Yuvavahini

ಸಿಂಚನ

ಸಂಪಾದಕರ ಮಾತು

ಪ್ರೀತಿಯ ವಾಚಕರೇ, ಅನುಭವ ಮತ್ತು ಛಲ ಮನುಷ್ಯನ ಭವಿಷ್ಯವನ್ನು ರೂಪಿಸುತ್ತದೆ. ಇದು ಕೇವಲ ಒಬ್ಬ ಮನುಷ್ಯನಿಗೆ ಮಾತ್ರವಲ್ಲ. ಸಿಬ್ಬಂದಿ ಇರುವ ಎಲ್ಲಾ ಸಂಸ್ಥೆಗಳಿಗೂ ಕೂಡ ಅನ್ವಯಿಸುತ್ತದೆ. ಯಾವ ಸಂಸ್ಥೆಯಲ್ಲಿ ಸಕಾರಾತ್ಮಕವಾಗಿ ಯೋಚಿಸುವ ಸಿಬ್ಬಂದಿ ಇರುತ್ತದೋ ಅಂತಹ ಸಂಸ್ಥೆ ಯಶಸ್ವಿಯಾಗುತ್ತದೆ. ಯಾವ ಸಂಸ್ಥೆಯ ಸಿಬ್ಬಂದಿಗಳಲ್ಲಿ ಪ್ರಾಮಾಣಿಕತೆ ಮತ್ತು ಸಕಾರಾತ್ಮಕ ದುಡಿಮೆ ಇರುವುದಿಲ್ಲವೋ, ಕೇವಲ ಸಂಬಳಕ್ಕಾಗಿ ಮಾತ್ರ ಕಾದು ನೋಡುತ್ತಾರೋ ಅಂತಹ ಸಂಸ್ಥೆ ಹೇಳ ಹೆಸರಿಲ್ಲದೆ ನಿರ್ಣಾಮವಾಗಿ ಹೋಗುತ್ತದೆ. ಇದಕ್ಕೆ ಕಾರಣ ದುಡಿತದ ಹಿಂದಿರುವ ಜವಾಬ್ದಾರಿಯ ಕೊರತೆ. ನಮ್ಮ ಜನರಲ್ಲಿ […]

Read More

ಹೃದಯಂಗಮ ಸನ್ನಿವೇಶ – ಶಿವಗಿರಿ ತೀರ್ಥಾಟನೆ

“ಓಂ ನಮೋಃ ನಾರಾಯಣ ಪರಮ ಗುರುವೇ ನಮಃ”. ಬ್ರಹ್ಮಶ್ರೀ ನಾರಾಯಣ ಗುರುಗಳ ಈ ನಾಮ ಸ್ಮರಣೆ ಮುಗಿಲು ಮುಟ್ಟುವಂತಿದ್ದುದು ಶಿವಗಿರಿಯ ಮಹಾತೀರ್ಥಾಟನಾ ಉತ್ಸವದಲ್ಲಿ. ಬ್ರಹ್ಮಶ್ರೀ ನಾರಾಯಣ ಗುರುಗಳ ಮಹಾಸಮಾಧಿಯ ಪವಿತ್ರ ಭೂಮಿ ವರ್ಕಳದ ಶಿವಗಿರಿಯ ವೈಭವದ ದೃಶ್ಯ ಕಣ್ಮನ ಸೆಳೆಯುವುದು, ಭಕ್ತಸಾಗರವೇ ಹರಿದುಬರುವ ಶಿವಗಿರಿಯ ತಿರ್ಥಾಟನಾ ಸಂದರ್ಭದಲ್ಲಿ. ಇದಕ್ಕೆ ಸಾಕ್ಷೀಭೂತವಾಗಿದ್ದು ಇತ್ತೀಚೆಗೆ ನಡೆದ 84 ನೇ ಶಿವಗಿರಿ ತಿರ್ಥಾಟನೆಯಲ್ಲಿ ಪಾಲ್ಗೊಂಡ ಮಂಗಳೂರು ಯುವವಾಹಿನಿ ಘಟಕದ ತಂಡ. ಹೌದು, ಸೇವಾ ಮನೋಭಾವನೆಯ ಮನಸಂಕಲ್ಪದಿಂದ ಹಾಗೂ ಶಿವಗಿರಿಯ ತೀರ್ಥಾಟನಾ ಉತ್ಸವವನ್ನು ನೋಡಿ […]

