08-03-2017, 11:00 AM
ಹೆಣ್ಣು ನೋಡಲು ಗಂಡಿನ ಕಡೆಯವರು ಬರುತ್ತಾರೆ ಎಂದರೆ ಸಾಕು ಹೆಣ್ಣು ಹೆತ್ತವರಿಗೆ ಒಂದು ರೀತಿಯ ಆತಂಕ ಮತ್ತು ಸಂಭ್ರಮ. ಸೂರ್ಯ ಮೂಡುವ ಮುನ್ನವೆ ಎದ್ದು ಮನೆಯನ್ನು ಒಪ್ಪಓರಣ ಮಾಡಿಟ್ಟುಕೊಳ್ಳುತ್ತಾರೆ. ಎಲ್ಲವನ್ನೂ ಅಚ್ಚುಕಟ್ಟಾಗಿ ಸಿದ್ಧಪಡಿಸುತ್ತಾರೆ. ಶಿಸ್ತು, ರುಚಿಕಟ್ಟಾದ ಅಡುಗೆ, ಒಪ್ಪವಾಗಿರುವ ಮನೆ, ಅಲಂಕಾರ ಗೊಂಡಿರುವ ಹೆಣ್ಣುಮಗಳು ಸಂಭ್ರಮದ ಓಡಾಟ ಇದಕ್ಕೆಲ್ಲ ಕೊರತೆಯೇ ಕಂಡು ಬರುವುದಿಲ್ಲ. ಇದು ಒಂದು ಮನೆಯ ಕಥೆಯಾದರೆ ಇನ್ನು ಸಾಮೂಹಿಕ ವಧು-ವರಾನ್ವೇಷಣೆ ನಡೆಸಿದರೆ ಹೇಗಿರಬಹುದು? ಈ ಕಲ್ಪನೆಯೇ ಒಂದು ಅದ್ಭುತ ಅನಿಸುವುದಿಲ್ಲವೇ? ಏನೋ ಸಮ್‌ಥಿಂಗ್ ಸ್ಪೇಷಲ್ […]
Read More
24-02-2017, 8:51 AM
ಒಂದೇ ಸಸಿಯನ್ನು ಬೇರೆ ಬೇರೆ ನೆಲದಲ್ಲಿ ನೆಟ್ಟಾಗ ಅದರ ಫಲದ ಉತ್ಪಾದನೆ ಮತ್ತು ಸಸಿಯ ಬೆಳವಣಿಗೆ ಬೇರೆ ಬೇರೆಯಾಗಿ ಇರುವುದನ್ನು ಕಾಣುತ್ತೇವೆ. ಅಲ್ಲದೆ ಕೃಷಿಕರು ಈ ಸಲ ಇಂತಹ ಬೆಳೆಗೆ ಯೋಗ್ಯವಾಗಿದೆ ಎನ್ನುತ್ತಾರೆ. ಕಾರಣ ಕೇಳಿದರೆ ಈ ಸಲ ಮರಳು ಮಿಶ್ರಿತ, ಕೆಂಪು ಬಣ್ಣದ್ದು ಕಪ್ಪು ಬಣ್ಣದ್ದು ಎಂದು ವಿವರಿಸುತ್ತಾರೆ. ಇದರಿಂದ ನಮಗೆ ಸ್ಪಷ್ಟವಾಗುವುದೆಂದರೆ ಈ ಭೂಮಿ ಈ ಪರಿಸರ ಕೂಡ ಸಸಿಯ ಬೆಳವಣಿಗೆಗೆ ಅಗತ್ಯವಾಗಿದೆ ಎನ್ನುವುದು ಈ ಮಾತನ್ನು ಮನುಷ್ಯರಿಗೂ ಅನ್ವಯಿಸಬಹುದಾಗಿದೆ. ದೇಶದಲ್ಲಿ ಬೇರೆ ಬೇರೆ […]
Read More
19-02-2017, 7:17 AM
ಸಮಾಜದಲ್ಲಿ ಅಧರ್ಮ ತುಂಬಿದ್ದ ಸಂದರ್ಭ ಶಸ್ತ್ರಬಲದ ಮೂಲಕ ಧರ್ಮ ಸ್ಥಾಪನೆ ಮಾಡಿದ ಕೋಟಿ ಚೆನ್ನಯರು ರಾಮ-ಲಕ್ಷ್ಮಣರಿಗೆ ಸಮಾನರು ’ವಸುಧೈವ ಕುಟುಂಬಕಂ’ ಸಂದೇಶ ಸಾರಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿಗಳ ಆಶಯದಂತೆ ಶಾಂತಿ ನೆಲೆಸಬೇಕಾದರೆ ಧರ್ಮ ಕ್ಷೇತ್ರಗಳ ಉನ್ನತಿಯಾಗಬೇಕು. ಕೋಟಿ-ಚೆನ್ನಯರು, ಮಾತೆ ದೇಯಿ ಬೈದ್ಯೆತಿಯ ಕ್ಷೇತ್ರ ಅಭಿವೃದ್ಧಿಗೆ ಕೈಂಕರ್ಯ ತೊಡುವ ಮೂಲಕ ಸುವರ್ಣಾಕ್ಷರದಲ್ಲಿ ಬರೆದಿಡುವ ಸಂದರ್ಭ ಸೃಷ್ಟಿಯಾಗಿದೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಮಠಾಧೀಶ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಮಾತೆ ದೇಯಿ ಬೈದ್ಯೆತಿ ಮತ್ತು ಕೋಟಿ-ಚೆನ್ನಯರ ಮೂಲಸ್ಥಾನವಾಗಿರುವ […]
Read More
19-02-2017, 7:13 AM
ಫೆ. 19 ರಂದು ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರವಾದ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್‌ನಲ್ಲಿ ಮೂಲಸ್ಥಾನ ಪುನರುತ್ಥಾನದ ಶಿಲಾನ್ಯಾಸ ಕಾರ್ಯಕ್ರಮ ಜರಗಿತು. ಕ್ಷೇತ್ರದ ಆದಿ ದೈವ ಧೂಮಾವತಿ ದೈವಸ್ಥಾನ, ಕುಪ್ಪೆ ಪಂಜುರ್ಲಿ ದೈವಸ್ಥಾನ, ಬೆರ್ಮೆರ್ ಗುಂಡ, ಗುರು ಸಾಯನ ಬೈದ್ಯರು-ಮಾತೆ ದೇಯಿ ಬೈದ್ಯೆತಿ ಧರ್ಮ ಚಾವಡಿ, ಕೋಟಿ-ಚೆನ್ನಯ ಮೂಲಸ್ಥಾನ ಗರಡಿ, ಮಾತೆ ದೇಯಿ ಬೈದ್ಯೆತಿ ಮಹಾಸಮಾಧಿ, ಚಾರಿತ್ರಿಕ ಸರೋಳಿ ಸೈಮಂಜ ಕಟ್ಟೆ ಮೊದಲಾದ ಶ್ರದ್ಧಾ ಬಿಂದುಗಳ ಪುನರುತ್ಥಾನಕ್ಕೆ ಶಿಲಾನ್ಯಾಸ ಕಾರ್ಯಕ್ರಮ […]
Read More
15-02-2017, 5:30 AM
ಪ್ರೀತಿಯ ವಾಚಕರೇ, ಅನುಭವ ಮತ್ತು ಛಲ ಮನುಷ್ಯನ ಭವಿಷ್ಯವನ್ನು ರೂಪಿಸುತ್ತದೆ. ಇದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರವಲ್ಲ. ಸಿಬ್ಬಂದಿ ಇರುವ ಎಲ್ಲಾ ಸಂಸ್ಥೆಗಳಿಗೂ ಕೂಡ ಅನ್ವಯಿಸುತ್ತದೆ. ಯಾವ ಸಂಸ್ಥೆಯಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಸಿಬ್ಬಂದಿ ಇರುತ್ತದೋ ಅಂತಹ ಸಂಸ್ಥೆ ಯಶಸ್ವಿಯಾಗುತ್ತದೆ. ಯಾವ ಸಂಸ್ಥೆಯ ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಕಾರಾತ್ಮಕ ದುಡಿಮೆ ಇರುವುದಿಲ್ಲವೋ, ಕೇವಲ ಸಂಬಳಕ್ಕಾಗಿ ಮಾತ್ರ ಕಾದು ನೋಡುತ್ತಾರೋ ಅಂತಹ ಸಂಸ್ಥೆ ಹೇಳ ಹೆಸರಿಲ್ಲದೆ ನಿರ್ಣಾಮವಾಗಿ ಹೋಗುತ್ತದೆ. ಇದಕ್ಕೆ ಕಾರಣ ದುಡಿತದ ಹಿಂದಿರುವ ಜವಾಬ್ದಾರಿಯ ಕೊರತೆ. ನಮ್ಮ ಜನರಲ್ಲಿ […]
