ಘಟಕಗಳು

ಸದಸ್ಯರ ಪ್ರವಾಸ

ಉಪ್ಪಿನಂಗಡಿ: ಯುವವಾಹಿನಿ(ರಿ.) ಉಪ್ಪಿನಂಗಡಿ ಘಟಕದ ವತಿಯಿಂದ ಬ್ರಹ್ಮಾವರದ ಕಿಂಗ್ ಆಫ್ ಕಿಂಗ್ಸ್ ರೆಸಾರ್ಟ್ ಗೆ ಒಂದು ದಿನದ ಪ್ರವಾಸ ಕಾರ್ಯಕ್ರಮವನ್ನು 26-05-2024ರ ಆದಿತ್ಯವಾರ ಹಮ್ಮಿಕೊಳ್ಳಲಾಗಿತ್ತು. ಪ್ರವಾಸ ಸಂಚಾಲಕರು ಗುಣಕರ ಅಗ್ನಾಡಿಯವರ ಮಾರ್ಗದರ್ಶನದಲ್ಲಿ ಘಟಕದ ಅಧ್ಯಕ್ಷರಾದ ಸೋಮಸುಂದರ್, ಪ್ರವಾಸ ನಿರ್ದೇಶಕರಾದ ನಾಣ್ಯಪ್ಪ ಪೂಜಾರಿ ಮತ್ತು ಕಾರ್ಯದರ್ಶಿ ಅನಿತಾ ಸತೀಶ್ ಇವರುಗಳು ಮುಂದಾಳತ್ವ ವಹಿಸಿಕೊಂಡಿದ್ದರು. ಸದಸ್ಯರುಗಳು ತಮ್ಮ ಕುಟುಂಬದ ಜೊತೆಗೂಡಿ ಒಟ್ಟು 66 ಮಂದಿ ಪ್ರವಾಸಿಗರು ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದಿಂದ ಶುಭ ಲಕ್ಷ್ಮೀ ಹಾಲಿಡೇಸ್ ಲಕ್ಸುರಿ ಬಸ್ಸಿನಲ್ಲಿ ಹೊರಟು, ರೆಸಾರ್ಟ್ […]

Read More

ಮಂತ್ರಾಲಯ ಕ್ಷೇತ್ರ ದರ್ಶನ

ಮಂಗಳೂರು: ಕೆಂಜಾರು – ಕರಂಬಾರು ಘಟಕದ ವತಿಯಿಂದ 2 ದಿವಸದ ಮಂತ್ರಾಲಯ ಕ್ಷೇತ್ರ ದರ್ಶನ ರಾಯರ ಕೃಪೆಯಿಂದ ಯಶಸ್ವಿಯಾಗಿ ನೆರವೇರಿತು. ದಿನಾಂಕ 25-05-2024 ಶನಿವಾರ 3 ಗಂಟೆಗೆ ಬಸ್ ನಲ್ಲಿ ಹೊರಟ ತಂಡ 26-05-24 ಆದಿತ್ಯವಾರ ಬೆಳಿಗ್ಗೆ ಕ್ಷೇತ್ರ ತಲುಪಿತು. ಮೊದಲೇ ಕಾಯ್ದಿರಿಸಿದ ವಸತಿ ಗೃಹಗಳಲ್ಲಿ ಸ್ನಾನ, ಶೌಚಾದಿಗಳನ್ನು ಮುಗಿಸಿ ರಾಯರ ದರ್ಶನ ಪಡೆದು, ಮಂಚಾಲಮ್ಮನಿಗೆ ಕೈ ಮುಗಿದು ಬೆಳಿಗ್ಗೆನ ಉಪಹಾರ ಮುಗಿಸಿ 35 ಅಡಿ ಎತ್ತರದ ಅಭಯಾಂಜನೇಯ ದೇವರಿಗೆ ಕೈ ಮುಗಿದು, ಪಂಚಮುಖಿ ಆಂಜನೇಯನ ದರ್ಶನ ಪಡೆದು, […]

