19-03-2017, 5:01 AM
ಯುವವಾಹಿನಿ ಉಪ್ಪಿನಂಗಡಿ ಘಟಕದ ಸದಸ್ಯರು ದಿನಾಂಕ 19.03.2017ರಂದು ಸಂಪರ್ಕದ ದೃಷ್ಟಿಯಿಂದ ಏಕದಿನ ಪ್ರವಾಸ ಕಾರ್ಯಕ್ರಮ ಜರುಗಿತು. ಅಂದು ಬೆಳಗ್ಗೆ 7 ರಿಂದ ಪ್ರವಾಸ ಆರಂಭಗೊಂಡಿತು. ಪುನರುಸ್ಥಾನಗೊಳ್ಳುತ್ಥಿರುವ ವೀರ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಾನ ಗೆಜ್ಜೆಗಿರಿ ನಂದನಬಿತ್ತಲ್ ಇಲ್ಲಿಗೆ ಭೇಟಿ ನೀಡಿ ಜನ್ಮಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಇತಿಹಾಸದ ಬಗ್ಗೆ ಸ್ಥಳೀಯರಾದ ಮಹಾಬಲ ಇವರು ವಿವರ ನೀಡಿದರು, ನಂತರ ಹನುಮಗಿರಿ ಆಂಜನೇಯ ದೇವಸ್ಥಾನ, ಕಾಸರಗೋಡು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು. ಕೇರಳದ […]
Read More
19-03-2017, 4:16 AM
ಯಶಸ್ಸು ನಮ್ಮನ್ನು ಜಗತ್ತಿಗೆ ಪರಿಚಯಿಸುತ್ತದೆ ಆದರೆ ಸೋಲು ನಮಗೆ ಜಗತ್ತನ್ನು ಪರಿಚಯಿಸುತ್ತದೆ. ಎಂದು ಸುವರ್ಣ ನ್ಯೂಸ್ ವಾರ್ತಾ ವಾಚಕಿ ವೀಣಾ ಪೂಜಾರಿ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ಸಂವೇದನಾ ಶೀಲ ಕಾರ್ಯ ಸಾಧನಾಶೀಲ ಮಹಿಳೆಯರ – ಸಂವಾದ – ಆಂತರ್ಯ – ಮನದೊಳಗಿನ ಮಾತು ಕಾರ್ಯಕ್ರಮದಲ್ಲಿ ಸಂವಾದ ನಿರ್ವಹಿಸಿ ಮಾತನಾಡಿದರು. […]
Read More
19-03-2017, 4:12 AM
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಜರುಗಿತು. ಸೌಂದರ್ಯ ತಜ್ಞರ ವೇದಾ ಎಸ್.ಸುವರ್ಣ, ಚಲನಚಿತ್ರ ನಿರ್ದೇಶಕಿ ಅಶ್ವಿನೀ ಡಿ ಕೋಟ್ಯಾನ್, ಸುವರ್ಣ ನ್ಯೂಸ್ ವಾರ್ತಾ ವಾಚಕಿ ವೀಣಾ ಪೂಜಾರಿ, ಸಂಘಟಕಿ ಕೆ.ಎ.ರೋಹಿಣಿ,ಯುವ ಸಾಕ್ಸ್ ಫೋನ್ ವಾದಕಿ ಕುಮಾರಿ ಜ್ಯೋತಿ, ಯುವ ಉದ್ಯಮಿ ಕುಮಾರಿ ಉಷಾ, ಯುವ ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ ಇವರುಗಳ ಸಾಧನೆಯನ್ನು ಗುರುತಿಸಿ, ಗೌರವಿಸಿ […]
Read More
19-03-2017, 4:10 AM
ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾದಾಗ ಮಾತ್ರ ಅತ್ಯಾಚಾರ ಶೋಷಣೆ ಮುಂತಾದ ಅಪರಾಧಗಳು ಕಡಿಮೆಯಾಗಬಹುದು. ಗಂಡಿಗಿಂತ ಹೆಚ್ಚಾಗಿ ಹೆಣ್ಣಿಗೆ ನೋವು ಸಹಿಸುವ ಶಕ್ತಿ ಇದೆ. ಮಹಿಳೆಯರ ಸಂಕಷ್ಟಕ್ಕೆ ಮಹಿಳೆಯರೇ ಬೆಂಬಲಕ್ಕೆ ನಿಂತಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ. ಎಂದು ರೋಶನಿ ನಿಲಯದ ಪಿ.ಜಿ.ಸೆಂಟರ್ ಡೀನ್ ಡಾ.ರಮೀಳಾ ಶೇಖರ್ ತಿಳಿಸಿದರು. ಅವರು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಂತರ್ಯ […]
