ಯುವವಾಹಿನಿ (ರಿ.) ಬಂಟ್ವಾಳ ಘಟಕದ ವತಿಯಿಂದ ನೆರವೇರಿದ ವಿಶಿಷ್ಟ ಕಾರ್ಯಕ್ರಮ..
ಲೋಕ ಶಾಂತಿಯ ಹರಿಕಾರ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವವನ್ನು ಜೀವನದಲ್ಲಿ ಪಾಲಿಸಲು ಪಣತೊಟ್ಟು,, ಕಠಿಬದ್ಧರಾಗುವುದರೊಂದಿಗೆ ಮದುವೆಯ ಮುಂಚಿತವಾಗಿ ಜರಗುವ ಶುಭಕಾರ್ಯವನ್ನು ಪಾವಿತ್ರ್ಯತೆಯೆಡೆಗೊಯ್ದ
“ಮದ್ಯಮುಕ್ತ ಮದರಂಗಿ”
ಯುವವಾಹಿನಿ(ರಿ.) ಬಂಟ್ವಾಳ ಘಟಕದ ಸಕ್ರಿಯ ಸದಸ್ಯರಾದ ಹರೀಶ್ ಸಾಲ್ಯಾನ್ ಅಜಕಲ ರವರ ಮದುವೆಯ ಮದರಂಗಿಯ ಕಾರ್ಯಕ್ರಮವು ವಿಭಿನ್ನತೆಯಿಂದ ನೆರವೇರಿದ್ದು,ಸಮಾಜದಿಂದಲೇ ಸಮಾಜವನ್ನು ತಿದ್ದಿ ಸರಿದಾರಿಗೊಯ್ಯುವ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮುನ್ನುಡಿ ಬರೆದ ಯುವವಾಹಿನಿ (ರಿ.)ಬಂಟ್ವಾಳ ಘಟಕ ದ ಸದಸ್ಯರ ವಿಶಾಲವಾದ ಮನೋಭಾವನೆಗಳಿಗೆ ಯುವವಾಹಿನಿ ಗೆ ಯುವವಾಹಿನಿ ಯೇ ಸರಿ ಸಾಟಿಯಲ್ಲದೆ ಬೇರೇನಿದೆ.
ಊರಿಗೆ ಊರೇ ಸಂದೇಶ ಸಾರುವ ಈ ವಿಶೇಷ ಕಾರ್ಯಕ್ರಮ ಮುಸ್ಸಂಜೆ ಯ ಮದರಂಗಿ ಮಂಟಪದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿರುವ ಹರೀಶ್ ಸಾಲ್ಯಾನ್ ಅಜಕಲ ರವರು ಮದುಮಗನ ಆಸನದಲ್ಲಿ ಅಭ್ಯಾಗತರಾಗಿ ಮದರಂಗಿ ಯ ಶುಭಗಳಿಗೆಯನ್ನು ಅಸ್ವಾದಿಸಲಾರಂಭಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಪ್ರೇಮನಾಥ್ ಬಂಟ್ವಾಳ ರವರು ಪ್ರಾಸ್ತಾವಿಕ ಮಾತನ್ನಾಡಿದರು.ಆಳ್ವಾಸ್ ಕಾಲೇಜಿನ ಉಪನ್ಯಾಸಕರಾದ ಯೋಗೀಶ್ ಕೈರೋಡಿಯವರು ಆಶಯ ದ ನುಡಿಗಳನ್ನಾಡಿದರು.ಯುವವಾಹಿನಿ (ರಿ.)ಕೇಂದ್ರ ಸಮಿತಿಯ ಅಧ್ಯಕ್ಷರಾದ ನರೇಶ್ ಕುಮಾರ್ ಸಸಿಹಿತ್ಲು ರವರು ಸರಿಸುಮಾರು 20 ಯುವಮನಸ್ಸುಗಳಿಗೆ ತಾವು ತಮ್ಮ ಜೀವನದಲ್ಲಿ ಮದ್ಯಮುಕ್ತ ಮದರಂಗಿ ಹಾಗೂ ಶುಭಕಾರ್ಯಗಳನ್ನು ಮದ್ಯವರ್ಜಿತವನ್ನಾಗಿಸಲು ‘ಸಂಕಲ್ಪ ಪ್ರತಿಜ್ಞಾ ಬೋಧನೆ’ ಗೈದರು.
