ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾದಾಗ ಮಾತ್ರ ಅತ್ಯಾಚಾರ ಶೋಷಣೆ ಮುಂತಾದ ಅಪರಾಧಗಳು ಕಡಿಮೆಯಾಗಬಹುದು. ಗಂಡಿಗಿಂತ ಹೆಚ್ಚಾಗಿ ಹೆಣ್ಣಿಗೆ ನೋವು ಸಹಿಸುವ ಶಕ್ತಿ ಇದೆ. ಮಹಿಳೆಯರ ಸಂಕಷ್ಟಕ್ಕೆ ಮಹಿಳೆಯರೇ ಬೆಂಬಲಕ್ಕೆ ನಿಂತಾಗ ಮಾತ್ರ ಮಹಿಳಾ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ. ಎಂದು ರೋಶನಿ ನಿಲಯದ ಪಿ.ಜಿ.ಸೆಂಟರ್ ಡೀನ್ ಡಾ.ರಮೀಳಾ ಶೇಖರ್ ತಿಳಿಸಿದರು.
ಅವರು ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಆಂತರ್ಯ ಮನದೊಳಗಿನ ಮಾತು .ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ಮಹಾ ನಗರ ಪಾಲಿಕೆಯ ಮಾಜಿ ಮೇಯರ್ ಶ್ರೀಮತಿ ರಜನಿ ದುಗ್ಗಣ್ಣ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಪ್ರತಿಭಾ ಕುಳಾಯಿ, ಮುಂಬೈ ಹೈಕೋರ್ಟು ವಕೀಲರಾದ ಶ್ರೀಮತಿ ರೋಹಿಣಿ ಸಾಲ್ಯಾನ್, ಶ್ರೀ ಕ್ಷೇತ್ರ ಕುದ್ರೋಳಿಯ ಕೋಶಾಧಿಕಾರಿ ಪದ್ಮರಾಜ್, ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ವಿಜೇತೆ ಪ್ರೊ.ವೇದಾವತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಸಮಾರಂಭದ ಅದ್ಯಕ್ಷತೆ ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ ಕರ್ಕೇರಾ ಉಪಸ್ಥಿತರಿದ್ದರು. ಮಹಿಳಾ ಸಂಘಟನಾ ನಿರ್ದೇಶಕಿ ಶ್ರೀಮತಿ ಗುಣವತಿ ರಮೇಶ್ ಧನ್ಯವಾದ ನೀಡಿದರು. ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.