10-01-2026, 1:09 PM
ಮಂಗಳೂರು : ಡಿಜಿಟಲ್ ಯುಗದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆಗಳು, ಸೈಬರ್ ಅಪರಾಧಗಳ ವಿಧಗಳು ಮತ್ತು ಅವುಗಳಿಂದ ರಕ್ಷಿಸಿಕೊಳ್ಳುವ ಮಾರ್ಗಗಳ ಬಗ್ಗೆ ನಾವು ಜಾಗ್ರತರಾಗಬೇಕಿದೆ. ನಶೆಯ ದುಷ್ಪರಿಣಾಮಗಳು ಹಾಗೂ ನಶಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನರ ಪಾತ್ರದ ಮಹತ್ವವನ್ನು ತಿಳಿಯಬೇಕಿದೆ. ಜಾಗೃತಿ, ಜವಾಬ್ದಾರಿ ಮತ್ತು ಸಹಕಾರವೇ ಸುರಕ್ಷಿತ ಹಾಗೂ ಆರೋಗ್ಯಕರ ಸಮಾಜದ ಮೂಲಮಂತ್ರವೆಂದು ಸೈಬರ್ ಕ್ರೈಂ ಪೊಲೀಸ್ ಅಧಿಕಾರಿ ತಿಪ್ಪಾ ರೆಡ್ಡಿ ಇವರು ತಿಳಿಸಿದರು. ಅವರು ದಿನಾಂಕ 10.01.2026 ರಂದು ಮಂಗಳೂರಿನ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಮಹಿಳಾ […]
Read More
12-12-2025, 6:03 AM
ಯುವ ಸಮುದಾಯ ಸಮಾಜಮುಖಿ ಚಿಂತನೆ ಬೆಳೆಸಿಕೊಳ್ಳಬೇಕು” .. ನ್ಯಾಯವಾದಿ ಸಂತೋಷ್ ಕುಮಾರ್. ಯುವಕರು ಸಮಾಜದ ಸಮಸ್ಯೆ, ನೋವುಗಳಿಗೆ ಸ್ಪಂದಿಸುವ ಹಾಗೂ ಹಿರಿಯರನ್ನು ಗೌರವಿಸುವ ಮನೋಭಾವ ಬೆಳೆಸಿಕೊಂಡಾಗ ಆವರ ಮೂಲಕ ಸಂಘಟನೆಗಳ ಉದ್ದೇಶ ಸಾರ್ಥಕವಾಗಬಲ್ಲುದು. ಯುವವಾಹಿನಿ ಸಂಘಟನೆ ತನ್ನ ಸಾಧನೆಗಾಗಿ ರಾಜ್ಯ ಪ್ರಶಸ್ತಿ ಪಡೆದಿರುವುದು ಅಭಿನಂದನಾರ್ಹ ಎಂದು ಉಪ್ಪಿನಂಗಡಿಯ ಖ್ಯಾತ ನ್ಯಾಯವಾದಿ ಶ್ರೀ ಸಂತೋಷ್ ಕುಮಾರ್ ತಿಳಿಸಿದರು. ಅವರು ದಿ.22.11.25 ರಂದು ಬೆಳ್ಳಿಪ್ಪಾಡಿ ಶ್ರೀ ಚಂದ್ರಶೇಖರ ಕೆ ಸನಿಲ್ ರವರ ಮನೆ “ಯಮುನಾ” ದಲ್ಲಿ ನಡೆದ ಘಟಕದ ಮಹಾಸಭೆ […]
Read More
01-12-2025, 2:27 PM
ಘಟಕದ ಆಶ್ರಯದಲ್ಲಿ ದಿನಾಂಕ:02-11-2025 ಆದಿತ್ಯವಾರದಂದು ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದಲ್ಲಿ ಜರಗಿತು. * ತುಳಸಿ ಪೂಜೆಯ ವಿಧಿ ವಿಧಾನಗಳನ್ನು ಗುರು ಮಂದಿರದ ಅರ್ಚಕರಾದ ಹರೀಶ್ ಶಾಂತಿ ಮುಂಬೈ ಇವರ ನೇತೃತ್ವದಲ್ಲಿ ಗುರು ಮಂದಿರದಲ್ಲಿ ನೆರವೇರಿಸಲಾಹಿತು. * ನಂತರ ಸಭಾ ಕಾರ್ಯಕ್ರಮವು ಹೆಜಮಾಡಿ ಬಿಲ್ಲವರ ಸಂಘದ ವಠಾರದಲ್ಲಿ ಪ್ರಾಥನೆಯೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನಿಶಾಂಕ್.ಎಸ್.ಕೋಟ್ಯಾನ್ ರವರು ವಹಿಸಿದ್ದು ಅತಿಥಿ ಗಣ್ಯರನ್ನು ಸ್ವಾಗತಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ […]
Read More
01-12-2025, 2:15 PM