Read More

ಅಧ್ಯಕ್ಷರ ಮಾತು

ಆತ್ಮೀಯರೇ, ಸ್ವರ್ಗದ ಸುಖವನ್ನಾಗಲೀ ನರಕದ ಯಾತನೆಯನ್ನಾಗಲೀ ಅನುಭವಿಸಿ ಬಂದು ಹೇಳಿದವರಿಲ್ಲ, ಕೆಲವು ವಿಚಾರವಾದಿಗಳು ಸ್ವರ್ಗ ಮತ್ತು ನರಕಗಳು ನಾವು ಬದುಕಿರುವಾಗಲೇ ಸಿಗುತ್ತದೆ ಎನ್ನುತ್ತಾರೆ. ಆದರೂ ಪ್ರಪಂಚದ ಎಲ್ಲಾ ಧರ್ಮೀಯರು ಅವರವರ ಭಾಷೆ ಸಂಸ್ಕೃತಿಗಳಿಗೆ ಅನುಗುಣವಾಗಿ ನಂಬಿಕೊಂಡು ಬಂದಿದ್ದಾರೆ. ಏನೇ ಆಗಲಿ ಇದೆಲ್ಲವನ್ನು ಮೌನವಾಗಿ ಅನುಕರಿಸುವ ನಾವುಗಳು ಜಗತ್ತಿನಲ್ಲಿಯೇ ಶ್ರೇಷ್ಠ ಸಂದೇಶಗಳನ್ನು ನೀಡಿದ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಗಳನ್ನು ಆದಷ್ಟು ನಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದೇವೆ ಎನ್ನುವುದನ್ನು ಆತ್ಮಾವಲೋಕನ ಮಾಡಬೇಕಾಗಿದೆ. ಗುರುಗಳು ಅದೆಷ್ಟು ಉತ್ತಮವಾದ ಭೋದನೆ ಹಾಗೂ ತತ್ವಾದರ್ಶಗಳನ್ನು ನೀಡಿದ್ದಾರೆ. ಎಲ್ಲವನ್ನು […]

Read More

ಆತ್ವವಿಶ್ವಾಸ, ಇಂದ್ರಿಯ ನಿಗ್ರಹ ಶಕ್ತಿ ಮತ್ತು ನಮ್ಮ ಸಮಾಜ

ಈ ಜಗತ್ತೆಂಬ ಮಾಯಲೋಕವು ಶತಕೋಟಿ ಜೀವರಾಶಿಗಳಿಂದ ತುಂಬಿ ತುಳುಕುತ್ತಿದ್ದರೂ, ಈ ಎಲ್ಲಾ ಜೀವರಾಶಿಗಳಿಗಿಂತ ಶ್ರೇಷ್ಠವಾದ ಹಾಗೂ ಭಿನ್ನವಾದ ಜೀವಿ ಮಾನವ. ಆಲೋಚನಾ ಶಕ್ತಿ ಮನುಷ್ಯ ಪ್ರಾಣಿಗೆ ಬಿಟ್ಟು ಇನ್ನಾವುದೇ ಪ್ರಾಣಿಗಳಿಗಿಲ್ಲ ಎಂಬ ಸತ್ಯ ನಮಗೆಲ್ಲಾ ತಿಳಿದಿದೆ. ಉಳಿದ ಪ್ರಾಣಿಗಳಿಗಿಂತ ತನ್ನ ಭಾವನೆಗಳನ್ನು ಇತರರೊಂದಿಗೆ ಭಾಷೆಯ ಮೂಲಕ, ಮಾತಿನಿಂದ ಸಂವಹನ ರೂಪದಲ್ಲಿ ವ್ಯಕ್ತಪಡಿಸುವ ವಿಶೇಷ ಸಾಮರ್ಥ್ಯ ಗಳಿಸಿದಂತ ಮಾನವ ವರ್ಗದಲ್ಲಿ ಜನಿಸಿದ ನಾವೇ ಧನ್ಯರು. ಪರಶುರಾಮ ಸೃಷ್ಠಿಯ ಈ ತುಳುನಾಡಿನಲ್ಲಿ ಬೈದ್ಯ ಅಂದರೆ ವೈದ್ಯ, ಬಿರುವ ಅಂದರೆ ವೀರ […]

