ಇತ್ತೀಚೆಗೆ ಯುವಜನಾಂಗವು ಮದರಂಗಿ ಕಾರ್ಯಕ್ರಮದಲ್ಲಿ ಮಧ್ಯಪಾನಕ್ಕಾಗಿಯೇ ಆಸಕ್ತಿಯಿಂದ ಭಾಗವಹಿಸಿ, ಅನೇಕ ಅನಾಹುತವನ್ನು ಸೃಷ್ಟಿಸುತ್ತೀವೆ.ಆದರೆ ನಮ್ಮ ಘಟಕದ ಸಕ್ರಿಯೆ ಸದಸ್ಯೆಯಾಗಿರುವ ಕುಮಾರಿ ಹರ್ಷಿತರವರ ಮದರಂಗಿ ಶಾಸ್ತ್ರವು ಬಹಳ ವಿಭಿನ್ನತೆಗೆ ಸಾಕ್ಷಿಯಾಯಿತು.
ದಿನಾಂಕ 13/11/2019ರಂದು ಅವಳ ಸ್ವಗೃಹವಾದ ಕುರಿಯಾಳದಲ್ಲಿ ಸಂಜೆ ಗೋಧೂಳಿ ಲಗ್ನದಲ್ಲಿ ಸತ್ಯನಾರಾಯಣ ಪೂಜೆ,ನಂತರ ಓಂಕಾರೇಶ್ವರ ಭಜನಾಮಂಡಳಿಯವರಿಂದ ಭಜನೆ ಕುಣಿತ ಅರಳುವ ಪ್ರತಿಭೆಗಳಿಂದ ಮಕ್ಕಳ ಮತ್ತು ಯುವಕರ ಸಾಂಸ್ಕೃತಿಕ ಕಾರ್ಯಕ್ರಮ,ಹಲವು ರೀತಿಯ ಮೋಜಿನ ಆಟಗಳು ಪ್ರೇಕ್ಷಕರನ್ನು ಮನರಂಜಿಸಿದವು.
ಈ ರೀತಿಯಾಗಿ ಮಧ್ಯಪಾನವು ಸಮಾಜದ ಸ್ವಾಸ್ಥ್ಯದ ವಿನಾಶಕ್ಕೆ ಕಾರಣವಾಗುತ್ತಿದ್ದು , ಮದರಂಗಿ ಕಾರ್ಯಕ್ರಮವು ನವಕುಡುಕರನ್ನು ಸೃಷ್ಟಿಸುವ ತಾಣವಾಗಿ ಪರಿವರ್ತನೆಗೊಳ್ಳುತ್ತೀವೆ. ಇಂತಹ ಅನಾಹುತವನ್ನು ತಡೆಗಟ್ಟುವ ನಿಟ್ಟಿನಲ್ಲಿ ಮದ್ಯಮುಕ್ತ ಕಾರ್ಯಕ್ರಮವು ಹೆಚ್ಚು ಹೆಚ್ಚು ಮೂಡಿಬರಲಿ ಎಂಬುದು ನಮ್ಮೆಲ್ಲರ ಆಶಯ.
ಈ ಕಾರ್ಯಕ್ರಮದಲ್ಲಿ ನಮ್ಮ ಘಟಕದ ಎಲ್ಲಾ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿ ಸಂಭ್ರಮಿಸಿದರು.