Yuvavahini

FEB 01, 2017 11.31 AM IST

ಯುವ ಸಿಂಚನ : ಪದ್ಮನಾಭ ಮರೋಳಿ

ಅಧ್ಯಕ್ಷರ ಮಾತು

ಆತ್ಮೀಯರೇ,

ಸ್ವರ್ಗದ ಸುಖವನ್ನಾಗಲೀ ನರಕದ ಯಾತನೆಯನ್ನಾಗಲೀ ಅನುಭವಿಸಿ ಬಂದು ಹೇಳಿದವರಿಲ್ಲ, ಕೆಲವು ವಿಚಾರವಾದಿಗಳು ಸ್ವರ್ಗ ಮತ್ತು ನರಕಗಳು ನಾವು ಬದುಕಿರುವಾಗಲೇ ಸಿಗುತ್ತದೆ ಎನ್ನುತ್ತಾರೆ. ಆದರೂ ಪ್ರಪಂಚದ ಎಲ್ಲಾ ಧರ್ಮೀಯರು ಅವರವರ ಭಾಷೆ ಸಂಸ್ಕೃತಿಗಳಿಗೆ ಅನುಗುಣವಾಗಿ ನಂಬಿಕೊಂಡು ಬಂದಿದ್ದಾರೆ. ಏನೇ ಆಗಲಿ ಇದೆಲ್ಲವನ್ನು ಮೌನವಾಗಿ ಅನುಕರಿಸುವ ನಾವುಗಳು ಜಗತ್ತಿನಲ್ಲಿಯೇ ಶ್ರೇಷ್ಠ ಸಂದೇಶಗಳನ್ನು ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಬೇಕಾಗಿದೆ. ಗುರುಗಳು ಅದೆಷ್ಟು ಉತ್ತಮವಾದ ಭೋದನೆ ಹಾಗೂ ತತ್ವಾದರ್ಶಗಳನ್ನು ನೀಡಿದ್ದಾರೆ. ಎಲ್ಲವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದರೆ ನಾವು ಕೂಡಾ ಬೇರೆ ಬೇರೆ ಕ್ಷೇತ್ರಗಳಲ್ಲಿ ಮಿಂಚುವಂತಹ ವ್ಯಕ್ತಿಗಳಾಗುತ್ತಿದ್ದೆವು. ನಾವು ಎಡವಿದ್ದು ಇಲ್ಲೇ. ಅವರ ತತ್ವಗಳನ್ನು ಅಳವಡಿಸುವ ಬದಲಾಗಿ ಅವರಿಗೆ ಮಂದಿರ ಕಟ್ಟಿ ಪೂಜೆ ಮಾಡಿದೆವು ಹಾಗೂ ಈ ವೈಭವದಲ್ಲೇ ಮೈಮರೆತೆವು. ಗುರುಗಳು ನಿಜವಾಗಿಯೂ ಪೂಜನೀಯರು ಅವರನ್ನು ಪೂಜೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಅವರ ಏನು ಭೋದನೆ, ತತ್ವಾದರ್ಶಗಳಿವೆ ಅವುಗಳನ್ನು ನಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡು ಪೂಜಿಸಿದರೆ ಅದು ನಿಜವಾದ ಭಕ್ತಿಯ ಪೂಜೆಯಾಗುತ್ತದೆ. ಇನ್ನೂ ಕಾಲ ಮಿಂಚಿಲ್ಲ. ನಾವು ಸಮಾಜ ಸೇವೆ ಮಾಡುತ್ತಿದ್ದೇವೆ ಎನ್ನುವ ಭ್ರಮೆ ಸರಿಯಲ್ಲ. ನಾವು ನಮ್ಮ ಋಣದ ಭಾರವನ್ನು ಕಡಿಮೆ ಮಾಡುವಂತಹ ಪ್ರಯತ್ನ ಮಾಡುತ್ತಿದ್ದೇವೆ ಎಂದು ಎಣಿಸಬೇಕು. ಇಂತಹ ಉತ್ತಮ ಸಂದೇಶಗಳನ್ನು ಅನುಷ್ಠಾನ ಮಾಡುತ್ತಾ ವಿದ್ಯೆಗೆ, ಸಂಘಟನೆಗೆ ಮತ್ತು ಸಮಾಜ ಸೇವೆಗೆ ಮಹತ್ವ ಕೊಡೋಣ ಹಾಗೂ ನಮ್ಮ ಸಮಾಜ ಕೂಡಾ ಒಂದು ಮುಂದುವರಿದ ಸಮಾಜವಾಗಿ ನಿರ್ಮಾಣವಾಗುವಂತೆ ಪ್ರಯತ್ನಿಸೋಣ. ನಮ್ಮ ಮಕ್ಕಳಿಗೂ ಒಂದು ಒಳ್ಳೆಯ, ಉನ್ನತ ಶಿಕ್ಷಣವನ್ನು ನೀಡುವುದರೊಂದಿಗೆ ಅವರು ಸ್ಪರ್ಧಾತ್ಮಕ ಯುಗದ ಸ್ಪರ್ಧೆಯಲ್ಲಿ ಉತ್ತೀರ್ಣರಾಗುವಂತೆ ಸಹಕರಿಸೋಣ.