Read More

ಬಿಲ್ಲವ ಮಹಿಳೆಯರು ಮತ್ತು ಸಂಘಟನೆ

ಬಹುಶಃ ಬಲು ತಡವಾಗಿ ಒಂದು ಪ್ರಶ್ನೆ ನನ್ನ ಮನದ ಮುಂದೆ ಸುಳಿದಾಡುತ್ತಿದೆ. ಬದಲಾಗುತ್ತಿರುವ ಕಾಲಘಟ್ಟದಲ್ಲಿ ಸಾಮಾಜಿಕ ಅವಘಡಗಳಿಗೆ ಬಲಿಯಾಗುತ್ತಿರುವವರ ನಡುವೆ ಬಿಲ್ಲವ ಯುವ ಸಮುದಾಯದ ಪಾಲು ಅಧಿಕ ಎನ್ನುವುದನ್ನು ನಾವು ಒಪ್ಪಬೇಕಾದ ಸತ್ಯ. ನಾನಾ ಕಾರಣದಿಂದ ಮನೆ ತೊರೆಯುವುದರಿಂದ ಹಿಡಿದು ಜೈಲು ಸೇರುವವರೆಗೆ ನಮ್ಮವರ ಪಾಲು ಹಿರಿದು ಎನ್ನಬಹುದು. ಲೋಕಕ್ಕೆ ಶಾಂತಿ ಮಂತ್ರವನ್ನು ಪ್ರತಿಪಾದಿಸಿದ ಮಾನವತೆಯ ಹರಿಕಾರ ಬ್ರಹ್ಮಶ್ರೀ ನಾರಾಯಣಗುರುವರ್ಯರ ಆದರ್ಶದಡಿಯಲ್ಲಿ ಜನಿಸಿದ ನಮಗೆ ಅವರ ತತ್ವಾದರ್ಶಗಳೇ ಅರ್ಥವಾಗದೇ ಇರುವುದು ದುರಂತವೇ ಸರಿ. ಲೋಕಕ್ಕೆ ಶಾಂತಿ ಮಂತ್ರ […]

Read More

ಬುದ್ಧ-ಬಸವ-ನಾರಾಯಣಗುರು

(ಬ್ರಹ್ಮಶ್ರೀ ನಾರಾಯಣ ಗುರುವರ್ಯರ 162ನೇ ಜಯಂತಿಯ ಸಂದರ್ಭದಲ್ಲಿ ಸಕಾಲಿಕವಾಗಿ ಈ ಲೇಖನ) ಮನುಕುಲದ ಉದ್ಧಾರಕ್ಕಾಗಿ ಜಗತ್ತಿನಲ್ಲಿ ಅನೇಕ ಸಂತರು, ಮಹಾಂತರು, ಶರಣರು, ದಾರ್ಶನಿಕರು, ತತ್ವಜ್ಞಾನಿಗಳು ಅವತರಿಸಿ ತಮ್ಮ ತಪಸ್ಸು, ಚಿಂತನೆ, ಸಾಧನೆಗಳ ಪ್ರಭಾವದಿಂದ ಜನರಲ್ಲಿ ಜಡ್ಡುಗಟ್ಟಿದ್ದ ಮೂಢನಂಬಿಕೆಗಳನ್ನು ನಿವಾರಣೆ ಮಾಡಿದರು. ವೇದ ಉಪನಿಷತ್ತುಗಳ ತವರೂರಾದ ನಮ್ಮ ಭಾರತ ದೇಶದಲ್ಲಿಯೂ ಬುದ್ಧ, ಶಂಕರ, ಚೈತನ್ಯ, ಮಾಧವ, ರಾಮಾನುಜ, ಜಿನ, ಬಸವಣ್ಣ ಮೊದಲಾದ ಮತ ಸ್ಥಾಪಕರೂ ನಾಮದೇವ, ಜ್ಞಾನದೇವ, ತುಕಾರಾಮ, ಕಬೀರ, ಪುರಂದರದಾಸ, ಕನಕದಾಸ ಮೊದಲಾದ ಸಾಧುಸಂತರೂ ಅವರವರ ಕಾಲದಲ್ಲಿ […]

Read More

ಏಷ್ಯನ್ ಪವರ್‌ಲಿಫ್ಟಿಂಗ್‌ನ 2016 ರ  ಚಾಂಪಿಯನ್‌ಶಿಪ್ ಸ್ಪರ್ಧೆಯ ಪದಕ ವಿಜೇತೆ ಕು| ಸುಪ್ರೀತಾ ಪೂಜಾರಿ