Read More

ಕುಟುಂಬ ಸಮ್ಮಿಲನ

ಮೂಡುಬಿದಿರೆ: ಯುವವಾಹಿನಿಯ ತತ್ವ, ಉದ್ದೇಶಗಳನ್ನು ಸರಿಯಾಗಿ ಅರಿತು ನಮ್ಮ ಘಟಕದಿಂದ ಶಿಕ್ಷಣ ಆರೋಗ್ಯ, ಸಂಘಟನೆಯನ್ನು ಬಲಪಡಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಕಳೆದ ಜನವರಿಯಿಂದ ಸುಮಾರು 4 ಲಕ್ಷ ರೂ. ವೆಚ್ಚದಲ್ಲಿ 13 ಕಾರ್ಯಕ್ರಮಗಳನ್ನು ಮಾಡಿದ್ದೇವೆ. ಪ್ರಸಕ್ತ ಸಾಲಿನಲ್ಲಿ 83 ಹೊಸ ಸದಸ್ಯರು ಯುವವಾಹಿನಿಗೆ ಸೇರ್ಪಡೆಯಾಗಿದ್ಧಾರೆ ಎಂದು ಯುವವಾಹಿನಿ(ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಮೂಡುಬಿದಿರೆ ಘಟಕದ ವತಿಯಿಂದ ಹಂಡೇಲು ದೇವಸ ಮನೆಯಲ್ಲಿ ತುಳುನಾಡ ಸಂಸ್ಕೃತಿಯ ಪುನಾರವಲೋಕನ ಧ್ಯೇಯದೊಂದಿಗೆ […]

Read More

ನೀರಾಟ, ಚೆಂಡಾಟ, ಹಗ್ಗ ಜಗ್ಗಾಟ, ಬಾಲ್ಯದಾಟವಾಡಿ ಕುಣಿದು ಕುಪ್ಪಳಿಸಿದ ಯುವವಾಹಿನಿ(ರಿ.) ಕೊಲ್ಯ ಘಟಕದ ಸದಸ್ಯ ಬಂಧುಗಳು

ಕೊಲ್ಯ: ಯುವವಾಹಿನಿ(ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಒಂದು ದಿನದ ಕುಟುಂಬ ಮಿಲನಕ್ಕೆ 68 ಸದಸ್ಯ ಬಂಧುಗಳ ತಂಡ, ದಿನಾಂಕ 19-05-2024ನೇ ರವಿವಾರದಂದು ಬೆಳಿಗ್ಗೆ 7.30ಕ್ಕೆ ಬ್ರಹ್ಮಶ್ರೀ ನಾರಾಯಣಗುರು ಧ್ಯಾನ ಮಂದಿರದ ಮುಂದೆ ಪ್ರಾರ್ಥನೆಯನ್ನು ಸಲ್ಲಿಸಿ, ಹಿರಿಯರು, ಕಿರಿಯರು, ಮಕ್ಕಳೆಲ್ಲರ ಜೊತೆಗೆ ಬ್ರಹ್ಮಾವರದ ರಿಲ್ಯಾಕ್ಸ್ ಪಾರ್ಕ್ ಗೆ ಬಸ್ಸಿನಲ್ಲಿ ಪ್ರಯಾಣ ಬೆಳೆಸಿದೆವು. ಘಟಕದ ಅಧ್ಯಕ್ಷರು ಪ್ರವಾಸಕ್ಕೆ ಬಂದಿದ್ದ ಸರ್ವ ಬಂಧುಗಳನ್ನೂ ಆತ್ಮೀಯವಾಗಿ ಸ್ವಾಗತಿಸಿದರು. ಪ್ರವಾಸದ ತಾಣ ತಲುಪುವವರೆಗೂ ಬಸ್ಸಿನಲ್ಲಿ ಹಾಡು, ಅಂತ್ಯಾಕ್ಷರಿಗಳ ರಸದೌತಣವನ್ನು ಯುವವಾಹಿನಿ ಬಂಧುಗಳು ಉಣಬಡಿಸಿದರು. ಈ ಗುಂಗಿನಲ್ಲೇ […]