ಕೋ ಹಿ ಭಾರಃ ಸಮರ್ಥಾನಾಂ ಕಿ ದೂರಂ
ವ್ಯವಸಾಯಿನಾಮ್| ಕೋ ವಿದೇಶಃ
ಸುವಿದ್ಯಾನಾಂ ಕಃ ಪರಃ ಪ್ರಿಯವಾದಿನಾಮ್||

ಶಕ್ತಿವಂತರಿಗೆ ಯಾವುದು ಭಾರ? ದುಡಿಯುವವನಿಗೆ ಯಾವುದು ದೂರ? ವಿದ್ಯಾವಂತನಿಗೆ ಯಾವ ದೇಶವಾದರೇನು? ಸವಿ ಮಾತನಾಡುವ ವನಿಗೆ ಪರಕೀಯನಾರು? (ಇಂತವರಿಗೆ ಸಾಧಿಸದಂತಹದೇನು?)

ಐಎಎಸ್, ಐಪಿಎಸ್ ಪ್ರೇರಣಾ ಶಿಬಿರ, ಸ್ನೇಹ ಸಂತೋಷ ಸಮ್ಮಿಲನ ಹಾಗೂ ಕೊಲ್ಯದಲ್ಲಿ ಹೊಸ ಘಟಕವೊಂದನ್ನು ಸ್ಥಾಪಿಸುವ ನೆಲೆಯಲ್ಲಿ ಹಗಲಿರುಳು ಶ್ರಮಿಸುತ್ತಿರುವ ಮಂಗಳೂರು ಘಟಕಕ್ಕೆ ಆತ್ಮೀಯ ವಂದನೆಗಳು, ಗೃಹ ರಕ್ಷಕದಳ ಮತ್ತು ಅಗ್ನಿಶಾಮಕ ದಳದವರಿಂದ ಪ್ರಾತ್ಯಾಕ್ಷಿಕೆಯನ್ನು ಮಾಡಿಸಿದ, ವಧುವರರ ಹೊಂದಾಣಿಕೆ ಕೆಲಸ ಮಾಡುತ್ತಿರುವ ಮತ್ತು ಶಿವಗಿರಿ ಯಾತ್ರೆಯನ್ನು ಕೈಗೊಂಡ ಮಂಗಳೂರು ಮಹಿಳಾ ಘಟಕಕ್ಕೆ ಪ್ರೀತಿಯ ನಮನಗಳು.

