ಯವಸಿಂಚನ - ಯುವವಾಹಿನಿಯ ಮುಖವಾಣಿ - ಆಗಸ್ಟ್ 2016 - ಆಶಯ -ಬಿ.ತಮ್ಮಯ ಬಂಟ್ವಾಳ

ಯುವಕರು ಮತ್ತು ಪರಿಸರ

ಒಂದೇ ಸಸಿಯನ್ನು ಬೇರೆ ಬೇರೆ ನೆಲದಲ್ಲಿ ನೆಟ್ಟಾಗ ಅದರ ಫಲದ ಉತ್ಪಾದನೆ ಮತ್ತು ಸಸಿಯ ಬೆಳವಣಿಗೆ ಬೇರೆ ಬೇರೆಯಾಗಿ ಇರುವುದನ್ನು ಕಾಣುತ್ತೇವೆ. ಅಲ್ಲದೆ ಕೃಷಿಕರು ಈ ಸಲ ಇಂತಹ ಬೆಳೆಗೆ ಯೋಗ್ಯವಾಗಿದೆ ಎನ್ನುತ್ತಾರೆ. ಕಾರಣ ಕೇಳಿದರೆ ಈ ಸಲ ಮರಳು ಮಿಶ್ರಿತ, ಕೆಂಪು ಬಣ್ಣದ್ದು ಕಪ್ಪು ಬಣ್ಣದ್ದು ಎಂದು ವಿವರಿಸುತ್ತಾರೆ. ಇದರಿಂದ ನಮಗೆ ಸ್ಪಷ್ಟವಾಗುವುದೆಂದರೆ ಈ ಭೂಮಿ ಈ ಪರಿಸರ ಕೂಡ ಸಸಿಯ ಬೆಳವಣಿಗೆಗೆ ಅಗತ್ಯವಾಗಿದೆ ಎನ್ನುವುದು ಈ ಮಾತನ್ನು ಮನುಷ್ಯರಿಗೂ ಅನ್ವಯಿಸಬಹುದಾಗಿದೆ. ದೇಶದಲ್ಲಿ ಬೇರೆ ಬೇರೆ ಪ್ರದೇಶದ ಜನರ ಗುಣ ಸ್ವಭಾವದಲ್ಲಿ ಬದಲಾವಣೆಗಳನ್ನು ಕಾಣುತ್ತೇವೆ. ಕೆಲವು ಕಡೆಯ ಜನರು ಕ್ರೂರತೆ ಕಠಿಣತೆಯಿಂದ ಇದ್ದರೆ ಇನ್ನು ಕೆಲವು ಕಡೆ ಜನ ಮೃದು ಸ್ವಭಾವಿಗಳಾಗಿರುತ್ತಾರೆ.

ಆದುದರಿಂದ ಯುವಕರು ಮತ್ತು ಪರಿಸರ ಒಂದೇ ನಾಣ್ಯದ ಎರಡು ಮುಖಗಳು ಎನ್ನಬಹುದು. ಯಾವ ಯಾವ ಪರಿಸರದಲ್ಲಿ ನಮ್ಮ ಯುವಕರು ಬೆಳೆಯುತ್ತಾರೆಯೋ ಆ ಪರಿಸರದ ಗುಣ ಸ್ವಭಾವಗಳು ಅವರಲ್ಲಿ ನಾವು ಕಾಣಬಹುದಾಗಿದೆ. ಅನೇಕ ಹಿರಿಯರು ಕೆಲವೊಮ್ಮೆ ಮನೆ ಬದಲಾಯಿಸಿ, ತಮ್ಮ ಮಕ್ಕಳ ಭವಿಷ್ಯವನ್ನು ಸರಿಪಡಿಸಿಕೊಂಡ ಉದಾಹರಣೆಗಳೂ ಇದೆ. ಸ್ಥಳ ಮೆಚ್ಚಿ ಕೊಂಡು ಕೊಳ್ಳುವ ಸಂದರ್ಭದಲ್ಲಿ ಆ ಪರಿಸರದ ಬಗ್ಗೆ ತಿಳಿದುಕೊಳ್ಳುವುದನ್ನು ನಾವು ಕಾಣುತ್ತೇವೆ. ಆದುದರಿಂದ ಮಾನವನ ಬದುಕಿನೊಂದಿಗೆ ಪರಿಸರದ ಪ್ರಭಾವ ಇದ್ದೇ ಇದೆ.

