್ವಿಯಾಗಿ ಸಂಪನ್ನಗೊಂಡಿತು. ಆಗಸ್ಟ್ 24ರಿಂದ […]
Read More

24-08-2026, 11:30 AM
ಮಂಗಳೂರು ಅಗಸ್ಟ್ 24 : ಆಧುನಿಕ ಯುಗದಲ್ಲಿ ಯುವಜನರು ಉನ್ನತ ವ್ಯಾಸಂಗ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಕಠಿಣ ಪರಿಶ್ರಮದೊಂದಿಗೆ ನಿಗದಿತ ಗುರಿಯನ್ನು ಹೊಂದಿ ಮುನ್ನಡೆಯುವುದು ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಕಾರ್ಯದರ್ಶಿ ಪ್ರತಿಮ್ ಕುಮಾರ್ ಕೆ.ಎಸ್. ಅಭಿಪ್ರಾಯಪಟ್ಟರು. ಅವರು ಆ. 24ರಂದು ಮಂಗಳೂರಿನ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಆಯೋಜಿಸಲಾಗಿದ್ದ “ಯುವ ದಿಕ್ಸೂಚಿ–2026” ಮೂರು ದಿನಗಳ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಯುವವಾಹಿನಿ (ರಿ.) ಕೇಂದ್ರ […]
Read More

15-08-2026, 4:00 PM
ಮಾಣಿ, ಆಗಸ್ಟ್ 15: ಆರ್ಥಿಕವಾಗಿ ಹಿಂದುಳಿದ ಹಾಗೂ ಶಾಲಾ ಶುಲ್ಕ ಪಾವತಿಸಲು ಅಸಾಧ್ಯವಾಗಿದ್ದ ಏಳು ವಿದ್ಯಾರ್ಥಿಗಳ ಶಾಲಾ ಶುಲ್ಕವನ್ನು ಪಾವತಿಸುವ ಮೂಲಕ ಯುವವಾಹಿನಿ (ರಿ.) ಮಾಣಿ ಘಟಕವು ಮಾನವೀಯ ಸೇವೆಗೆ ಮುಂದಾಗಿದೆ. ಶ್ರೀರಾಮಚಂದ್ರ ಹೈಸ್ಕೂಲ್, ಅಯೋಧ್ಯಾನಗರ, ಪೆರ್ನೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಶೈಕ್ಷಣಿಕ ನೆರವು ನೀಡಲಾಯಿತು. ಯುವವಾಹಿನಿಯ ಪ್ರಮುಖ ಧ್ಯೇಯಗಳಾದ ‘ವಿದ್ಯೆ, ಉದ್ಯೋಗ ಮತ್ತು ಸಂಪರ್ಕ’ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ “ಯಾರೂ ಶಿಕ್ಷಣದಿಂದ ವಂಚಿತರಾಗಬಾರದು” ಎಂಬ ತತ್ತ್ವಸಂದೇಶವನ್ನು ಪಾಲಿಸುವ ನಿಟ್ಟಿನಲ್ಲಿ ಈ ಸೇವಾ ಕಾರ್ಯವನ್ನು […]
Read More

09-08-2026, 8:00 PM
ಮಾಣಿ, ಆಗಸ್ಟ್ 9: ತುಳುನಾಡಿನ ಸಂಸ್ಕೃತಿ, ಸಂಪ್ರದಾಯ ಹಾಗೂ ಸಾಂಪ್ರದಾಯಿಕ ಆಟಗಳ ಸೊಗಡನ್ನು ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಶ್ರೀಮತಿ ಜಾನಕಿ ದರ್ಕಾಸು ಪೆರ್ನೆ ಅವರ ಮನೆಯಲ್ಲಿ ಆಯೋಜಿಸಿದ್ದ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮವು ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪೆರ್ನೆ–ಬಿಳಿಯೂರು ಇದರ ಮಾಜಿ ಅಧ್ಯಕ್ಷ ಚಂದಪ್ಪ ಪೂಜಾರಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಆಟಿ ತಿಂಗಳು ತುಳುನಾಡಿನ ಸಂಸ್ಕೃತಿ ಮತ್ತು ಸಂಪ್ರದಾಯದ ಪ್ರತೀಕವಾಗಿದೆ. ಹಿಂದಿನ ಕಾಲದ ಆಟಿ […]
Read More