ಸಮಾಜದಲ್ಲಿ ಯುವಕರು ದಾರಿ ತಪ್ಪುತ್ತಿದ್ದಾರೆ…ಸರಿದಾರಿಗೊಯ್ಯುವ ಪ್ರಯತ್ನ ಮಾಡಬೇಕು ಎಂಬ ಸೊಗಸಾದ ಮಾತುಗಳು ಕೇವಲ ಭಾಷಣ ಬಿಗಿಯುವ ಭಾಷಣಕಾರರ ಭಾಷಣಕ್ಕೆ ಮಾತ್ರ ಸೀಮಿತವಾಗಿ ಸಾರ್ವಜನಿಕರು ಅವರ ಭಾಷಣವನ್ನು ಸಭೆಯಲ್ಲಿ ಕುಳಿತು ಮೂಕಪ್ರೇಕ್ಷಕರಾಗಿ ಕೇಳುವ ಸನ್ನಿವೇಶಗಳೇ ಹೆಚ್ಚಾಗಿರುವ ಈ ಕಾಲಘಟ್ಟದಲ್ಲಿ ಅದಕ್ಕೆ ಬದಲಾಗಿ ಯುವವಾಹಿನಿ(ರಿ.) ಬಂಟ್ವಾಳ ಘಟಕದ ಸದಸ್ಯ ಹರೀಶ್ ಸಾಲ್ಯಾನ್ ಅಜಕಲ ರವರ ಮದುವೆಯ ಮದರಂಗಿ ಸಮಾರಂಭದ ಮದರಂಗಿಯ ಮಂಟಪವನ್ನೇರಿ ಸಮಾಜವನ್ನು ತಿದ್ದಿ ಸರಿದಾರಿಗೊಯ್ಯಲು
ಶುಭಕಾರ್ಯಗಳನ್ನು ಮದ್ಯವರ್ಜಿತವನ್ನಾಗಿಸಲು ಪ್ರತಿಜ್ಞೆ ಸ್ವೀಕರಿಸಿ ಸಮಾಜದ ಬದಲಾವಣೆಗೆ ಪಣತೊಟ್ಟ ಮಾದರಿ ಯುವಕರು ಸಭೆಯಲ್ಲಿ ಆಸೀನರಾಗಿರುವವರನ್ನು ಮೂಕಪ್ರೇಕ್ಷಕರನ್ನಾಗಿಸಿದ ದೃಶ್ಯ ಅಪರೂಪದ ಘಟನೆಯಾದರೂ ಯುವವಾಹಿನಿ ಯ ಯುವಮನಸ್ಸುಗಳು ಸಮಾಜವನ್ನು ಬದಲಾವಣೆಯ ಹಾದಿಯಲ್ಲಿ ಮುನ್ನಡೆಸಲು ಸಾರಥಿಯಾದುದು ಶ್ಲಾಘನೀಯ.ಈ ಸಾರಥಿಗಳು ಇಡೀ ಯುವವಾಹಿನಿ ಗೆ ಮಾದರಿ.ಯುವವಾಹಿನಿ (ರಿ.) ಬಂಟ್ವಾಳ ಘಟಕದ ಸದಸ್ಯರು ನಮಗೆಲ್ಲರಿಗೂ ಪ್ರೇರಕರು.ಸಮಾಜದೆಲ್ಲೆಡೆ ಇಂತಹ ಕಾರ್ಯಗಳು ಬ್ರಹ್ಮ ಶ್ರೀ ನಾರಾಯಣ ಗುರುಗಳ ಆಶೀರ್ವಾದದಿಂದ ನಿರಂತರವಾಗಿ ನಡೆದು ಕೊಂಡು ಬರಲಿ ಎಂದರು.
ಯುವಮನಸ್ಸಿನ ಯುವವಾಹಿನಿ ಸದಸ್ಯರು ಮದ್ಯಮುಕ್ತ ಮದರಂಗಿ ಸಂಕಲ್ಪ ಪ್ರತಿಜ್ಞೆ ಸ್ವೀಕರಿಸುವ ಮೂಲಕ ಸಮಾಜಕ್ಕೆ ಮಾದರಿಯಾದರು ಹಾಗೂ ಈ ಮೂಲಕ ಕಾರ್ಯಕ್ರಮ ಸಾರ್ಥಕತೆಯನ್ನು ಕಂಡಿತು.ಬಂದ ಸರ್ವರೂ ಯುವಕರ ಕಾರ್ಯಕ್ಕೆ ಮುಕ್ತ ಕಂಠದಿಂದ ಪ್ರಶಂಸೆ ವ್ಯಕ್ತಪಡಿಸಿದರು.
ಮದರಂಗಿ ಮಂಟಪದಲ್ಲಿ ತನ್ನ ಅರ್ಥಗರ್ಭಿತವಾದ ಮಾತುಗಳ ಸರಮಾಲೆಯನ್ನು ಪೋಣಿಸಿ ಮಾತಿನ ಮಂಟಪವನ್ನೇ ಸೃಷ್ಟಿಸಿ ಶಿಸ್ತುಬದ್ಧ ವಾದ ಈ ಕಾರ್ಯಕ್ರಮವನ್ನು ತುಳುನಾಡ ಸ್ವರ ಮಾಣಿಕ್ಯ ದಿನೇಶ್ ಸುವರ್ಣ ರಾಯಿ ಯವರು ಅಂದವಾಗಿ ನಿರೂಪಿಸಿದರು..