Read More

ಕ್ರಿಕೆಟ್ ಪಂದ್ಯಾಟ

ಮಂಗಳೂರು: ಯುವವಾಹಿನಿ(ರಿ.) ಕುಪ್ಪೆಪದವು ಘಟಕದ ವತಿಯಿಂದ 19-05-2024ನೇ ಆದಿತ್ಯವಾರ ಶ್ರೀ ದುರ್ಗಾ ಕ್ರಿಕೆಟರ್ಸ್ ಸಹಯೋಗದೊಂದಿಗೆ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಉದ್ಘಾಟನೆಯನ್ನು ಘಟಕದ ಅಧ್ಯಕ್ಷರಾದ ಅಕ್ಷಿತ್ ಕುಮಾರ್ ನಡೆಸಿಕೊಟ್ಟರು. ವೇದಿಕೆಯಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ಅರುಣ್ ಕುಮಾರ್, ಕ್ರೀಡಾ ನಿರ್ದೇಶಕರಾದ ನವೀನ್ ಚಂದ್ರ, ಮಾಜಿ ಅಧ್ಯಕ್ಷರಾದ ಅಜಯ್ ಅಮೀನ್, ಮುತ್ತೂರ್ ಗ್ರಾಮ ಪಂಚಾಯತ್ ಸದಸ್ಯರಾದ ಜಗದೀಶ್ ದುರ್ಗಾಕೋಡಿ, ಶ್ರೀ ದುರ್ಗಾ ಕ್ರಿಕೆಟರ್ಸ್ ನ ಅಧ್ಯಕ್ಷರಾದ ಹನೀಫ್ ನೆಲಚ್ಚೀಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. 20 ತಂಡಗಳು ಭಾಗವಹಿಸಿದ್ದವು. 30 ಗಜಗಳ ಅಂಡರ್ ಆರ್ಮ್ ಶೈಲಿಯ, ಲೀಗ್ […]

Read More

ಭಜನಾ ತಂಡದ ಸಾಧನೆ

ಮಂಗಳೂರು: ಸಮಾಜದ ಯುವ ಸಮುದಾಯವನ್ನು ಯಾವುದೇ ದುಶ್ಚಟಗಳಿಂದ ದೂರವಿರಿಸುವ ಜಾಗೃತಿಯ ದೃಷ್ಟಿಯಲ್ಲಿ ಈಗಾಗಲೇ ಹೆಚ್ಚಿನ ಘಟಕಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಅದರಂತೆ ಯುವವಾಹಿನಿ(ರಿ.) ಪಣಂಬೂರು-ಕುಳಾಯಿ ಘಟಕವು ಯುವ ಸಮುದಾಯವನ್ನು ಸಂಸ್ಕಾರದ ಪ್ರಮುಖ ಭಾಗವಾಗಿಸುವ ಭಜನೆಯಲ್ಲಿ ಉತ್ಸುಕರನ್ನಾಗಿಸಿದೆ. ಘಟಕದ ಸದಸ್ಯರು ಹಾಗೂ ಸದಸ್ಯರ ಮಕ್ಕಳನ್ನೊಳಗೊಂಡ ಯುವ ಭಜನಾ ತಂಡ ದಿನಾಂಕ 19-05-2024 ಆದಿತ್ಯವಾರ ಶ್ರೀ ಸಾಯಿ ಪರಿವಾರ್ ಟ್ರಸ್ಟ್(ರಿ.) ತೊಕ್ಕೊಟ್ಟು ಇದರ ಆಶ್ರಯದಲ್ಲಿ ನಡೆದ ತ್ರಿವಳಿ ಜಿಲ್ಲಾ‌ ಮಟ್ಟದ ಕುಣಿತ ಭಜನಾ ಸ್ಪರ್ಧೆ ಸುಗಿತ್ ನಲಿಪುಗ 2024 ದಲ್ಲಿ ದ್ವಿತೀಯ ಬಹುಮಾನವನ್ನು ಪಡೆಯುವುದರಲ್ಲಿ […]