09-08-2026, 4:00 PM
ಮಾಣಿ ಅಗಸ್ಟ್ 09: ಮಾಣಿ ಪರಿಸರದ ಜನರ ಬಹುಕಾಲದ ನಿರೀಕ್ಷೆಯಾಗಿದ್ದ ಆಂಬ್ಯುಲೆನ್ಸ್ ಸೇವೆಯ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ‘ಆಟಿ ಸಿರಿ ಸಂಭ್ರಮ–2026’ ಕಾರ್ಯಕ್ರಮದ ವೇದಿಕೆಯಲ್ಲಿ ನೆರವೇರಿತು.ಜನರ ತುರ್ತು ಆರೋಗ್ಯ ಅಗತ್ಯಗಳಿಗೆ ಸ್ಪಂದಿಸುವ ಉದ್ದೇಶದಿಂದ ಆರಂಭಿಸಲಾಗುತ್ತಿರುವ ಈ ‘ಸೇವಾ ಸ್ಪರ್ಶ–ಆಂಬ್ಯುಲೆನ್ಸ್ ಸೇವೆ’ ಮಾಣಿ ಹಾಗೂ ಸುತ್ತಮುತ್ತಲಿನ ಜನರಿಗೆ ಮಹತ್ವದ ಆರೋಗ್ಯ ಸೇವಾ ಸೌಲಭ್ಯವಾಗಲಿದೆ. ಆರೋಗ್ಯ ಸೇವೆಯ ಕ್ಷೇತ್ರದಲ್ಲಿ ಮಾನವೀಯ ಕಾಳಜಿಯೊಂದಿಗೆ ಸಮಾಜಮುಖಿ ಹೆಜ್ಜೆ ಇಟ್ಟಿರುವ ಯುವವಾಹಿನಿ (ರಿ.) ಮಾಣಿ ಘಟಕದ […]
Read More

27-07-2026, 6:00 PM
ಮಾಣಿ, ಜುಲೈ 27: ಯುವವಾಹಿನಿ (ರಿ.) ಮಾಣಿ ಘಟಕದ ಮಹತ್ವಾಕಾಂಕ್ಷೆಯ “ಯುವ ಸೇವಾ ಸ್ಪರ್ಶ” ಯೋಜನೆಯ ಮೂರನೇ ಹಂತದ ಸೇವಾ ಕಾರ್ಯದ ಅಂಗವಾಗಿ, ಪೆರಾಜೆ ಗ್ರಾಮದ ನಿವಾಸಿ ಪದ್ಮಾವತಿ ಅವರಿಗೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳ ಕಿಟ್ನ್ನು ವಿತರಿಸಲಾಯಿತು. ಪದ್ಮಾವತಿ ಅವರು ಒಂಟಿಯಾಗಿ ಜೀವನ ಸಾಗಿಸುತ್ತಿದ್ದು, ಅನಾರೋಗ್ಯದ ಕಾರಣ ದುಡಿದು ಜೀವನ ನಿರ್ವಹಿಸಲು ಅಸಮರ್ಥರಾಗಿದ್ದಾರೆ. ಅವರ ಸಂಕಷ್ಟವನ್ನು, ವಿಶೇಷವಾಗಿ ಮಳೆಗಾಲದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಮನಗಂಡ ಯುವವಾಹಿನಿ (ರಿ.) ಮಾಣಿ ಘಟಕವು ಮಾನವೀಯ ಕಳಕಳಿಯಿಂದ ಒಂದು ತಿಂಗಳಿಗೆ […]
Read More

16-07-2026, 2:00 PM
ಮಾಣಿ, ಜುಲೈ 16: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಘಟಕದ ಸದಸ್ಯರ ಮಕ್ಕಳಿಗೆ ‘ಪ್ರತಿಭಾ ಗೌರವ ಅಭಿನಂದನಾ ಕಾರ್ಯಕ್ರಮ’ ಆಯೋಜಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಆಧ್ಯಾ ಎಂ.ಎಸ್., ಗ್ರೀಷ್ಮಾ, ಪ್ರಗತಿ ಆರ್. ಸಾಲ್ಯಾನ್, ಹನ್ಶಿಕಾ ಎಸ್.ಡಿ. ಪೂಜಾರಿ, ಕೌಶಿಕ್, ದಿಶಾ ಕೆ. ಪೂಜಾರಿ, ದಿಶಾಂತ್ ಪೂಜಾರಿ ಹಾಗೂ ಪೂರ್ವಿ ಬಿ.ಕೆ. ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ […]
Read More