ಮಾನವ ಹುಟ್ಟುವುದು ಬದುಕುವುದು ಸಾಯುವುದು ಇವು ಮೂರು ಹಂತಗಳು. “ಹುಟ್ಟು ನಿನ್ನದಲ್ಲ, ಸಾವು ನಿನ್ನದಲ್ಲ! ಬದುಕು ಮಾತ್ರ ನಿನ್ನದು ಅದು ಹಾಳು ಮಾಡಬೇಡ! ನೋಡ ತಮ್ಮ!” ಎಂದು ಹೇಳಿದ್ದಾರೆ. ಹುಟ್ಟುವುದು ಸಾಯುವುದು ನಮ್ಮ ಕೈಯಲ್ಲಿ ಇಲ್ಲ. ಆದರೆ ಹೇಗೆ ಬದುಕಬೇಕು? ಎಂಬುದು ನಮ್ಮ ನಿರ್ಧಾರದಂತೆ ನಡೆಯಬಹುದು. ಈ ಬದುಕನ್ನು ಹಾಳು ಮಾಡುವುದು ಮೂರ್ಖತನವಾಗುತ್ತದೆ. ಮತ್ತೆ ಈ ಬದುಕಿನಲ್ಲಿ ಮೂರು ಹಂತಗಳು 1) ಬಾಲ್ಯ, 2) ಯೌವ್ವನ 3) ವೃದ್ಧಾಪ್ಯ. ಬಾಲ್ಯವನ್ನು ಯೌವನದ ಕಡೆಗೆ ಹೋಗುವ ಗಟ್ಟಿ ದಾರಿಯನ್ನಾಗಿ ಮಾಡಿಕೊಳ್ಳಬೇಕು. ಬದುಕಿನ ಮೊದಲ ಘಟ್ಟ ಇದು ಬಾಲ್ಯ…. ಬದುಕಿನೆಡೆಗೆ ಮುಖ ಮಾಡಿದರೆ ಮುಂದೆ ಬರುವ ಯೌವನ ಮತ್ತೊಮ್ಮೆ ಬಲಿಷ್ಠವಾಗುತ್ತದೆ. ಮುದಿತನ ಬದುಕಿನ ಕೊನೆಯ ಹಂತ. ಇದು ಮೆಲುಕು ಹಾಕುವ ಸಮಯ ಹೊರತು ಬೇರೆಯಲ್ಲ.

ಬದುಕಿನಲ್ಲಿ ಯೌವನ ಎನ್ನುವುದು ಬಹಳ ಪ್ರಮುಖವಾದ ಹಂತ. ಆದುದರಿಂದಲೇ ಯುವಕರನ್ನು ದೇಶದ ಸಂಪತ್ತು. ಸಮಾಜದ ಭಾಗ್ಯ, ಮಾತಾಪಿತೃಗಳ ಪುಣ್ಯ ಎಂದು ಹೇಳುತ್ತಾರೆ. ಇಂತಹ ದೇಶ ಕಟ್ಟುವ ಯುವಕರು ಈ ಸಮಾಜದ ಆಧಾರ ಸ್ತಂಭಗಳು. ಬಾಲ್ಯದ ಬದುಕು ಯೌವನದ ಬದುಕಿಗೆ ಪೂರಕವಾಗಿ ಯೌವನದ ಬದುಕು ವೃದ್ಧಾಪ್ಯದ ಬದುಕಿಗೆ ಪೂರಕವಾಗಿದ್ದರೆ ಮಾತ್ರ ವೃದ್ಧಾಪ್ಯ ಸಂತೋಷದಿಂದ ಕೂಡಿರುತ್ತದೆ. ಯೌವನದ ಪ್ರತಿ ಕ್ಷಣಗಳು ಕೂಡಾ ಅತೀ ಅಮೂಲ್ಯವಾದವುಗಳು. ಅವುಗಳನ್ನು ಹಾಳು ಮಾಡಬೇಡ ಎಂದು ಹಿರಿಯರು ಹೇಳುತ್ತಾರೆ. ಬಾಲಕರಲ್ಲಿ ಮುದುಕರಲ್ಲಿ ಕೈಯಲ್ಲಿ ಶಕ್ತಿ ಇರುವುದಿಲ್ಲ. ಆದರೇ ಶಕ್ತಿ ಕೇಂದ್ರೀತವಾದ ಯುವಕರು ಆ ಶಕ್ತಿಯನ್ನು ಒಳ್ಳೆಯದಕ್ಕೆ ಉಪಯೋಗಿಸಿದಾಗ ದೇಶಕ್ಕೆ, ಸಮಾಜಕ್ಕೆ ಅನುಕೂಲವಾಗುತ್ತದೆ. ಆ ಶಕ್ತಿ ದುರುಪಯೋಗವಾದಾಗ ದೇಶಕ್ಕೆ, ಸಮಾಜಕ್ಕೆ ಆಪತ್ತೇ ಕಾದಿರುತ್ತದೆ.