ಉಜ್ಜೋಡಿ ಮಹಾಕಾಳಿ ದೈವಸ್ಥಾನಕ್ಕೆ ೫೦ ಕುರ್ಚಿ ವಿತರಣೆ ಹಾಗೂ ಭಜನಾ ಕಾರ್ಯಕ್ರಮ ಮಾಡಿದಲ್ಲದೆ ಮಹಿಳಾ ಘಟಕದ ಗೃಹರಕ್ಷಕ ಮತ್ತು ಅಗ್ನಿಶಾಮಕ ದಳದ ಪ್ರಾತ್ಯಾಕ್ಷಿಕೆಗೆ ಪೂರ್ಣ ಸಹಕಾರ ನೀಡಿದ ಕಂಕನಾಡಿ ಘಟಕಕ್ಕೆ ಅಭಿನಂದನೆಗಳು. ಉಚಿತ ನಾಟಕ ಪ್ರದರ್ಶನ ಮತ್ತು ಸ್ನೇಹ ಮಿಲನ ಕಾರ್ಯಕ್ರಮಗಳನ್ನು ಮಾಡಿದ ಕೂಳೂರು ಘಟಕಕ್ಕೆ ನಲ್ಮೆಯ ನಮನಗಳು. ಶಿವಗಿರಿಗೆ ಪ್ರವಾಸ ಹಾಗೂ ವೈದ್ಯಕೀಯ ಮಾಹಿತಿ ಕೊಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪಣಂಬೂರು ಘಟಕಕ್ಕೆ ಶುಭಾಶಯಗಳು. ವ್ಯಕ್ತಿತ್ವ ವಿಕಸನ ಶಿಬಿರವನ್ನು ಮಾಡಿದ ಹಾಗೂ ಪ್ರತಿ ಆದಿತ್ಯವಾರ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸುತ್ತಿರುವ ಬಜಪೆ ಘಟಕಕ್ಕೆ ವಂದನೆಗಳು, ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ತರಬೇತಿ ಹಾಗೂ ಉಚಿತ ವೈದ್ಯಕೀಯ ಶಿಬಿರ ಮಾಡಿದ ಮೂಲ್ಕಿ ಘಟಕಕ್ಕೆ ಅಭಿನಂದನೆಗಳು. ಪರಿಸರದ ಬಿಲ್ಲವ ಕುಟುಂಬಗಳ ಸರ್ವಕಾರ್ಯವನ್ನು ಮಾಡಿದ ಅಡ್ವೆ ಘಟಕಕ್ಕೆ ಪ್ರೀತಿಯ ನಮನಗಳು. ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪೂರ್ವ ತರಬೇತಿ, ಸೈಂಟ್ ಮೆರೀಸ್ ಐಲೆಂಡ್‌ಗೆ ಪಿಕ್‌ನಿಕ್ ಹಾಗೂ ಬಡಕುಟುಂಬಕ್ಕೆ ಮನೆ ನಿರ್ಮಾಣ ಮಾಡಿ ಕೊಡಲು ಕೆಲಸ ಪ್ರಾರಂಭಿಸಿದ ಹೆಜಮಾಡಿ ಘಟಕಕ್ಕೆ ಆತ್ಮೀಯ ವಂದನೆಗಳು. ಜ್ಯಮ್ ಜ್ಯೂಶ್ ಮತ್ತು ಸ್ವಾಸ್ ತಯಾರಿ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಿದ ಹಳೆಯಂಗಡಿ ಘಟಕಕ್ಕೆ ನಮನಗಳು. ಶಿವಗಿರಿಗೆ ಪ್ರವಾಸ ಕಾರ್ಯಕ್ರಮ ಮಾಡಿದ ಪಡುಬಿದ್ರಿ ಘಟಕಕ್ಕೆ ವಂದನೆಗಳು. ನರಿಮೊಗರು ಗ್ರಾಮ ಸಮಿತಿ ಉದ್ಘಾಟನೆ ಹಾಗೂ ಬೃಹತ್ ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿದ ಹಾಗೂ ಗೆಜ್ಜೆಗಿರಿ ನದಂನ ಬಿತ್ತಲ್‌ನಲ್ಲಿ ನಡೆಯುತ್ತಿರುವ ಕೋಟಿ ಚೆನ್ನಯ ಪುನರುತ್ಥಾನ ಕಾರ್ಯದಲ್ಲಿ ನಿರಂತರವಾಗಿ ಸೇವೆಗೈಯ್ಯುತ್ತಿರುವ ಪುತ್ತೂರು ಘಟಕಕ್ಕೆ ಆತ್ಮೀಯ ಅಭಿನಂದನೆಗಳು. ಶಾಂತಿಗಳನ್ನು ಸನ್ಮಾನಿಸಿ ವಿವಿಧ ಸ್ಪರ್ಧೆಗಳನ್ನು ನಡೆಸುವುದರ ಮೂಲಕ ಪದಗ್ರಹಣ ಕಾರ್ಯಕ್ರಮವನ್ನು ಮಾಡಿದ ಸುರತ್ಕಲ್ ಘಟಕಕ್ಕೆ ಅಕ್ಕರೆಯ ನಮನಗಳು. ’ತಲೆಗೊಂದು ಸೂರು’ ಕಾರ್ಯಕ್ರಮದ ಶಿಲಾನ್ಯಾಸ ಗೈದ ಹಾಗೂ ಮಹಿಳೆಯರಿಗೆ ಸೌಂದರ್ಯ ತರಬೇತಿಯನ್ನು ನೀಡಿದ ಉಡುಪಿ ಘಟಕಕ್ಕೆ ಅಭಿನಂದನೆಗಳು.

ಬಡಕುಟುಂಬಕ್ಕೆ ಸೂರು ನಿರ್ಮಾಣ ಕಾರ್ಯದಲ್ಲಿ ತೊಡಗಿ, ಸಾಮೂಹಿಕ ಕರಸೇವೆಯನ್ನು ಮಾಡಿದ ಬಂಟ್ವಾಳ ಘಟಕದ ಅಧ್ಯಕ್ಷರಿಗೆ ಹಾಗೂ ಸರ್ವ ಸದಸ್ಯರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ.

ನಮಸ್ಕಾರ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!