ದಿನಾಂಕ 04-11-2025: ಘಟಕದಲ್ಲಿ ಸೈಬರ್ ವಂಚನೆಯ ಕುರಿತು ಮಾಹಿತಿ ಕಾರ್ಯಾಗಾರ ನೆರವೇರಿತು. ಉರ್ವ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಯಾದ ವೇಣುಗೋಪಾಲ್ ರವರು ಸೈಬರ್ ವಂಚನೆಯ ಕುರಿತು ಮಾತನಾಡಿ ಇಂದಿನ ದಿನಗಳಲ್ಲಿ ಹಿಂದೆ ಇದ್ದ ಅಪರಾಧ ಪ್ರಕರಣಗಳ ಚಿತ್ರಣವೆ ಬದಲಾಗಿದ್ದು ಇಂದು ಪೊಲೀಸ್ ಠಾಣೆಯಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಸೈಬರ್ ವಂಚನೆ ಹಾಗೂ ಡ್ರಗ್ಸ್ ಸೇವನೆಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಾಗಿದೆ. ಸೈಬರ್ ವಂಚನೆ ಪ್ರಕರಣಗಳಲ್ಲಿ ಹೆಚ್ಚಾಗಿ ವಿದ್ಯಾವಂತರೇ ಸಾಮಾಜಿಕ ಜಾಲತಾಣ, ಅಂತರ್ಜಾಲದ ಮೂಲಕ ವಂಚನೆಗೊಳಗಾಗುತ್ತಿದ್ದಾರೆ. ಆದ್ದರಿಂದ ಸಾಮಾಜಿಕ ಜಾಲತಾಣ ಹಾಗೂ […]
Read More
22-10-2025, 3:04 PM
ಘಟಕದಲ್ಲಿ ಹೊಸದಾಗಿ ಸದಸ್ಯರಾಗಿ ಸೇರ್ಪಡೆ ಗೊಂಡ ಸದಸ್ಯರಿಗೆ ಮಾಹಿತಿ ಕಾರ್ಯಕ್ರಮವು ದಿನಾಂಕ 20.07.2025ರ ಆದಿತ್ಯವಾರ ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆಯಿತು. ತಣ್ಣೀರುಪಂತ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಶ್ರೀ ಜಯಾನಂದ ಕಲ್ಲಾಪು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು ನೂತನ ಸದಸ್ಯರುಗಳಿಗೆ ಪ್ರಮಾಣ ವಚನ ಬೋಧಿಸಿದರು. ಕೇಂದ್ರ ಸಮಿತಿಯ ಮಾಜಿ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀ ಅಜಿತ್ ಕುಮಾರ್ ಪಾಲೇರಿ ನೂತನ […]
Read More
22-10-2025, 2:47 PM
ಘಟಕ ಮತ್ತು ಮೂರ್ತೆದಾರರ ಸೇವಾ ಸಹಕಾರಿ ಸಂಘದ ವತಿಯಿಂದ ಪದವಿ ವ್ಯಾಸಂಗ ಮಾಡಿ ಬ್ಯಾಂಕಿಂಗ್ ಉದ್ಯೋಗದ ಆಸಕ್ತಿ ಇರುವ ಆಕಾಂಕ್ಷಿಗಳಿಗಾಗಿ ದಿನಾಂಕ 13.09.2025ರಂದು ಮಾಹಿತಿ ಕಾರ್ಯಕ್ರಮ ನಡೆಸಲಾಯಿತು. ಉಪ್ಪಿನಂಗಡಿ ಸಹಸ್ರ ಕೋಚಿಂಗ್ ಸೆಂಟರ್ ನಲ್ಲಿ ನಡೆದ ಮಾಹಿತಿ ಕಾರ್ಯಕ್ರಮದಲ್ಲಿ ಮಂಗಳೂರಿನ ಸರ್ವಜ್ಞ IAS ಅಕಾಡೆಮಿಯ ಸುರೇಶ್ ಎಂ ಎಸ್ ರವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪ್ಪಿನಂಗಡಿ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ಪಾಲೇರಿ ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ […]
Read More
13-08-2025, 2:28 PM
ಯುವವಾಹಿನಿ (ರಿ ) ಕೊಲ್ಯ ಘಟಕದಲ್ಲಿ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಇವರ ಸಹಕಾರದಲ್ಲಿ ಸೌರ ಶಕ್ತಿ ಜೀವನೋಪಾಯ ಯೋಜನೆಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ತಾ. 12-03-2025 ಕೊಲ್ಯ ನಾರಾಯಣ ಗುರು ಸಭಾ ಭವನದಲ್ಲಿ ನಡೆಯಿತು. ಸೆಲ್ಕೋ ಸೋಲಾರ್ ಪ್ರೈವೆಟ್ ಲಿ. ಇದರ ಸಿಬ್ಬಂದಿ ಶ್ರೀ ವಿನೋದ್ ಸೌರಶಕ್ತಿ ಬಳಕೆ ಬಗ್ಗೆ, ಸೌರ ಶಕ್ತಿ ಜೀವನೋಪಾಯ ಯಂತ್ರಗಳ ಉಪಯೋಗ, ಸ್ವ ಉದ್ಯೋಗಕ್ಕೆ ಯಾವ ಸೌರ ಶಕ್ತಿ ಯಂತ್ರಗಳು ಉಪಯೋಗವಾಗುವುದು ಎಂಬುದರ ಬಗ್ಗೆ ವಿವರಿಸಿದರು. ಘಟಕದ ದ್ವಿತೀಯ ಉಪಾಧ್ಯಕ್ಷರಾದ […]