ಅನೇಕರು ನಮ್ಮ ಯುವಕರ ಬಗ್ಗೆ ಒಳ್ಳೆಯ ಅಭಿಪ್ರಾಯ ಹೊಂದಿಲ್ಲ. ಯಾಕೆಂದರೆ ದಿನಾ ಪತ್ರಿಕೆಯಲ್ಲಿ ನೋಡಿದರೆ ಕೊಲೆ, ಸುಲಿಗೆ, ದರೋಡೆ, ಕಳ್ಳತನ, ಬಲಾತ್ಕಾರದಲ್ಲಿ ತೊಡಗಿರುವುದು ನಾವು ಕಾಣುತ್ತೇವೆ. ಇದರಿಂದಾಗಿ ನಮ್ಮ ಯುವಕರು ಕೆಟ್ಟು ಹೋಗಿದ್ದಾರೆ ಎಂಬ ಭಾವನೆ ನಮ್ಮ ಹಿರಿಯರಿಗೆ ಇದೆ. ಆದರೆ ಶಕ್ತಿಯುತವಾದ ಈ ಯುವಶಕ್ತಿಯನ್ನು ದುಡಿಮೆಗೆ ಹಚ್ಚುವುದಕ್ಕೆ ನಮಗೆ ಸಾಧ್ಯವಾಗಿಲ್ಲ. ದುಡಿಯುವ ಪರಿಸರ ಸೃಷ್ಟಿ ನಾವು ಮಾಡಿಲ್ಲ. ನಮ್ಮ ಯುವಕರು ಸುಮ್ಮನೆ ಮುದುಕರಾಗೆ ಕೂತು ಮೆಲುಕು ಹಾಕಬೇಕೆಂದು ನಾವು ಬಯಸುವುದು ಸರಿಯಲ್ಲ. ಅವರ ಕೈಗೆ ದುಡಿಮೆ ಕೊಟ್ಟಾಗ ಅವರು ಒಳ್ಳೆಯ ಶಕ್ತಿಯಾಗಬಲ್ಲರು. ಕೈಗೆ ಕೆಲಸವಿಲ್ಲ. ಕಿಸೆಯಲ್ಲಿ ಕಾಸಿಲ್ಲ ಇಂತಹ ಪರಿಸರದಲ್ಲಿ ದರೋಡೆ ಗಲಭೆಗಳು ಆಗಿಯೇ ಆಗುತ್ತವೆ. ಇತ್ತೀಚೆಗೆ ಸೈನ್ಯದ ಆಯ್ಕೆಗೆ ಬಂದ 50 ಸಾವಿರ ಯುವಕರು ದಾಂಧಲೆ ಮಾಡಿದ ವಿಚಾರ ನಾವು ಓದಿದ್ದೇವೆ. ಅವರು ಸೈನ್ಯಕ್ಕೆ ಸೇರಲು ಯಾಕೆ ಬಂದರು ತಮಗೂ ದುಡಿದು ಬದುಕಬೇಕೆಂಬ ಆಸೆಯಿಂದ ಬಂದರು ಎನ್ನುವಾಗ ನಮ್ಮ ಯುವಕರ ಬಗ್ಗೆ ನಮಗೆ ಕನಿಕರ ಬರಬೇಕು. ಇಂತಹ ಅನೇಕ ಘಟನೆಗಳು ಅಲ್ಲಿ ಇಲ್ಲಿ ನಡೆಯುತ್ತದೆ. ನನ್ನ ಮಟ್ಟಿಗೆ ಹೇಳುವುದಾದರೆ ಯುವಕರು ಸುಮ್ಮನೆ ಕೂರುವವರಲ್ಲ ಚಟುವಟಿಕೆಯಲ್ಲಿ ಪಂಥವನ್ನು ಸ್ಪರ್ಧೆಯನ್ನು ಎದುರಿಸುವವರು ಅವರಿಗೆ ಅಂತಹ ಒಳ್ಳೆಯ ಪಂಥ, ಸ್ಪರ್ಧೆಗೆ ಅವಕಾಶವಿಲ್ಲದಾಗ ಕಡಿದು ಬರುವುದೇ ಪಂಥ. ಕುಡಿಯುವುದೇ ಸ್ಪರ್ಧೆ ಆಗುತ್ತದೆ. ಇದು ಪರಿಸರದ ಪ್ರಭಾವ. ಆದುದರಿಂದ ಈ ಪರಿಸರವನ್ನು ಬದಲಾಯಿಸಿ ನಮ್ಮ ಯುವಕರಿಗೆ ಕೆಲಸ ನೀಡಿ, ಪಂಥಕ್ಕೆ ಸ್ಪರ್ಧೆಗೆ ಅವಕಾಶ ನೀಡಿದರೆ ಖಂಡಿತ ಯುವಕರು ಒಳ್ಳೆಯವರಾಗುತ್ತಾರೆ. ಅಂತಹ ಶಕ್ತಿ ಚೈತನ್ಯ ಅವರಿಗೆ ಇದೆ. ಅನೇಕ ವರ್ಷಗಳಿಂದ ಯುವಕರೊಂದಿಗೆ ಸಂಘಟನೆಯಲ್ಲಿರುವ ನನಗೆ ಕೆಲವೊಮ್ಮೆ ಆಶ್ಚರ್ಯವಾಗುತ್ತದೆ. ಏಕೆಂದರೆ ಆ ಯುವಕರಲ್ಲಿರುವ ವಿನಯ, ಸೌಜನ್ಯ, ಪ್ರೀತಿ… ಇದು ಎಲ್ಲಿಂದ ಬಂತು? ಹತ್ತು ಜನ ವಿನಯಶೀಲರೊಂದಿಗೆ ಇದ್ದರೆ ವಿನಯ ಬರುತ್ತದೆ. ಹತ್ತು ಜನ ಕೊಲೆಗಡುಕರೊಂದಿಗೆ ಇದ್ದರೆ ಕೇಡಿತನ ಬರುತ್ತದೆ ಎಂಬುದನ್ನು ನಾವು ಮರೆಯಬಾರದು. ಆದುದರಿಂದ ಬದುಕು ನಮ್ಮದು ಅದನ್ನು ನಮ್ಮದಾಗಿಸಿಕೊಳ್ಳಬೇಕು.