Read More
19-03-2017, 4:08 AM
ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಅಭಿನಂದನಾ ಕಾರ್ಯಕ್ರಮ ಜರುಗಿತು. ಮಂಗಳೂರು ಮಹಾನಗರ ಪಾಲಿಕೆಯ ಪ್ರಥಮ ಪ್ರಜೆ ಹಾಗೂ ನೂತನ ಮೇಯರ್ ಶ್ರೀಮತಿ ಕವಿತಾ ಸನಿಲ್ ಇವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮುಂಬೈ ಹೈಕೋರ್ಟು ವಕೀಲರಾದ ಶ್ರೀಮತಿ ರೋಹಿಣಿ ಸಾಲ್ಯಾನ್,ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ, ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅದ್ಯಕ್ಷ ಎಚ್. ಎಸ್. ಸಾಯಿರಾಂ, […]
Read More
19-03-2017, 4:04 AM
ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯ ಹಿಂದೆ ಕಲ್ಲು ಮುಳ್ಳುಗಳ ಹಾದಿಯ ಮೂಲಕ ಕಠಿಣವಾದ ಪರಿಶ್ರಮವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಿದ ಯುವವಾಹಿನಿ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ಪ್ರಥಮ ಪ್ರಜೆ ಶ್ರೀಮತಿ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ […]
Read More
15-03-2017, 12:13 PM
ಸಂಪಾದಕರ ಮಾತು ಪ್ರೀತಿಯ ವಾಚಕರೇ, ನಮ್ಮ ಸಂಸ್ಕೃತಿಯನ್ನು ಉಳಿಸಲು ನಾವು ನಮ್ಮ ಮಕ್ಕಳಿಗೆ ಯಾವ ರೀತಿಯ ಶಿಕ್ಷಣವನ್ನು ನೀಡುತ್ತಿದ್ದೇವೆ. ಅವರು ಉಜ್ವಲ ಭವಿಷ್ಯವನ್ನು ರೂಪಿಸುವಲ್ಲಿ ನಮ್ಮ ಕರ್ತವ್ಯದ ಬಗ್ಗೆ ವಿಮರ್ಷಿಸೋಣ. ಮೌಲ್ಯಾಧಾರಿತ, ಸ್ವಾವಲಂಬನೆಯ, ಸರ್ವತೋಮುಖ ಅಭಿವೃದ್ಧಿಯ ಸಾಮಾಜಿಕ, ಪ್ರಾಕೃತಿಕ ಹಾಗೂ ಜೀವನ ಶಿಕ್ಷಣಗಳನ್ನು ಮಕ್ಕಳು ತಮ್ಮ ಪ್ರಾಥಮಿಕ ಶಿಕ್ಷಣದಲ್ಲೇ ಕಲಿಯಬೇಕು. ಮಕ್ಕಳು ವಾಸಿಸುವ ಮನೆ, ಮೇಲೆ ಹೇಳಿರುವ ಶಿಕ್ಷಣಗಳನ್ನು ಮನೆಗಳಲ್ಲಿ ನೋಡಿ, ಕಲಿಯುವ ಮನೆಯಾಗಬೇಕು. ತಾಯಿ-ತಂದೆ, ಹಿರಿಯರು ಮಕ್ಕಳಿಗೆ ಮೇಲೆ ಹೇಳಿರುವ ವಿವಿಧ ರೀತಿಯ ಶಿಕ್ಷಣದ ವಿಚಾರಗಳ […]
Read More
15-03-2017, 7:22 AM