Read More
04-04-2025, 10:33 AM
ಪ್ರಸ್ತುತ ಸನ್ನಿವೇಶಗಳಿಗೆ ಅಗತ್ಯವಿರುವಂತೆ ಯುವವಾಹಿನಿ ಜಾಲತಾಣ ಬದಲಾವಣೆಗೊಂಡಿದ್ದು ಈ ಬಗ್ಗೆ ಎಲ್ಲಾ ಘಟಕದ ಅಧ್ಯಕ್ಷ ಮತ್ತು ಕಾರ್ಯದರ್ಶಿ ಗಳಿಗೆ ಮಾಹಿತಿ ನೀಡಲಾಯಿತು… ದಿನಾಂಕ 30/03/2025 ರಂದು ಮದ್ಯಾಹ್ನ 2.15 ಕ್ಕೇ ಯುವವಾಹಿನಿ ಸಭಾಂಗನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್ ಎಲ್ಲರನ್ನೂ ಸ್ವಾಗತಿಸಿದರು…ಕೇಂದ್ರ ಸಮಿತಿ ಜಾಲತಾಣ ಸಂಪಾದಕರಾದ ಉದಯ ಕುಮಾರ್ ಕೋಲಾಡಿ ಬದಲಾವಣೆಯ ಅಗತ್ಯತೆಯನ್ನು ತಿಳಿಸಿ ಮುಂದಿನ ದಿನಗಳಲ್ಲಿ ಸದಸ್ಯತನ,ರಶೀದಿ,ರಕ್ತದಾನ ಮತ್ತು ಉದ್ಯೋಗ ದ ಮಾಹಿತಿಯಿಂದಾಗಿ ಎಲ್ಲಾ ಸದಸ್ಯರಿಗೆ ಜಾಲತಾಣ ಒಂದು ಅವಿಭಾಜ್ಯ ಅಗತ್ಯತೆ […]
Read More
20-12-2024, 6:28 AM
ಮಂಗಳೂರು : ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ ಇದರ ವತಿಯಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು ಇದರ ಸಹಕಾರದೊಂದಿಗೆ ಮಲ್ಲಿಗೆ ಕೃಷಿ ತರಬೇತಿ ಕಾರ್ಯಗಾರವು ದಿ : 20.12.2024 ರಂದು ಮಧ್ಯಾಹ್ನ 2:30ಕ್ಕೆ ಯುವವಾಹಿನಿ ಸಭಾಂಗಣ ಊರ್ವ ಸ್ಟೋರ್ ಇಲ್ಲಿ ನಡೆಯಿತು. ಮೊದಲಿಗೆ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮಂಗಳೂರು ತಾಲೂಕು ಇದರ ಕೃಷಿ ಅಧಿಕಾರಿ ಶ್ರೀಯುತ ಮೋಹನ್ ಕುಮಾರ್ ಇವರು ಉಪಸ್ಥಿತರಿದ್ದರು. ಸಂಪನ್ಮೂಲ […]
Read More
28-10-2024, 5:24 AM
ಉಡುಪಿ : ಯುವವಾಹಿನಿ (ರಿ) ಉಡುಪಿ ಘಟಕದ ವತಿಯಿಂದ ವಿಜಿಲೆನ್ಸ್ ಜಾಗೃತಿ ದಿನದ ಅಂಗವಾಗಿ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ಉಡುಪಿ ಟೆಂಪಲ್ ಸಿಟಿ ಲಿಜನ್ ಇವರ ಜಂಟಿ ಆಶ್ರಯದಲ್ಲಿ ದಿನಾಂಕ 28-10-2024 ರಂದು ಸೋಮವಾರ ಮಧ್ಯಾಹ್ನ 2.00 ಗಂಟೆಗೆ ಸ.ಪ.ಪೂ. ಕಾಲೇಜು ಉದ್ಯಾವರದಲ್ಲಿ ಸೈಬರ್ ಕ್ರೈಂ ಮತ್ತು ಲೋಕಾಯುಕ್ತ ಕಾಯಿದೆ ಮಾಹಿತಿ ಕಾರ್ಯಾಗಾರವು ನಡೆಯಿತು. ಪ್ರೌಢ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೂಕಾಂಬಿಕಾ ಎಲ್ಲರನ್ನೂ ಸ್ವಾಗತಿಸಿದರು. ಘಟಕದ ಅಧ್ಯಕ್ಷೆ ಶ್ರೀಮತಿ ಅಮಿತಾಂಜಲಿಯವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಯುವವಾಹಿನಿ (ರಿ) […]
Read More