Read More

ಈಶ ಫೌಂಡೇಶನ್ ಕೊಯಂಬತ್ತೂರು ಪ್ರವಾಸ

ಮಂಗಳೂರು: ಯುವವಾಹಿನಿ(ರಿ.) ಕೂಳೂರು ಘಟಕದ ವತಿಯಿಂದ ಈಶ ಫೌಂಡೇಶನ್ ಕೊಯಂಬತ್ತೂರು ಪ್ರವಾಸವನ್ನು ದಿನಾಂಕ 17-05-2024 ರಿಂದ 19-05-2024 ರವರೆಗೆ ಜೊತೆ ಕಾರ್ಯದರ್ಶಿ ಕೀರ್ತನಾ ಇವರ ಸಂಚಾಲಕತ್ವದಲ್ಲಿ ಹಾಗೂ ಸದಸ್ಯರಾದ ತುಳಸಿ ಸುಜೀರ್ ಇವರ ಸಹ ಸಂಚಾಲಕತ್ವದಲ್ಲಿ ಆಯೋಜಿಸಲಾಗಿತ್ತು. ದಿನಾಂಕ 17-05-2024 ರಂದು ರಾತ್ರಿ 10.30 ರ ಸಮಯಕ್ಕೆ ಎಲ್ಲರೂ ಸೆಂಟ್ರಲ್ ರೈಲು ನಿಲ್ದಾಣದ ಬಳಿ ಬಂದು ಸೇರಿ ಅಲ್ಲಿಂದ 11.55 ರ ವೆಸ್ಟ್ ಕೋಸ್ಟ್ ರೈಲಿನಲ್ಲಿ 95 ಜನರ ತಂಡ ಈಶ ಫೌಂಡೇಶನ್ ಪ್ರವಾಸ ಹೊರಟರು. ರಾತ್ರಿ […]

Read More

ಚಿಗುರು ಬೇಸಿಗೆ ಶಿಬಿರದ ಸಮಾರೋಪ

ಕೊಲ್ಯ: ಬೇಸಿಗೆ ಶಿಬಿರಗಳು ಮಕ್ಕಳ ಸೃಜನಾತ್ಮಕ ಚಟುವಟಿಕೆಗಳಿಗೆ ಸಹಕಾರಿಯಾಗಿದೆ. ಮಕ್ಕಳು ಮೊಬೈಲ್, ಟಿವಿಯಿಂದ ಹೊರಗಡೆ ಬಂದು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಹವ್ಯಾಸ ಉತ್ತಮಪಡಿಸಲು ಸಹಕಾರಿಯಾಗಲಿದೆ ಎಂದು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಹರೀಶ್ .ಕೆ. ಪೂಜಾರಿ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೊಲ್ಯ ಘಟಕದ ನೇತೃತ್ವದಲ್ಲಿ, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಕೊಲ್ಯ ಇವರ ಸಹಕಾರದಲ್ಲಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಇವರ ಪ್ರಾಯೋಜಕತ್ವದಲ್ಲಿ 15-05-2014 ರಿಂದ 18-05-2024ರ ವರೆಗೆ ನಾಲ್ಕು ದಿನಗಳ ಕಾಲ […]

Read More

 ಚಿಗುರು ಬೇಸಿಗೆ ಶಿಬಿರ

ಕೊಲ್ಯ: ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ, ಇಂತಹ ಶಿಬಿರಗಳಿಂದ ಮಕ್ಕಳಿಗೆ ಹೊಸ ಚೈತನ್ಯ ಶಕ್ತಿ ದೊರಕುತ್ತದೆ. ಈ ನಿಟ್ಟಿನಲ್ಲಿ ಯುವವಾಹಿನಿ ಕೊಲ್ಯ ಘಟಕದ ಕಾರ್ಯಕ್ರಮ ಅಭಿನಂದನೆಗೆ ಅರ್ಹ ಎಂದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ಧಾರ್ಮಿಕ ಗುರುಗಳಾದ ಡಾ. ಅರುಣ್ ಉಳ್ಳಾಲ್ ಹೇಳಿದರು. ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೊಲ್ಯ ಘಟಕದ ನೇತೃತ್ವದಲ್ಲಿ, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಕೊಲ್ಯ ಇವರ ಸಹಯೋಗದಲ್ಲಿ, […]