Read More
01-02-2017, 12:45 PM
“ಓಂ ನಮೋಃ ನಾರಾಯಣ ಪರಮ ಗುರುವೇ ನಮಃ”. ಬ್ರಹ್ಮಶ್ರೀ ನಾರಾಯಣ ಗುರುಗಳ ಈ ನಾಮ ಸ್ಮರಣೆ ಮುಗಿಲು ಮುಟ್ಟುವಂತಿದ್ದುದು ಶಿವಗಿರಿಯ ಮಹಾತೀರ್ಥಾಟನಾ ಉತ್ಸವದಲ್ಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಪವಿತ್ರ ಭೂಮಿ ವರ್ಕಳದ ಶಿವಗಿರಿಯ ವೈಭವದ ದೃಶ್ಯ ಕಣ್ಮನ ಸೆಳೆಯುವುದು, ಭಕ್ತಸಾಗರವೇ ಹರಿದುಬರುವ ಶಿವಗಿರಿಯ ತಿರ್ಥಾಟನಾ ಸಂದರ್ಭದಲ್ಲಿ. ಇದಕ್ಕೆ ಸಾಕ್ಷೀಭೂತವಾಗಿದ್ದು ಇತ್ತೀಚೆಗೆ ನಡೆದ 84 ನೇ ಶಿವಗಿರಿ ತಿರ್ಥಾಟನೆಯಲ್ಲಿ ಪಾಲ್ಗೊಂಡ ಮಂಗಳೂರು ಯುವವಾಹಿನಿ ಘಟಕದ ತಂಡ. ಹೌದು, ಸೇವಾ ಮನೋಭಾವನೆಯ ಮನಸಂಕಲ್ಪದಿಂದ ಹಾಗೂ ಶಿವಗಿರಿಯ ತೀರ್ಥಾಟನಾ ಉತ್ಸವವನ್ನು ನೋಡಿ […]
Read More
01-02-2017, 11:31 AM
ಆತ್ಮೀಯರೇ, ಸ್ವರ್ಗದ ಸುಖವನ್ನಾಗಲೀ ನರಕದ ಯಾತನೆಯನ್ನಾಗಲೀ ಅನುಭವಿಸಿ ಬಂದು ಹೇಳಿದವರಿಲ್ಲ, ಕೆಲವು ವಿಚಾರವಾದಿಗಳು ಸ್ವರ್ಗ ಮತ್ತು ನರಕಗಳು ನಾವು ಬದುಕಿರುವಾಗಲೇ ಸಿಗುತ್ತದೆ ಎನ್ನುತ್ತಾರೆ. ಆದರೂ ಪ್ರಪಂಚದ ಎಲ್ಲಾ ಧರ್ಮೀಯರು ಅವರವರ ಭಾಷೆ ಸಂಸ್ಕೃತಿಗಳಿಗೆ ಅನುಗುಣವಾಗಿ ನಂಬಿಕೊಂಡು ಬಂದಿದ್ದಾರೆ. ಏನೇ ಆಗಲಿ ಇದೆಲ್ಲವನ್ನು ಮೌನವಾಗಿ ಅನುಕರಿಸುವ ನಾವುಗಳು ಜಗತ್ತಿನಲ್ಲಿಯೇ ಶ್ರೇಷ್ಠ ಸಂದೇಶಗಳನ್ನು ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಬೇಕಾಗಿದೆ. ಗುರುಗಳು ಅದೆಷ್ಟು ಉತ್ತಮವಾದ ಭೋದನೆ ಹಾಗೂ ತತ್ವಾದರ್ಶಗಳನ್ನು ನೀಡಿದ್ದಾರೆ. ಎಲ್ಲವನ್ನು […]
Read More
01-02-2017, 11:28 AM
ಈ ಜಗತ್ತೆಂಬ ಮಾಯಲೋಕವು ಶತಕೋಟಿ ಜೀವರಾಶಿಗಳಿಂದ ತುಂಬಿ ತುಳುಕುತ್ತಿದ್ದರೂ, ಈ ಎಲ್ಲಾ ಜೀವರಾಶಿಗಳಿಗಿಂತ ಶ್ರೇಷ್ಠವಾದ ಹಾಗೂ ಭಿನ್ನವಾದ ಜೀವಿ ಮಾನವ. ಆಲೋಚನಾ ಶಕ್ತಿ ಮನುಷ್ಯ ಪ್ರಾಣಿಗೆ ಬಿಟ್ಟು ಇನ್ನಾವುದೇ ಪ್ರಾಣಿಗಳಿಗಿಲ್ಲ ಎಂಬ ಸತ್ಯ ನಮಗೆಲ್ಲಾ ತಿಳಿದಿದೆ. ಉಳಿದ ಪ್ರಾಣಿಗಳಿಗಿಂತ ತನ್ನ ಭಾವನೆಗಳನ್ನು ಇತರರೊಂದಿಗೆ ಭಾಷೆಯ ಮೂಲಕ, ಮಾತಿನಿಂದ ಸಂವಹನ ರೂಪದಲ್ಲಿ ವ್ಯಕ್ತಪಡಿಸುವ ವಿಶೇಷ ಸಾಮರ್ಥ್ಯ ಗಳಿಸಿದಂತ ಮಾನವ ವರ್ಗದಲ್ಲಿ ಜನಿಸಿದ ನಾವೇ ಧನ್ಯರು. ಪರಶುರಾಮ ಸೃಷ್ಠಿಯ ಈ ತುಳುನಾಡಿನಲ್ಲಿ ಬೈದ್ಯ ಅಂದರೆ ವೈದ್ಯ, ಬಿರುವ ಅಂದರೆ ವೀರ […]
Read More
10-10-2016, 5:09 AM
ಬಹುಶಃ ಬಲು ತಡವಾಗಿ ಒಂದು ಪ್ರಶ್ನೆ ನನ್ನ ಮನದ ಮುಂದೆ ಸುಳಿದಾಡುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಅವಘಡಗಳಿಗೆ ಬಲಿಯಾಗುತ್ತಿರುವವರ ನಡುವೆ ಬಿಲ್ಲವ ಯುವ ಸಮುದಾಯದ ಪಾಲು ಅಧಿಕ ಎನ್ನುವುದನ್ನು ನಾವು ಒಪ್ಪಬೇಕಾದ ಸತ್ಯ. ನಾನಾ ಕಾರಣದಿಂದ ಮನೆ ತೊರೆಯುವುದರಿಂದ ಹಿಡಿದು ಜೈಲು ಸೇರುವವರೆಗೆ ನಮ್ಮವರ ಪಾಲು ಹಿರಿದು ಎನ್ನಬಹುದು. ಲೋಕಕ್ಕೆ ಶಾಂತಿ ಮಂತ್ರವನ್ನು ಪ್ರತಿಪಾದಿಸಿದ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ ಆದರ್ಶದಡಿಯಲ್ಲಿ ಜನಿಸಿದ ನಮಗೆ ಅವರ ತತ್ವಾದರ್ಶಗಳೇ ಅರ್ಥವಾಗದೇ ಇರುವುದು ದುರಂತವೇ ಸರಿ. ಲೋಕಕ್ಕೆ ಶಾಂತಿ ಮಂತ್ರ […]
Read More
06-09-2016, 5:31 AM
(ಬ್ರಹ್ಮಶ್ರೀ ನಾರಾಯಣ ಗುರುವರ್ಯರ 162ನೇ ಜಯಂತಿಯ ಸಂದರ್ಭದಲ್ಲಿ ಸಕಾಲಿಕವಾಗಿ ಈ ಲೇಖನ) ಮನುಕುಲದ ಉದ್ಧಾರಕ್ಕಾಗಿ ಜಗತ್ತಿನಲ್ಲಿ ಅನೇಕ ಸಂತರು, ಮಹಾಂತರು, ಶರಣರು, ದಾರ್ಶನಿಕರು, ತತ್ವಜ್ಞಾನಿಗಳು ಅವತರಿಸಿ ತಮ್ಮ ತಪಸ್ಸು, ಚಿಂತನೆ, ಸಾಧನೆಗಳ ಪ್ರಭಾವದಿಂದ ಜನರಲ್ಲಿ ಜಡ್ಡುಗಟ್ಟಿದ್ದ ಮೂಢನಂಬಿಕೆಗಳನ್ನು ನಿವಾರಣೆ ಮಾಡಿದರು. ವೇದ ಉಪನಿಷತ್ತುಗಳ ತವರೂರಾದ ನಮ್ಮ ಭಾರತ ದೇಶದಲ್ಲಿಯೂ ಬುದ್ಧ, ಶಂಕರ, ಚೈತನ್ಯ, ಮಾಧವ, ರಾಮಾನುಜ, ಜಿನ, ಬಸವಣ್ಣ ಮೊದಲಾದ ಮತ ಸ್ಥಾಪಕರೂ ನಾಮದೇವ, ಜ್ಞಾನದೇವ, ತುಕಾರಾಮ, ಕಬೀರ, ಪುರಂದರದಾಸ, ಕನಕದಾಸ ಮೊದಲಾದ ಸಾಧುಸಂತರೂ ಅವರವರ ಕಾಲದಲ್ಲಿ […]
Read More