ಸಾಧಕಿ ಸಾಧಿಸುವ ಛಲ, ನಿರಂತರ ಪರಿಶ್ರಮ, ನಿರ್ದಿಷ್ಟ ಗುರಿ, ಆತ್ಮ ವಿಶ್ವಾಸದೊಂದಿಗೆ ಏನನ್ನಾದರೂ ಸಾಧಿಸಬಹುದೆನ್ನುವುದಕ್ಕೆ ಬಿಲ್ಲವ ಕುವರಿ ಸುಪ್ರೀತಾ ಪೂಜಾರಿ ಒಂದು ನಿದರ್ಶನ. ಪವರ್ ಲಿಫ್ಟಿಂಗ್‌ನಂತಹ ಕಠಿಣ ತರಬೇತಿ ಬೇಡುವ ಕ್ರೀಡೆಯಲ್ಲಿ ಸಾಧನೆಯ ಹಾದಿಯಲ್ಲಿದ್ದಾರೆ ನಮ್ಮ ಹೆಮ್ಮೆಯ ಸುಪ್ರೀತಾ ಪೂಜಾರಿ. ಒಂದೆಡೆ ಚಿಕ್ಕಂದಿನಿಂದಲೇ ಅಂಟಿಕೊಂಡು ಬಂದ ಬಡತನ, ಇನ್ನೊಂದೆಡೆ ಕ್ರೀಡೆಯ ಬಗ್ಗೆ ಆಸಕ್ತಿ, ಇವೆರಡನ್ನೂ ಜೊತೆ ಜೊತೆಯಾಗಿಯೇ ಅನುಭವಿಸಿ ಕೊನೆಗೂ ತಾನು ಅಂದುಕೊಂಡಿದ್ದನ್ನು ಸಾಧಿಸುವ ಹಾದಿಯಲ್ಲಿದ್ದಾರೆ ಈ ನಮ್ಮ ವಿಶಿಷ್ಟ ಸಾಧಕಿ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡು ತಾಯಿಯ […]

Read More

ಹೊಸ ತಲೆಮಾರಿನ ಸವಾಲು, ಸಾಮರ್ಥ್ಯ

ದಿಕ್ಸೂಚಿ ಇತ್ತೀಚೆಗೆ ಪತ್ರಿಕೆಯಲ್ಲಿ ಒಂದು ಲೇಖನ ಪ್ರಕಟವಾಗಿತ್ತು. ಅದರಲ್ಲಿ ಕಾಣಿಸಲಾದ ತಲೆಮಾರುಗಳ ಅಂತರ ವಿಶ್ಲೇಷಣೆ: ’ಹಿಂದೆ ಮೂವತ್ತು ವರ್ಷಗಳ ಕಾಲಾವಧಿಯಲ್ಲಿ ತಲೆಮಾರುಗಳ ಭಿನ್ನತೆ-ವ್ಯತ್ಯಾಸ. ಆದರೆ ಈಗ? ಕೇವಲ ಒಂದು ವರ್ಷದ ಅಂತರದವರೊಳಗೂ ಜನರೇಶನ್ ಗ್ಯಾಪ್-ತಲೆಮಾರು ಅಂತರದ ಮಿಂಚು ಕಾಣಿಸುತ್ತಿದೆ ಎಂಬ ವಿಚಾರ. ಇದು ವಾಸ್ತವವೇ, ಅಸ್ವಾಭಾವಿಕವೇ ಎನ್ನುವುದು ತರ್ಕದ ಪ್ರಶ್ನೆ. ಇಂದಿನ ತಲೆಮಾರಿಗೂ ಹಿಂದಿನ ತಲೆಮಾರಿಗೂ ಸವಾಲುಗಳೇನು, ಇಂದಿನ ಸಾಮರ್ಥ್ಯಗಳೇನು? ನಮ್ಮ ಒಟ್ಟು ಬದುಕೇ ಆಧುನಿಕತೆಯ ಸ್ಥಿತ್ಯಂತರದೊಂದಿಗೆ ಸಾಗಿದೆ. ಬದುಕು ಸದಾ ಚಲಿಸುತ್ತಿರುವುದು ಸಹಜ ಪ್ರಕ್ರಿಯೆ. ಆದರೆ […]