Read More

ಮನೆ ಮನೆ ಭಜನೆ

ಮಂಗಳೂರು: ಭಜನೆ ಹಾಗೂ ಭಜಕರಲ್ಲಿ ಮೇಲು ಕೀಲು, ಬಡವ ಬಲ್ಲಿದ, ಬ್ರಾಹ್ಮಣ ದಲಿತ, ಪಂಡಿತ ಪಾಮರ ಎಂಬ ತಾರತಮ್ಯವಿಲ್ಲ. ಒಟ್ಟಿಗೆ ಕುಳಿತು ಸರ್ವ ನಾಮದಲ್ಲಿ ಏಕ ದೇವರನ್ನು ಕಾಣುವುದು ಭಜನೆಯಲ್ಲಿ ಮಾತ್ರ. ದೇವಸ್ಥಾನದಲ್ಲಿ ದೇವರ ಸ್ಥಾನ ಗರ್ಭಗುಡಿಯಾದರೆ, ಭಜನಾ ಮಂದಿರದಲ್ಲಿ ದೇವರ ಸ್ಥಾನ ಭಜಕನ ಹೃದಯದಲ್ಲಿ ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನಾ ಕಾರ್ಯಕ್ರಮದ […]

Read More

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ದಿನಾಂಕ : 16-11-2024
ಸ್ಥಳ : ಯುವವಾಹಿನಿ ಸಭಾಂಗಣ 3ನೇ ಮಹಡಿ, ರಘು ಬಿಲ್ಡಿಂಗ್ ಊರ್ವ ಸ್ಟೋರ್, ಮಂಗಳೂರು

ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕ

ದಿನಾಂಕ : 15-11-2024
ಸ್ಥಳ : ಸಿ. ಎಸ್. ಐ. ಬಾಲಿಕಾಶ್ರಮ, ಮೂಲ್ಕಿ

ಯುವವಾಹಿನಿ (ರಿ.) ಮೂಲ್ಕಿ ಘಟಕ

ದಿನಾಂಕ : 23-11-2024
ಸ್ಥಳ : ಸಂಪಿಗೆ ನಗರ, ಉದ್ಯಾವರ ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 24-11-2024
ಸ್ಥಳ : ನಾಗಪ್ಪ ಕಾಂಪ್ಲೆಕ್ಸ್ , ಎನ್ .ಹೆಚ್-66, ಬಲಾಯಿಪಾದೆ, ಉಡುಪಿ

ಯುವವಾಹಿನಿ (ರಿ) ಉಡುಪಿ ಘಟಕ

ದಿನಾಂಕ : 17-11-2024
ಸ್ಥಳ : ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ, ಹೆಜಮಾಡಿ

ಯುವವಾಹಿನಿ (ರಿ) ಪಡುಬಿದ್ರಿ ಘಟಕ

ಜಾಹೀರಾತುಗಳು

ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ) ಮಂಗಳೂರು ಘಟಕದ ಆತಿಥ್ಯದಲ್ಲಿ

ಅರವಿಪುರದಿಂದ ಓಂಕಾರೇಶ್ವರದವರೆಗೆ ಗ್ರಂಥ ಲೋಕಾರ್ಪಣೆ

ಮಂಗಳೂರು: ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಮಂಗಳೂರು ಘಟಕದ ಆತಿಥ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 170ನೇ ಜಯಂತಿಯ ಪ್ರಯುಕ್ತ ನಾರಾಯಣಗುರುಗಳ ಸ್ವಹಸ್ತದಿಂದ ಹಾಗೂ ಅವರ ನಿಷ್ಠಾವಂತ ಶಿಷ್ಯರಿಂದ ಪ್ರತಿಷ್ಠಾಪಿಸಲ್ಪಟ್ಟ ಪವಿತ್ರ ಕ್ಷೇತ್ರಗಳ ಪರಿಚಯವನ್ನು ಒಳಗೊಂಡಿರುವ, ಡಾ.ಮೀನಾಕ್ಷಿ ರಾಮಚಂದ್ರರಿಂದ ಕನ್ನಡಕ್ಕೆ ಅನುವಾದಿಸಲ್ಪಟ್ಟ ಅರವಿಪುರದಿಂದ...

