ಕಡಬ :- ದಿನಾಂಕ 19 ಜೂನ್ 2022 ರಂದು ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ”ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎನ್ನುವ ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ , ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತ ಬಂದಿದೆ. ಆದ್ದರಿಂದ ನಾರಾಯಣ ಗುರು ತತ್ವ ಪ್ರತಿಯೊಬ್ಬನಿಗೂ ತಿಳಿಯಬೇಕು, ಪ್ರತಿ ಮನೆಗೂ ತಲುಪಬೇಕು ಎನ್ನುವ ದೃಷ್ಟಿಯಿಂದ “ಗುರು ಸ್ಫೂರ್ತಿ – 2022” ಎನ್ನುವ ಕಾರ್ಯಕ್ರಮವನ್ನು ಕಡಬ ತಾಲೂಕಿನ ಕೊಂಬಾರು ಗ್ರಾಮದ ಕಲ್ಲುಗುಡ್ಡೆ ಜನಾರ್ದನ ಪೂಜಾರಿ ಇವರ ಮನೆಯಲ್ಲಿ ಘಟಕದ ಭಜನಾ ತಂಡದಿಂದ ಭಜನಾ ನಾಮ ಸಂಕೀರ್ತನೆಯೊಂದಿಗೆ ಆರಂಭಗೊಂಡಿತ್ತು.
ಗುರುಗಳ ತತ್ವ, ಸಂದೇಶ ಮತ್ತು ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆಗಳೇನು ಎಂಬುವುದರ ಕುರಿತು ಯುವ ಸಿಂಚನ ಪತ್ರಿಕಾ ಕಾರ್ಯದರ್ಶಿ , ಯುವ ಬರಹಗಾರರು ಹಾಗೂ ರಂಗಭೂಮಿ ಕಲಾವಿದರು ಆದ ರಾಜೇಶ್ ಬಲ್ಯ ಇವರು ಮಾಹಿತಿಯನ್ನು ನೀಡಿದರು. ಮನೆಯ ಯಜಮಾನರಾದ ಜನಾರ್ದನ ಪೂಜಾರಿರವರು ಬ್ರಹ್ಮ ಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ , ನನ್ನ ಮನೆಯಲ್ಲಿ ಈ ಕಾರ್ಯಕ್ರಮ ಮಾಡುವುದು ಬಹಳ ಸಂತೋಷ, ಯುವವಾಹಿನಿ ಮತ್ತು ಬಿಲ್ಲವ ಕೊಂಬಾರು ಗ್ರಾಮ ಸಮಿತಿಗೆ ಧನ್ಯವಾದ ಸಲ್ಲಿಸಿದರು.
ಈ ಸಂದರ್ಭದಲ್ಲಿ ಬಿಲ್ಲವ ಗ್ರಾಮ ಸಮಿತಿ ಕೊಂಬಾರು ಇಲ್ಲಿ ಸೇವೆ ಸಲ್ಲಿಸಿದ ಮಾಯಿಲಪ್ಪ ಕೊಂಬಾರು ಇವರಿಗೆ ಹಾಗೂ ಬಿಲ್ಲವ ಸಂಘ ಇದರ ಕಡಬ ವಲಯ ಸಂಚಾಲಕರಾದ ಜಯಪ್ರಕಾಶ್ ದೋಳ ಇವರನ್ನು ಘಟಕ ಹಾಗೂ ಬಿಲ್ಲವ ಗ್ರಾಮ ಸಮಿತಿ ಕೊಂಬಾರು ಇದರ ಪರವಾಗಿ ಗೌರವಿಸಲಾಯಿತು. ವೇದಿಕೆಯಲ್ಲಿ ಶಿವಪ್ರಸಾದ್ ನೂಚಿಲ ಸಂಘಟನಾ ಕಾರ್ಯದರ್ಶಿ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು , ನಿತಿನ್ ಕುಮಾರ್ , ಅಧ್ಯಕ್ಷರು ಬಿಲ್ಲವ ಗ್ರಾಮ ಸಮಿತಿ, ಕೊಂಬಾರು, ಘಟಕದ ಸಹ ಸಂಘಟನಾ ಕಾರ್ಯದರ್ಶಿ ನವೀನ್ ಕುಮಾರ್ , ನಾರಾಯಣ ಗುರು ತತ್ವ ಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ರವಿ ಮಾಯಿಲ್ಗ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು, ಗ್ರಾಮ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು. ನಿಶ್ಮಿತಾ ಅಮೈ ಪ್ರಾರ್ಥಿಸಿ, ಜೊತೆ ಕಾರ್ಯದರ್ಶಿ ಸರಿತಾ ಉಂಡಿಲ ಸ್ವಾಗತಿಸಿ, ಘಟಕದ ಕಾರ್ಯದರ್ಶಿ ಕೃಷ್ಣಪ್ಪ ಅಮೈ ವಂದಿಸಿ, ಮಹಿಳಾ ನಿರ್ದೇಶಕಿ ಅನಿತಾ ಕುತ್ಯಾಡಿ ನಿರೂಪಿಸಿದರು.