ಹುಲ್ಲಾಗು ಬೆಟ್ಟದಡಿ, ಮನೆಗೆ ಮಲ್ಲಿಗೆಯಾಗು| ಬೆಲ್ಲ ಸಕ್ಕರೆಯಾಗು| ದೀನ ದುರ್ಬಲರಿಗೆ| ಎಲ್ಲರೊಳು ಒಂದಾಗು ಮಂಕುತಿಮ್ಮ|| ಎಂಬ ಡಿ.ವಿ.ಜಿ. ಯವರ ಕವನದ ಆಶಯ ನಮ್ಮ ಯುವಕರ ಬಾಳಿನ ಆಶಯವಾಗಬೇಕು. ಹುಲ್ಲಾಗು ಬೆಟ್ಟದಡಿ ಮುಳ್ಳಾಗಬೇಡ, ಮನೆಗೆ ಮಲ್ಲಿಗೆಯಾಗು ದುರ್ನಾತ ನೀಡುವ ವಸ್ತು ಆಗಬೇಡ, ಬೆಲ್ಲ ಸಕ್ಕರೆಯಾಗು ಸಮಾಜಕ್ಕೆ ದುಷ್ಟನಾಗಬೇಡ, ಎಲ್ಲರೊಳು ಒಂದಾಗು ಬೇರೆ ಬೇರೆಯಾಗಬೇಡ ಎಂಬ ಕವಿಯ ಆಶಯ ನಮ್ಮ ಯುವಕರ ಜೀವನದ ಧ್ಯೇಯವಾಗಬೇಕು. ಬೆಟ್ಟದಲ್ಲಿ ಹುಲ್ಲಾಗಿ ಹುಟ್ಟಿದರೆ ದನಕ್ಕೆ ಮೇವಾಗಿ ಬಡವನ ಮನೆಯ ಮಾಡಿನ ಹೊದಿಕೆಯಾಗುತ್ತದೆ. ಮನೆಯಲ್ಲಿ ಹುಟ್ಟಿದರೆ ಮನೆಗೆ ಮಲ್ಲಿಗೆಯಾಗು ಮನೆಗೆ ಕೊಳ್ಳಿಯಾಗಬೇಡ. ಅಂತೆಯೇ ನಮ್ಮ ಯುವಕರು ಎಲ್ಲಿ ಇದ್ದರೂ ಜನಕ್ಕೆ ಉಪಕಾರವಾಗುವಂತೆ ಬದುಕಬೇಕು. “ಪರೋಪಕಾರಂ ಇದಂ ಶರೀರ” ಎಂಬ ಧ್ಯೇಯ ವಾಕ್ಯ ನಮ್ಮ ಯುವಕರದಾಗಲಿ ಎಂದೇ ನಮ್ಮ ಆಶಯ.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ

ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆ

ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಯುವವಾಹಿನಿ (ರಿ) ಮಂಗಳೂರು ಘಟಕದ ವತಿಯಿಂದ ಮಹಿಳಾ ದಿನಾಚರಣೆಯನ್ನು ದಿನಾಂಕ 11-03-2025 ಮಂಗಳವಾರದಂದು ನಗರದ ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಬಹಳ ಅರ್ಥಪೂರ್ಣಾವಾಗಿ ಆಚರಿಸಲಾಯಿತು. ಮುಖ್ಯ ಅತಿಥಿಯಾಗಿ ಆಗಮಿಸಿದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಸೇವಾ ಸಂಘ...

Sunday, 06-04-2025

ಯುವವಾಹಿನಿ (ರಿ) ಮಂಗಳೂರು ಘಟಕದ ಪದಗ್ರಹಣ ಸಮಾರಂಭ

ಸಮಾಜ ಸೇವೆ ಹಾಗೂ ವೈಯಕ್ತಿಕ ಬದುಕಿನಲ್ಲಿ ಸಮನ್ವಯ ಇದ್ದರೆ ಮಾತ್ರ ಯಶಸ್ಸು ಸಾಧ್ಯ ದಿನಾಂಕ 25-2-2025 : ಉರ್ವಸ್ಟೋರ್ ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಘಟಕದ 2025-26 ನೇ ಸಾಲಿನ ನೂತನ ಸದಸ್ಯರ ಪದಗ್ರಹಣ ಸಮಾರಂಭದಲ್ಲಿ ಅಧ್ಯಕ್ಷರಾದ ಶ್ರೀ...

Sunday, 06-04-2025
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ

ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶ ಸಂಪನ್ನ

ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ‌ 29-12-2024 ರಂದು ಸಂಪನ್ನಗೊಂಡಿತು. ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ :...

Sunday, 29-12-2024
ವಿಶುಕುಮಾರ್ ಪ್ರಶಸ್ತಿ ಪ್ರದಾನ‌ ಸಮಾರಂಭ 2024ರ

ಅವಿಸ್ಮರಣೀಯ ದೃಶ್ಯಾವಳಿ

ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋ‌ರ್ ತುಳುಭವನದಲ್ಲಿ ಜರುಗಿದ ವಿಶುಕುಮಾ‌ರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ...

Tuesday, 26-11-2024
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
error: Content is protected !!