ಪಣಂಬೂರು ಘಟಕದ ಶಿವಗಿರಿ ಯಾತ್ರೆ
21-04-2017, 3:30 PM
ಯುವವಾಹಿನಿ ಪಣಂಬೂರು ಘಟಕದ ಸದಸ್ಯರು ದಿನಾಂಕ 22.04.2017 ರಿಂದ. 24.04.2017 ರ ವರಗೆ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು 50 ಸದಸ್ಯರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು
21-04-2017, 3:30 PM
ಯುವವಾಹಿನಿ ಪಣಂಬೂರು ಘಟಕದ ಸದಸ್ಯರು ದಿನಾಂಕ 22.04.2017 ರಿಂದ. 24.04.2017 ರ ವರಗೆ ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು 50 ಸದಸ್ಯರು ಈ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು
12-03-2017, 5:43 AM
ಇಂದು ಬಡವರ ಮಕ್ಕಳು ಸಹ ಶಿಕ್ಷಣ ಪಡೆಯಲು ಅವಕಾಶ ಇದೆ. ಪೋಷಕರು ಇದನ್ನು ಮನಗಂಡು ಮಕ್ಕಳ ವಿದ್ಯೆಗೆ ಪ್ರಾಮುಖ್ಯ ನೀಡಬೇಕು ವಿದ್ಯಾರ್ಜನೆಯಿಂದ ವಂಚಿಸಿದರೆ ದೇವರ ಶಾಪಕ್ಕೆ ಗುರಿಯಾಗುವಿರಿ ಎಂದು ಬೆಳ್ತಂಗಡಿ ಶಾಸಕ ಹಾಗೂ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅದ್ಯಕ್ಷ ವಸಂತ ಬಂಗೇರ ತಿಳಿಸಿದರು. ಅವರು ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ಮೂಡುಕೋಡಿ ಗ್ರಾಮದ ಬಿಲ್ಲವ ಭಾಂದವರಿಗೆ ನಾರಾಯಣಗುರು, ಕೋಟಿ ಚೆನ್ನಯ, ಕಿಮ್ಮಲೆ ನಾಗಬ್ರಹ್ಮರ ಉಚಿತ ಭಾವಚಿತ್ರ ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನೆರವೇರಿಸಿ […]
15-02-2017, 7:38 AM
ಯುವವಾಹಿನಿ ಬೆಳ್ತಂಗಡಿ ಘಟಕದ ಆಶ್ರಯದಲ್ಲಿ ದಿನಾಂಕ 15.02.2017 ರಂದು ಅಳದಂಗಡಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ತತ್ವ ಪ್ರಚಾರ ಕಾರ್ಯಕ್ರಮ ಜರುಗಿತು. ಅಸ್ಪೃಶ್ಯತೆ ತಾಂಡವವಾಡುತ್ತಿದ್ದ ಶತಮಾನಗಳ ಹಿಂದಿನ ಕಾಲಘಟ್ಟದಲ್ಲಿ ಮಾಹಾನ್ ಮಾನವತಾವಾದಿ ಬ್ರಹ್ಮಶ್ರೀ ನಾರಾಯಣಗುರು ಜನ್ಮತಾಳದಿದ್ದರೆ ಇಂದಿಗೂ ಅಸ್ಪೃಶ್ಯತೆ ಇರುತಿತ್ತು, ಗುರುವರ್ಯರ ಮುಖ್ಯ ಉದ್ದೇಶ ವಿದ್ಯೆ, ಉದ್ಯೋಗ, ಸಂಪರ್ಕ ಸಮಾಜದಲ್ಲಿ ಪಸರಿಸುತ್ತಿರುವ ಯುವವಾಹಿನಿ ಸಂಸ್ಥೆ ಬಿಲ್ಲವ ಸಮಾಜಕ್ಕೆ ಶಕ್ತಿ ತುಂಬಿದೆ, ಯುವಕರು ದುಶ್ಚಟಗಳಿಂದ ದೂರವಾಗಿ ಗುರುಗಳ ಸಂದೇಶ ಅನುಸರಿಸಬೇಕು ಎಂದು ಕೇರಳದ ಶಿವಗಿರಿ ಮಠದ ಶ್ರೀ ಶ್ರೀ ಶ್ರೀ ಸತ್ಯಾನಂದ […]
04-02-2017, 6:25 AM
ಯುವವಾಹಿನಿ ಮಂಗಳೂರು ಮಹಿಳಾ ಘಟಕದ ಸದಸ್ಯರು ದಿನಾಂಕ 04.02.2017 ರಂದು ಲೋಕಶಾಂತಿಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮಸ್ಥಾನ ಕೇರಳದ ಶಿವಗಿರಿಗೆ ಪ್ರವಾಸ ಕೈಗೊಂಡರು.
01-02-2017, 12:45 PM
“ಓಂ ನಮೋಃ ನಾರಾಯಣ ಪರಮ ಗುರುವೇ ನಮಃ”. ಬ್ರಹ್ಮಶ್ರೀ ನಾರಾಯಣ ಗುರುಗಳ ಈ ನಾಮ ಸ್ಮರಣೆ ಮುಗಿಲು ಮುಟ್ಟುವಂತಿದ್ದುದು ಶಿವಗಿರಿಯ ಮಹಾತೀರ್ಥಾಟನಾ ಉತ್ಸವದಲ್ಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಪವಿತ್ರ ಭೂಮಿ ವರ್ಕಳದ ಶಿವಗಿರಿಯ ವೈಭವದ ದೃಶ್ಯ ಕಣ್ಮನ ಸೆಳೆಯುವುದು, ಭಕ್ತಸಾಗರವೇ ಹರಿದುಬರುವ ಶಿವಗಿರಿಯ ತಿರ್ಥಾಟನಾ ಸಂದರ್ಭದಲ್ಲಿ. ಇದಕ್ಕೆ ಸಾಕ್ಷೀಭೂತವಾಗಿದ್ದು ಇತ್ತೀಚೆಗೆ ನಡೆದ 84 ನೇ ಶಿವಗಿರಿ ತಿರ್ಥಾಟನೆಯಲ್ಲಿ ಪಾಲ್ಗೊಂಡ ಮಂಗಳೂರು ಯುವವಾಹಿನಿ ಘಟಕದ ತಂಡ. ಹೌದು, ಸೇವಾ ಮನೋಭಾವನೆಯ ಮನಸಂಕಲ್ಪದಿಂದ ಹಾಗೂ ಶಿವಗಿರಿಯ ತೀರ್ಥಾಟನಾ ಉತ್ಸವವನ್ನು ನೋಡಿ […]
11-12-2016, 11:39 AM
ದಿನಾಂಕ 11-12-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ (ರಿ) ಪಣಂಬೂರು ಘಟಕದ ವತಿಯಿಂದ ಯುವವಾಹಿನಿ ಕೂಳೂರು ಘಟಕದ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶಗಳ ಅನುಷ್ಠಾನದಲ್ಲಿ ಬಿಲ್ಲವ ಸಮಾಜ ಎಂಬ ವಿಚಾರ ಕಮ್ಮಟ ನಡೆಯಿತು. ಕುಳಾಯಿ ಸಂಘದ ಅಧ್ಯಕ್ಷ ಎಂ.ಟಿ. ಸಾಲ್ಯಾನ್ ದೀಪ ಬೆಳಗಿಸಿ ಕಮ್ಮಟವನ್ನು ಉದ್ಘಾಟಿಸಿದರು. ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷ ಕೆ. ವಿಶ್ವನಾಥ್ರವರು ಪಣಂಬೂರು ಹಾಗೂ ಕೂಳೂರು ಘಟಕದ ಬೆಳವಣಿಗೆಯನ್ನು ತಿಳಿಸುತ್ತಾ ಕಾರ್ಯಕ್ರಮದ ಬಗ್ಗೆ ಪ್ರಸ್ತಾವನೆ ಗೈದರು. ಯುವವಾಹಿನಿ (ರಿ) ಕೇಂದ್ರ […]
01-10-2016, 5:14 AM
ತುಳುನಾಡಿನ ಪರಂಪರೆ, ದೈವಾರಾಧನೆಯ ಬಗ್ಗೆ ಜನರಿಗೆ ತಿಳಿಸುವ ನಿಟ್ಟಿನಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 88 ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಂಘ ಮತ್ತು ಯುವವಾಹಿನಿ ಪಡುಬಿದ್ರಿ ಘಟಕವು ಜಂಟಿಯಾಗಿ ನಡೆಸಿದ ಕೊಡಿಯಡಿತ ಸತ್ಯೊಲು ಎಂಬ ವಿಚಾರಗೋಷ್ಟಿಯನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ ಉದ್ಘಾಟಿಸಿ ಶುಭಹಾರೈಸಿದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಹಿರಿಯ ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಮಾತನಾಡಿ ಪುರಾತನ ಕಾಲದಲ್ಲಿ ಕೂಡು ಕುಟುಂಬದಲ್ಲಿ ಮಹಿಳೆಯರೇ ದೈವಗಳಿಗೆ ದೀಪವಿಡುವ ಪರಿಕ್ರಮವಿದ್ದು ಕಾಲಾನಂತರ ಮಹಿಳೆಯರನ್ನು […]
