ಎಲ್ಲಾ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಯ ಹಿಂದೆ ಕಲ್ಲು ಮುಳ್ಳುಗಳ ಹಾದಿಯ ಮೂಲಕ ಕಠಿಣವಾದ ಪರಿಶ್ರಮವಿದೆ. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಅಭಿನಂದಿಸಿದ ಯುವವಾಹಿನಿ ಕಾರ್ಯ ಶ್ಲಾಘನೀಯ ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತೆ, ಮಂಗಳೂರಿನ ಪ್ರಥಮ ಪ್ರಜೆ ಶ್ರೀಮತಿ ಕವಿತಾ ಸನಿಲ್ ತಿಳಿಸಿದರು.
ಅವರು ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ 19.03.2017 ನೇ ಆದಿತ್ಯವಾರ ಶ್ರೀ ಕ್ಷೇತ್ರ ಕುದ್ರೋಳಿಯ ಗ್ಲಾಸ್ ಹೌಸ್ನಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಜರುಗಿದ ಸಂವೇದನಾ ಶೀಲ ಕಾರ್ಯ ಸಾಧನಾಶೀಲ ಮಹಿಳೆಯರ – ಸಂವಾದ – ಆಂತರ್ಯ – ಮನದೊಳಗಿನ ಮಾತು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹೆಣ್ಣು ತಾಯಿಯಾಗಿ, ಹೆಂಡತಿಯಾಗಿ, ಅಕ್ಕನಾಗಿ, ತಂಗಿಯಾಗಿ ಮಾತ್ರ ತಮ್ಮ ಜವಾಬ್ದಾರಿ ನಿರ್ವಹಿದರೆ ಸಾಲದು,ಎಲ್ಲಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಗೌರವದ ಸ್ಥಾನಮಾನ ಹೊಂದಬೇಕು ಎಂದು ಮುಂಬೈ ಹೈಕೋರ್ಟಿನ ವಕೀಲರಾದ ಶ್ರೀಮತಿ ರೋಹಿಣಿ ಸಾಲ್ಯಾನ್ ಸಮಾರಂಭ ಉದ್ಘಾಟಿಸಿ ಅಭಿಪ್ರಾಯ ಪಟ್ಟರು.
ತೆರೆಮರೆಯಲ್ಲಿರುವ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಬೆಳಕಿಗೆ ತರುವ ಕಾರ್ಯವನ್ನು ಯುವವಾಹಿನಿ ಮಾಡುವ ಮೂಲಕ ಮಾದರಿ ಸಂಘಟನೆಯಾಗಿ ಮೂಡಿಬಂದಿದೆ ಎಂದು ಮುಖ್ಯ ಅತಿಥಿಯಗಿ ಮಾತನಾಡಿದ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯದರ್ಶಿ ಗೀತಾಂಜಲಿ ಸುವರ್ಣ ತಿಳಿಸಿದರು.
ಕುದ್ರೋಳಿ ಶ್ರೀ ಗೋಕ್ರಣನಾಥ ಕ್ಷೇತ್ರದ ಅದ್ಯಕ್ಷ ಎಚ್ ಎಸ್ ಸಾಯಿರಾಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಯುವವಾಹಿನಿ ಕೇಂದ್ರ ಸಮಿತಿಯ ಅದ್ಯಕ್ಷ ಪದ್ಮನಾಭ ಮರೋಳಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು ಮಹಿಳಾ ಸಂಘಟನಾ ನಿರ್ದೇಶಕಿ ಶ್ರೀಮತಿ ಗುಣವತಿ ರಮೇಶ್ ಪ್ರಸ್ತಾವನೆಯ ಮೂಲಕ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ನಿತೇಶ್ ಜೆ. ಕರ್ಕೇರಾ ಧನ್ಯವಾದ ನೀಡಿದರು, ಯುವ ಸಾಹಿತಿ ಶ್ರೀಮತಿ ಪ್ರಮೀಳಾ ದೀಪಕ್ ಪೆರ್ಮುದೆ ಹಾಗೂ ನರೇಶ್ ಕುಮಾರ್ ಸಸಿಹಿತ್ಲು ಕಾರ್ಯಕ್ರಮ ನಿರ್ವಹಿಸಿದರು
ಉದ್ಘಾಟನಾ ಸಮಾರಂಭ ಮೊದಲು ರಿತೇಶ್ ಹಾಗೂ ಬಳಗ ಸುರತ್ಕಲ್ ಇವರಿಂದ ಗಾನ – ನೃತ್ಯ – ಕುಂಚ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.
The programme appears to be held in a befitting manner as seen from the photos. Good selection of the guests. Gunavathi karkera and Manila Chapter deserve to be appreciated.