ಯಶಸ್ಸು ನಮ್ಮನ್ನು ಜಗತ್ತಿಗೆ ಪರಿಚಯಿಸುತ್ತದೆ ಆದರೆ ಸೋಲು ನಮಗೆ ಜಗತ್ತನ್ನು ಪರಿಚಯಿಸುತ್ತದೆ. ಎಂದು ಸುವರ್ಣ ನ್ಯೂಸ್ ವಾರ್ತಾ ವಾಚಕಿ ವೀಣಾ ಪೂಜಾರಿ ತಿಳಿಸಿದರು.
ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ಸಂವೇದನಾ ಶೀಲ ಕಾರ್ಯ ಸಾಧನಾಶೀಲ ಮಹಿಳೆಯರ – ಸಂವಾದ – ಆಂತರ್ಯ – ಮನದೊಳಗಿನ ಮಾತು ಕಾರ್ಯಕ್ರಮದಲ್ಲಿ ಸಂವಾದ ನಿರ್ವಹಿಸಿ ಮಾತನಾಡಿದರು.
ಆತ್ಮವಿಶ್ವಾಸದಿಂದ ಮಾತ್ರ ಹೆಣ್ಣು ಸ್ವಾವಲಂಬಿ ಬದುಕು ನಡೆಸಲು ಸಾಧ್ಯ ಎಂದು ಯುವ ಸಾಹಿತಿ ಪ್ರಮೀಳಾ ದೀಪಕ್ ಪೆರ್ಮುದೆ ತನ್ನ ನೋವು ತುಂಬಿದ ಬದುಕಿನ ದಿನಗಳನ್ನು ಮೆಲುಕು ಹಾಕಿದರು.
ಸೌಂದರ್ಯ ತಜ್ಞೆ ವೇದಾ ಎಸ್ ಸುವರ್ಣ, ಚಲನಚಿತ್ರ ನಿರ್ದೇಶಕಿ ಅಶ್ವಿನಿ ಡಿ ಕೋಟ್ಯಾನ್, ಸಂಘಟಕಿ ಕೆ.ಎ.ರೋಹಿಣಿ, ಯುವ ಸ್ಯಾಕ್ಸ್ ಫೋನ್ ವಾದಕಿ ಕುಮಾರಿ ಜ್ಯೋತಿ, ಯುವ ಉದ್ಯಮಿ ಕುಮಾರಿ ಉಷಾ, ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು
Great.progrem.wish.yu.all.the.best
Yuvahini.uttama.vagide
Raghu.poojary.
Mob.9867526110
Successefull.show.yu.Take