ಜನಪದ ವೀರರು ಅಥವಾ ಸಾಂಸ್ಕೃತಿಕ ಸ್ತ್ರೀ, ಪುರುಷರನ್ನು ಕಾರಣಿಕ ಶಕ್ತಿಗಳಾಗಿ ಪರಿಭಾವಿಸಲಾಗಿರುವುದು ತುಳುವ ಸಂಸ್ಕೃತಿಯ ವೈಶಿಷ್ಟ್ಯವಾಗಿದೆ. ತಮ್ಮ ಕಾಲದ ವೀರರ ಧೈರ್ಯ ಸಾಹಸ ರೋಮಾಂಚಕ ಗಾಥೆಯನ್ನು ಅದರಿಂದ ರೋಮಾಂಚಿತರಾದ ಇಲ್ಲವೇ ಸ್ಫೂತಿ ಪಡೆದ ಜನಸಮುದಾಯ ಹಾಡುಕಟ್ಟಿ, ಕಥೆ ಪೋಣಿಸಿ, ಸಮಾಜದಲ್ಲಿ ಒಬ್ಬರಿಂದೊಬ್ಬರಿಗೆ, ತಿಳಿಸಿ ಅದು ತಲೆಮಾರಿನಿಂದ ತಲೆಮಾರಿಗೆ ಬಾಯ್ದೆರೆಯಾಗಿ ಹರಿದು ಬಂದ ಪರಂಪರೆ ನಮ್ಮ ಮುಂದಿದೆ. ಇಂತಹ ಪರಂಪರೆ ಭಾರತ ದೇಶದಲ್ಲಷ್ಟೇ ಅಲ್ಲದೆ ಮಧ್ಯ ಏಷಿಯಾ, ಚೈನಾ, ಆಫ್ರಿಕಾ, ಇಂಡೋನೇಶಿಯಾ, ಫಿನ್ಲೆಂಡ್ ಮತ್ತಿತರ ದೇಶಗಳಲ್ಲೂ ಕಂಡು ಬಂದಿದೆ. […]
Read More
15-03-2017, 7:19 AM
ಒಂದು ತುಂಡು ಉಪ್ಪಿನಕಾಯಿ ಇದ್ದರೂ ಸಾಕು ಮೃಷ್ಟಾನ್ನ ಎದುರಿಗೆದೆಯೆನ್ನುವಷ್ಟೇ ಖುಷಿಯಿಂದ ಗಂಜಿ ಅನ್ನವನ್ನುಂಡು ತಿಂದು ತೇಗುತ್ತಿದ್ದವರು ನಮ್ಮ ನಿಮ್ಮವರ ನಡುವೆ ಹಲವರಿರಬಹುದು. ಕಣಿವೆ, ಬೆಟ್ಟ ಗುಡ್ಡ, ನದಿ ಹಳ್ಳ, ಕಾಡುಬಯಲುಗಳೋ… ಆಯಾಸ ನೋವಿನರಿವಿಲ್ಲದೆ ಬರಿಗಾಲಿನ ನಡಿಗೆಯೋಡಾಟದಲ್ಲಿ ಕಲ್ಲು ಮುಳ್ಳುಗಳ ಗೊಡವೆ ಯಾರಿಗಾದರೂ ಇದ್ದಿತ್ತೆ?…..! ಎಡೆ ಬಿಡದ ದುಡಿಮೆಯಿದ್ದರೂ ನಿತ್ಯದ ಪಾಳಿಗೆ ಸಾಕಾಗದೆ, ಹೊಟೇಲು ಗೂಡಂಗಡಿ ದಿನಸಿ ಅಂಗಡಿಗಳಲ್ಲೆಲ್ಲಾ ಸಾಲ ಮಾಡದೆ ಇರುವವರು ಆ ದಿನಗಳಲ್ಲಿ ವಿರಳವೆನ್ನಬಹುದು. ಊರಿಗೂರೇ ಬದಲಾಗಿದೆ ಕಾಲ ಮಾತ್ರವಲ್ಲ ಊರಿಗೂರೇ ಬದಲಾಗಿದೆ. ಮೊದಲೆಲ್ಲಾ ಮುಂಬಯಿಂದ […]
Read More
15-03-2017, 7:10 AM
ಆತ್ಮೀಯರೇ, ಶ್ರೀಕ್ಷೇತ್ರ ಗೆಜ್ಜೆಗಿರಿ, ದೇಯಿ ಬೈದ್ಯೆತಿ-ಕೋಟಿಚೆನ್ನಯ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಎಲ್ಲಾ ಬಿಲ್ಲವರು ಒಮ್ಮತದಿಂದ ಒಟ್ಟು ಸೇರಿ ನಾವೆಲ್ಲರೂ ಒಂದೇ ಛತ್ರದಡಿಯಲ್ಲಿ ಇರಲು ಒಲವುಳ್ಳರಾಗಿದ್ದೇವೆ ಎಂಬುವುದನ್ನು ತೋರಿಸಿಕೊಟ್ಟಿದ್ದೇವೆ. ಇದರಿಂದ ಎಲ್ಲಾ ಬಿಲ್ಲವ ಸಂಘಗಳ ಮುಖಂಡರುಗಳು ಒಟ್ಟು ಸೇರಿ ಚಿಂತನೆ ಮಾಡಬೇಕಾದ ಕಾಲ ಸನ್ನಿಹಿತವಾಗಿದೆ. ಹಿಂದೊಮ್ಮೆ ನಾವು ಈ ಉಭಯ ಜಿಲ್ಲೆಗಳಲ್ಲಿ ಪಡೆದಿದ್ದ ಪ್ರಾಬಲ್ಯವನ್ನು ಮರುಸ್ಥಾಪಿಸಬೇಕಾದ ಮಹತ್ತರವಾದ ಕೆಲಸ ನಮ್ಮೆಲ್ಲರ ಮುಂದಿದೆ. ಈ ದಿಸೆಯಲ್ಲಿ ನಾವೆಲ್ಲರೂ ಚಿಂತಿಸಿ ಸೂಕ್ತ ನಿರ್ಧಾರಗಳನ್ನು ತಳೆದು ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕವಾದ […]
Read More