25-09-2016, 5:36 AM
ದಿನಾಂಕ 25-9-2016 ರಂದು ಯುವವಾಹಿನಿ (ರಿ) ಕಂಕನಾಡಿ ಘಟಕದ ವತಿಯಿಂದ ಉಜ್ಜೋಡಿಯ ಮಹಾಂಕಾಳಿ ದೈವಸ್ಥಾನದ ವಠಾರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 162 ನೇ ಜಯಂತಿ ಆಚರಣೆ ಹಾಗೂ ಗುರುಗಳ ಬಗ್ಗೆ ಶಾಲಾ ಮಕ್ಕಳಿಗೆ ಏರ್ಪಡಿಸಿದ ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಜರಗಿತು. ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರದ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ್ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಕೇಂದ್ರ ಸಮಿತಿಯ ಅಧ್ಯಕ್ಷ ಪದ್ಮನಾಭ ಮರೋಳಿ, ಸಿಂಚನ ಲೈಟಿಂಗ್ ಕಂಟ್ರೋಲ್ನ CEO ರತ್ನಾಕರ ಸುವರ್ಣ, ಮಾಜಿ […]
18-09-2016, 5:25 AM
ದಿ. 18-09-2016 ರಂದು ಕುಳಾಯಿ ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘದ ಸಭಾಭವನದಲ್ಲಿ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ಗುರುಜಯಂತಿ ಪ್ರಯುಕ್ತ ಶ್ರೀ ಗುರುಸ್ಮರಣೆ ಕಾರ್ಯಕ್ರಮ ಜರಗಿತು. ಬೆಳಿಗ್ಗೆ ನಡೆದ ಕಾರ್ಯಕ್ರಮದಲ್ಲಿ ಸುರತ್ಕಲ್ ಪರಿಸರದ ಆಮಂತ್ರಿತ ಭಕ್ತಿಗೀತೆ ಸಂಗೀತ ಬಳಗದವರಿಂದ ಭಕ್ತಿಗೀತೆ ಹಾಡುಗಾರಿಕೆ ಸಮೂಹ ಸ್ಪರ್ಧೆಯನ್ನು ಘಟಕದ ಮಾಜಿ ಅಧ್ಯಕ್ಷ ವಿಜಯ ಎಸ್. ಕುಕ್ಯಾನ್ರವರ ಸಂಚಾಲಕತ್ವದಲ್ಲಿ ಆಯೋಜಿಸಲಾಗಿತ್ತು. ಭಕ್ತಿಗೀತೆ ಸ್ಪರ್ಧಾ ಕಾರ್ಯಕ್ರಮವನ್ನು ಸುರತ್ಕಲ್ ಅಕ್ಷಯ ಡೆವಲಪರ್ಸ್ನ ಮಾಲಕ ಅಕ್ಷಯ ಎನ್. ಬಂಗೇರರವರು ಉದ್ಘಾಟಿಸಿದರು. ಈ ಸ್ಪರ್ಧಾ […]
16-09-2016, 5:10 AM
ದಿ. 16-9-2016 ರ ಗುರುಜಯಂತಿಯಂದು ಹಳೆಯಂಗಡಿ ಘಟಕದ ವತಿಯಿಂದ ಹಳೆಯಂಗಡಿ ಗ್ರಾಮ ಪಂಚಾಯತ್ ಸಹಕಾರದೊಂದಿಗೆ ಹಳೆಯಂಗಡಿ ಪರಿಸರದ ಹಳೆಯಂಗಡಿ-ಕೊಪ್ಪಳ ಸಂಪರ್ಕ ರಸ್ತೆಯನ್ನು ಅಧಿಕೃತವಾಗಿ ಬ್ರಹ್ಮಶ್ರೀ ನಾರಾಯಣ ಗುರು ರಸ್ತೆ ಎಂಬ ನಾಮಕರಣದಲ್ಲಿ ಶಾಸಕ ಅಭಯಚಂದ್ರ ಜೈನ್ರವರಿಂದ ಉದ್ಘಾಟಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಹೆಚ್ಚಿನ ಸದಸ್ಯರು ಭಾಗವಹಿಸಿ, ಹಳೆಯಂಗಡಿ ಪರಿಸರದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಹೆಸರು ಸದಾ ರಾರಾಜಿಸುವಂತೆ ಮಾಡುವಲ್ಲಿ ಯಶಸ್ವಿಯಾಗಿರುತ್ತೇವೆ.