Saturday, 24-08-2024
ಬಂಟ್ವಾಳದಲ್ಲಿ ಸಂಪನ್ನಗೊಂಡ ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶ

ಹೊಸತನದ ಮೆರುಗು… ಸಮಾವೇಶದ ಮಿನುಗು…

ಯುವವಾಹಿನಿಯ 36 ನೇ ವಾರ್ಷಿಕ ಸಮಾವೇಶವು ಬಂಟ್ವಾಳದ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ದಿನಾಂಕ 24.12.2023 ರಂದು  ಸಂಪನ್ನಗೊಂಡಿತು. ಯುವವಾಹಿನಿಯು ವಿದ್ಯೆ ಉದ್ಯೋಗ ಸಂಪರ್ಕದ ಜೊತೆ ಸಮಾಜದ ಅಭಿವೃದ್ಧಿಗಾಗಿ ರಾಜಕೀಯ ಪ್ರಜ್ಞೆಯನ್ನು ಬೆಳೆಸುವ ಅಗತ್ಯವನ್ನು ಕೂಡ ಹೇಳುತ್ತದೆ ಹಾಗೂ ಕಟ್ಟಕಡೆಯ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ...

Sunday, 24-12-2023
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ

ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್

...

Sunday, 24-12-2023
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು

ಮುಲ್ಕಿಯಲ್ಲಿ ಮೇಳೈಸಿದ ಯುವವಾಹಿನಿಯ 35ನೇ ವಾರ್ಷಿಕ ಸಮಾವೇಶ

  ಮಂಗಳೂರು :- ಕರಾವಳಿ ಕರ್ನಾಟಕದ ಅವಳಿ ಜಿಲ್ಲೆ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಮೂವತೈದು ವರುಷಗಳನ್ನು ಮೆಟ್ಟಿ ನಿಂತು, ಬ್ರಹ್ಮ ಶ್ರೀ ನಾರಾಯಣಗುರುಗಳ ತತ್ವಾದರ್ಶದ ಭದ್ರ ಅಡಿಪಾಯದ ಮೇಲೆ ಸುಭದ್ರ ನೆಲೆ ಕಂಡಿಕೊಂಡಿರುವ ಯುವವಾಹಿನಿ ಸಂಸ್ಥೆಯ 35ನೇ ವಾರ್ಷಿಕ ಸಮಾವೇಶವು 2022...

Sunday, 25-12-2022
ಯುವವಾಹಿನಿ ವಿದ್ಯಾನಿಧಿ ಟ್ರಸ್ಟ್ ಹಾಗೂ ಕೇಂದ್ರ ಸಮಿತಿ, ಮಂಗಳೂರು.

ಆರ್ಥಿಕತೆಯ ಸಂಕಷ್ಟದ ವಿದ್ಯಾರ್ಥಿಗಳಿಗೆ ಯುವವಾಹಿನಿಯ ವಿದ್ಯಾನಿಧಿ ಸಂಜೀವಿನಿಯಾಗಿದೆ : ಪದ್ಮನಾಭ ಮಾಣಿಂಜ

ಮಂಗಳೂರು:- ವಿದ್ಯೆ ನಮ್ಮನ್ನು ಯಾರ ಮತ್ತು ಯಾವುದರ ಹಂಗೂ ಇಲ್ಲದೆ ಅಸಹಾಯಕತೆ ಎನ್ನುವ ಪದವೇ ಇಲ್ಲದೆ ನಮ್ಮನ್ನು ನಾವು ಬೆಳೆಸಿಕೊಳ್ಳಬೇಕು. ಅದಕ್ಕೆ ಬಡತನ, ಆರ್ಥಿಕತೆ, ಯಾವುದೂ ಅಡ್ಡಿ ಬರಬಾರದು. ನನಗೂ ಸಹಾಯ ಮಾಡುವವರಿದ್ದರೆ ನಾನೂ ಕಲಿಯುತ್ತಿದ್ದೆ ಎನ್ನುವ ವಿದ್ಯಾರ್ಥಿ ಸಮೂಹಕ್ಕೆ ಯುವವಾಹಿನಿಯ...

Tuesday, 13-12-2022
error: Content is protected !!