Read More

ಸುಖದ ಪ್ರಸವ – ನಮ್ಮ ಪ್ರವಾಸ

ಪ್ರವಾಸಾನುಭವ ’ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎಂಬ ತತ್ವವನ್ನಿರಿಸಿಕೊಂಡು ಹಲವು ಚಿಕ್ಕ-ದೊಡ್ಡ ಪ್ರವಾಸಗಳನ್ನು ಏರ್ಪಡಿಸುತ್ತ ಬಂದಿರುವ ಯುವವಾಹಿನಿ ಮಂಗಳೂರು ಘಟಕವು ಈ ಬಾರಿ ದಕ್ಷಿಣ ಭಾರತ ಪ್ರವಾಸವನ್ನು ಏರ್ಪಡಿಸಿತ್ತು. 2014 ರಲ್ಲಿ ಉತ್ತರ ಭಾರತ ಮತ್ತು ನೇಪಾಳದ 10 ದಿನಗಳ ಪ್ರವಾಸದಲ್ಲಿ ಭಾಗಿಯಾಗಿದ್ದ ನಾನು 2015 ರ ಉತ್ತರ ಭಾರತ ಪ್ರವಾಸ (ವಾರಣಾಸಿ, ಹೃಷಿಕೇಶ, ಹರಿದ್ವಾರ, ವೈಷ್ಣೋದೇವಿ, ದೆಹಲಿ, ಅಮೃತಸರ್, ವಾಘಾ ಬೋರ್ಡರ್ ಇತ್ಯಾದಿ ಸ್ಥಳಗಳಿಗೆ)ಕ್ಕೆ ಹೋಗಲಾಗಲಿಲ್ಲ. ಈ ಬಾರಿ ದಕ್ಷಿಣ ಭಾರತದ ತಮಿಳುನಾಡು ಮತ್ತು ಕೇರಳದ ಆಯ್ದ […]

Read More

ಚಿಂತನ

ಚಿಂತನ ಗುಣವತಿ ರಮೇಶ್, ಸುರತ್ಕಲ್ ಶ್ರೇಷ್ಠವಾದ ಮಾನವ ಜನ್ಮವನ್ನು ಪಡೆದಿರುವ ಎಲ್ಲರೂ ತಮ್ಮ ಜೀವನ ಸುಖಮಯವಾಗಿರಬೇಕೆಂದು ಹರಸಾಹಸ ಮಾಡುತ್ತಾರೆ. ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ ಎಂಬ ಗಾದೆ ಮಾತಿತ್ತು. ಆದರೆ ಇಂದು ಹುಟ್ಟು ಸಾವಿನ ನಡುವಿನ ಜೀವನದ ಸುಖಕ್ಕಾಗಿ ಪ್ರಪಂಚದಾದ್ಯಂತ ಎಂತೆಂತಹ ಘನಕಾರ್‍ಯಗಳು ನಡೆಯುತ್ತವೆ ಎಂದು ಆಲೋಚಿಸಿದರೆ ಅಬ್ಬಾ ಎಂಥಾ ಕಾಲವಪ್ಪ, ಎಂದೆನಿಸುತ್ತದೆ. ಆದರೆ ನಮ್ಮ ಪೂರ್ವಿಕರು ಹೊಲ, ಗದ್ದೆ, ಗುಡ್ಡ, ತೋಟ ಹೀಗೆ ಬೆವರು ಸುರಿಸಿ ದುಡಿದು, ಇದ್ದದ್ದನ್ನು ತುಂಬು ಕುಟುಂಬದಲ್ಲಿದ್ದ ಎಲ್ಲರೂ ಹಂಚಿಕೊಂಡರು […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 2026ನೇ ಜೂನ್ 14 ಭಾನುವಾರ ಬೆಳಗ್ಗೆ ಗಂಟೆ 9.00 ರಿಂದ
ಸ್ಥಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಅಸೋಸಿಯೇಷನ್ ಆಡಿಟೋರಿಯಂ ವಿಧಾನಸೌಧ ಬಳಿ, ಕಬ್ಬನ್ ಪಾರ್ಕ್ ಬೆಂಗಳೂರು

ಯುವವಾಹಿನಿ (ರಿ) ಬೆಂಗಳೂರು ಘಟಕ

ದಿನಾಂಕ : 2026ನೇ ಜೂನ್ 13 ಶನಿವಾರ ಸಂಜೆ ಗಂಟೆ 6.00 ರಿಂದ
ಸ್ಥಳ : ಮುಲ್ಕಿ , ಬಿಲ್ಲವ ಸಮಾಜ ಸೇವಾ ಸಂಘ(ರಿ)

ಯುವವಾಹಿನಿ (ರಿ) ಮುಲ್ಕಿ ಘಟಕ

ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!