ಯುವವಾಹಿನಿ ಉಪ್ಪಿನಂಗಡಿ ಘಟಕದ ಸದಸ್ಯರು ದಿನಾಂಕ 19.03.2017ರಂದು ಸಂಪರ್ಕದ ದೃಷ್ಟಿಯಿಂದ ಏಕದಿನ ಪ್ರವಾಸ ಕಾರ್ಯಕ್ರಮ ಜರುಗಿತು.
ಅಂದು ಬೆಳಗ್ಗೆ 7 ರಿಂದ ಪ್ರವಾಸ ಆರಂಭಗೊಂಡಿತು. ಪುನರುಸ್ಥಾನಗೊಳ್ಳುತ್ಥಿರುವ ವೀರ ಪುರುಷರಾದ ಕೋಟಿ ಚೆನ್ನಯರ ಜನ್ಮಸ್ಥಾನ ಗೆಜ್ಜೆಗಿರಿ ನಂದನಬಿತ್ತಲ್ ಇಲ್ಲಿಗೆ ಭೇಟಿ ನೀಡಿ ಜನ್ಮಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಕ್ಷೇತ್ರದ ಇತಿಹಾಸದ ಬಗ್ಗೆ ಸ್ಥಳೀಯರಾದ ಮಹಾಬಲ ಇವರು ವಿವರ ನೀಡಿದರು, ನಂತರ ಹನುಮಗಿರಿ ಆಂಜನೇಯ ದೇವಸ್ಥಾನ, ಕಾಸರಗೋಡು ಮಲ್ಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.
ಕೇರಳದ ಸುಪ್ರಸಿದ್ಧ ಪ್ರವಾಸಿತಾಣ ಬೇಕಲಕೋಟೆಗೆ ಭೇಟಿ ನೀಡಿ, ಬೇಕಲ ಸಮುದ್ರ ತೀರದಲ್ಲಿ ಘಟಕದ ಸಭೆಯನ್ನು ನಡೆಸಲಾಯಿತು. ಹಾಗೂ ಪ್ರವಾಸದ ಸಂತಸದ ಅನುಭವಗಳನ್ನು ಸದಸ್ಯರು ಪರಸ್ಪರ ಹಂಚಿಕೊಂಡರು.
ಈ ಪ್ರವಾಸ ಕಾರ್ಯಕ್ರಮದಲ್ಲಿ ಅದ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಸಲಹೆಗಾರರಾದ ವರದ್ರಾಜ್ ಎಮ್, ಕೇಂದ್ರ ಸಮಿತಿಯ ಮಾಜಿ ಅದ್ಯಕ್ಷರಾದ ಡಾ.ಸದಾನಂದ ಕುಂದರ್, ಬೆಳ್ತಂಗಡಿ ತಾಲೂಕು ಸಂಘಟನಾ ಕಾರ್ಯದರ್ಶಿ ಶೇಖರ್ ಗೌಂಡತ್ತಿಗೆ,ಉಪಾಧ್ಯಕ್ಷರಾದ ಅಜಿತ್ ಪಾಲೇರಿ, ಕಾರ್ಯದರ್ಶಿ ಮನೋಜ್ ಸಾಲ್ಯಾನ್ ಸುಣ್ಣಾಜೆ ಮತ್ತಿತರರು ಉಪಸ್ಥಿತರಿದ್ದರು.